ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

12ನೆಯ ಅಂತರರಾಷ್ಟ್ರೀಯ ಯೋಗ ದಿನಾಚರಣೆ- 2026

ಯೋಗಮಯ ಜೀವನ
ಆನಂದಮಯ ತನುಮನ…
ಆರೋಗ್ಯಮಯ ತನುಮನ …

ಸೂರ್ಯ ನಮಸ್ಕಾರದಿ ದಿನದಾರಂಭ
ದೇಹದಲ್ಲಿ ಚೈತನ್ಯಾರಂಭ  
ಸೂರ್ಯ ಕಿರಣದಂತೆ ಶಕ್ತಿ ಹರಿಯುವುದು
ಎಲ್ಲಾ ಅಂಗಗಳು ಚುರುಕಾಗುವುದು.

ಜೀರ್ಣಕ್ರಿಯೆ ಸುಲಭವಾಗುವುದು
ಬೊಜ್ಜು ಕರಗಿ ದೇಹ ಹಗುರವಾಗುವುದು
ರೋಗನಿರೋಧಕ ಶಕ್ತಿ ಹೆಚ್ಚುವುದು
ತ್ವಚೆಯೂ ಫಳಫಳನೆ ಹೊಳೆಯುವುದು…

ಬಾಲ್ಯದ ಸ್ಮರಣೆ ಬಾಲಾಸನದಿ,
ಸ್ಥಿರತೆ ಬೆಳೆಯುವುದು ವೃಕ್ಷಾಸನದಿ,
ವಿಶ್ರಾಂತಿ ಸಿಗುವುದು ಶವಾಸನದಿ,  
ಶಾಂತಿ ನೆಲೆಸುವುದು ಧ್ಯಾನಾಸನದಿ..

ನಿತ್ಯ ಯೋಗಾಭ್ಯಾಸದಿಂದಲಿ…
ಶಕ್ತಿ ಹರಿಯುವುದು ಉಸಿರಿನಲ್ಲಿ…
ಚೈತನ್ಯ ತುಂಬುವುದು ದೇಹದಲ್ಲಿ ..
ಶಾಂತಿ ನೆಲೆಸುವುದು ಮನದಲ್ಲಿ  ..
ಯೋಗಮಯ ಜೀವನ…
ಆರೋಗ್ಯಮಯ ತನುಮನ..


ಸವಿತಾ ಇನಾಮದಾರ್ 

About The Author

Leave a Reply

You cannot copy content of this page

Scroll to Top