ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಇರಬೇಕು ಒಲುಮೆಯ ಸಾಂಗತ್ಯ
ಮಧುರ ಭಾವಗಳು ಬೆಸೆದು
ಒಲವಿನ ಹೊನಲು ಹರಿಸಲು

ಇರಬೇಕು ಒಲುಮೆಯ ಸಾಂಗತ್ಯ
ಮಾತುಗಳು ನೂರಿದ್ದರೂ
ಮೌನದ ಭಾಷೆ ಅರಿಯಲು

ಇರಬೇಕು ಒಲುಮೆಯ ಸಾಂಗತ್ಯ
ಬಯಕೆಯ ಬಳ್ಳಿಗೆ
ಆಸರೆಯಾಗಿ ನಿಲ್ಲಲು

ಇರಬೇಕು ಒಲುಮೆಯ ಸಾಂಗತ್ಯ
ತಪ್ಪು ಒಪ್ಪುಗಳ ನಡುವೆ
ತಿದ್ದಿ ಸರಿದಾರಿ ತೋರಲು

ಇರಬೇಕು ಒಲುಮೆಯ ಸಾಂಗತ್ಯ
ಪ್ರೀತಿ ಸ್ನೇಹಗಳ ಸಮ್ಮಿಲನ
ಮನದಂಗಳದಿ ಅರಳಲು

ಇರಬೇಕು ಒಲುಮೆಯ ಸಾಂಗತ್ಯ
ಮನದ ಮಧುರ ಮಿಲನಕೆ
ಅಮೃತಧಾರೆ ಹರಿಸಲು

ಇರಬೇಕು ಒಲುಮೆಯ ಸಾಂಗತ್ಯ
ಸಮಸ್ಯೆ ಸವಾಲುಗಳಿಗೆ
ಭರವಸೆ ಬಾಳು ಬೆಳಗಲು

ಇರಬೇಕು ಒಲುಮೆಯ ಸಾಂಗತ್ಯ
ದೂರ ದಾರಿಯ ಪಯಣಕೆ
ಸದಾಕಾಲ ಸಿಹಿ ಸ್ಪರ್ಶ ನೀಡಲು


About The Author

1 thought on “ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ ಅವರ ಕವಿತೆ “ಒಲುಮೆಯ ಸಾಂಗತ್ಯ””

  1. “ಒಲುಮೆಯ ಸಾಂಗತ್ಯ “ಎಷ್ಟು ಅವಶ್ಯ ಎಂಬುದು ತಮ್ಮ ಕವನದಲ್ಲಿ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಮೇಡಂ.
    ಸೂಪರ್ …

Leave a Reply

You cannot copy content of this page

Scroll to Top