ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಂಗಾರಿನ ಕರಿ ಮುಗಿಲು ಜಲಧಾರೆಯ ಸುರಿಸುತಿದೆ ನೋಡಾ
ಇಳೆಯ ಮೊಗದಿ ನಗೆ ಮೊಗ್ಗು ಬಿರಿದು ಕಂಪು ಹರಡುತಿದೆ ನೋಡಾ

ನೀಲಿ ಆಕಾಶದಿ ನೇಸರ ಮೂಡಿಸಿದ ಹೊಂಬಣ್ಣದ ಹೊನಲು
ಪ್ರಕೃತಿ ಮಡಿಲಲಿ ಮುಂಜಾವು ಪಕ್ಷಿಗಳ ಗಾನ ಕೇಳುತಿದೆ ನೋಡಾ

ಒಲವಿನ ಚೈತ್ರ ಬರುವಿಗೆ ಬನವು ಹಸಿರುಟ್ಟು ಹೂ ಅರಳಿಸಿದೆ
ನಿಸರ್ಗದ ಸೊಬಗು ಪ್ರೇಮಿಯ ಎದೆಯವೀಣೆ  ಮಿಡಿಯುತಿದೆ ನೋಡಾ

ಧಾರಿಣಿಯ ಹೃದಯ ಸೂರ್ಯ ಕೋಪಕೆ ನಲುಗಿ ನರಳುತಿದೆ  ಮೌನದಿ
ಬಿದ್ದ ಮಳೆಯ ರಭಸಕೆ ನದಿಯು ಕಡಲಾಗಿ ಮೊರೆಯುತಿದೆ ನೋಡಾ

ಬೀಸುವ ಸುಳಿಗಾಳಿ ಪಾರಿಜಾತದ  ಪರಿಮಳ ತರುತಿದೆ ಸಂಜೆ
ಇರುಳು ತಿರುಗುವ ತಿರೆಯಲಿ ಚಂದ್ರ ಪ್ರಭೆಯು ಕಾಣುತಿದೆ‌ ನೋಡಾ


About The Author

Leave a Reply

You cannot copy content of this page

Scroll to Top