ಕಾವ್ಯ ಸಂಗಾತಿ
ಡಾ.ಗೀತಾ ದಾನಶೆಟ್ಟಿ ಬಾಗಲಕೋಟೆ
“ಒಲುಮೆಯ ಸಾಂಗತ್ಯ”


ಇರಬೇಕು ಒಲುಮೆಯ ಸಾಂಗತ್ಯ
ಮಧುರ ಭಾವಗಳು ಬೆಸೆದು
ಒಲವಿನ ಹೊನಲು ಹರಿಸಲು
ಇರಬೇಕು ಒಲುಮೆಯ ಸಾಂಗತ್ಯ
ಮಾತುಗಳು ನೂರಿದ್ದರೂ
ಮೌನದ ಭಾಷೆ ಅರಿಯಲು
ಇರಬೇಕು ಒಲುಮೆಯ ಸಾಂಗತ್ಯ
ಬಯಕೆಯ ಬಳ್ಳಿಗೆ
ಆಸರೆಯಾಗಿ ನಿಲ್ಲಲು
ಇರಬೇಕು ಒಲುಮೆಯ ಸಾಂಗತ್ಯ
ತಪ್ಪು ಒಪ್ಪುಗಳ ನಡುವೆ
ತಿದ್ದಿ ಸರಿದಾರಿ ತೋರಲು
ಇರಬೇಕು ಒಲುಮೆಯ ಸಾಂಗತ್ಯ
ಪ್ರೀತಿ ಸ್ನೇಹಗಳ ಸಮ್ಮಿಲನ
ಮನದಂಗಳದಿ ಅರಳಲು
ಇರಬೇಕು ಒಲುಮೆಯ ಸಾಂಗತ್ಯ
ಮನದ ಮಧುರ ಮಿಲನಕೆ
ಅಮೃತಧಾರೆ ಹರಿಸಲು
ಇರಬೇಕು ಒಲುಮೆಯ ಸಾಂಗತ್ಯ
ಸಮಸ್ಯೆ ಸವಾಲುಗಳಿಗೆ
ಭರವಸೆ ಬಾಳು ಬೆಳಗಲು
ಇರಬೇಕು ಒಲುಮೆಯ ಸಾಂಗತ್ಯ
ದೂರ ದಾರಿಯ ಪಯಣಕೆ
ಸದಾಕಾಲ ಸಿಹಿ ಸ್ಪರ್ಶ ನೀಡಲು
ಡಾ.ಗೀತಾ ದಾನಶೆಟ್ಟಿ ಬಾಗಲಕೋಟೆ




“ಒಲುಮೆಯ ಸಾಂಗತ್ಯ “ಎಷ್ಟು ಅವಶ್ಯ ಎಂಬುದು ತಮ್ಮ ಕವನದಲ್ಲಿ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಮೇಡಂ.
ಸೂಪರ್ …
ಧನ್ಯವಾದಗಳು ತಮಗೆ