ಕಾವ್ಯ ಸಂಗಾತಿ
ಡಾ. ದಾನಮ್ಮ ಝಳಕಿ
“ಹಸಿರು ತೇರು”


ಹಸಿರು ತೇರು ಹೊರಟಿದೆ,
ಭುವಿಯೆಲ್ಲ ಹಬ್ಬವಾಗಿದೆ;
ಮರದ ನೆರಳು ಹರಡಿದೆ,
ಮನದೊಳಗೆ ಮುದತಂದಿದೆ.
ಗಿಡವ ನೆಟ್ಟು ಬೆಳಸೋಣ,
ಗಿರಿಯ ಸೊಬಗು ಉಳಿಸೋಣ;
ನದಿಯ ನಗುವು ಕೇಳೋಣ,
ನಾಳೆಯ ಬದುಕು ಕಾಪಾಡೋಣ.
ಎಲೆಯ ನಾದವು ವೀಣೆಯದು,
ಹೂವಿನ ಪರಿಮಳ ಗೀತೆಯದು;
ಹಕ್ಕಿಯ ಕಲರವ ವೇದವದು,
ಪ್ರಕೃತಿಯ ಮಡಿಲೇ ಸ್ವರ್ಗವದು.
ಮಳೆ ಸುರಿಯಲು ಕಾಡಿರಬೇಕು,
ಕಾಡು ಬೆಳೆಯಲು ನಾವಿರಬೇಕು;
ಉಸಿರು ಉಳಿಯಲು ಮರವಿರಬೇಕು,
ಜಗವು ಉಳಿಯಲು ಹಸಿರಿರಬೇಕು.
ಬನ್ನಿ ಎಲ್ಲರು ಕೈಜೋಡಿಸಿ,
ಭೂಮಿತಾಯಿಯ ಪ್ರೀತಿಗೋಸ್ಕರ;
ಹಸಿರು ತೇರನು ಎಳೆಯೋಣ,
ಭವ್ಯ ಭವಿಷ್ಯವ ಕಟ್ಟೋಣ.
ಹಸಿರು ನಮ್ಮ ಉಸಿರಾಗಲಿ,
ಹಸಿರು ನಮ್ಮ ಹೆಸರಾಗಲಿ;
ಹಸಿರು ತೇರು ಸಾಗುತಿರಲಿ,
ಭುವಿಯೆಲ್ಲ ನಗುತಿರಲಿ.
ಡಾ. ದಾನಮ್ಮ ಝಳಕಿ




ಅತ್ತ್ಯುತ್ತಮ ಕವಿತೆ ಅಭಿನಂದನೆಗಳು.