Day: January 21, 2023

ಕಸಾಪಕ್ಕೆ ಸಾಹಿತಿಗಳೇ ಸಿಗುತ್ತಿಲ್ಲ-ಎಲ್ ಎಸ್ ಶಾಸ್ತ್ರೀ

ಪ್ರಸ್ತುತ

ಕಸಾಪಕ್ಕೆ ಸಾಹಿತಿಗಳೇ ಸಿಗುತ್ತಿಲ್ಲ

ಎಲ್ ಎಸ್ ಶಾಸ್ತ್ರೀ

ನಿಸ್ವಾರ್ಥತೆಯ ಹಾದಿಯಲ್ಲಿ….ಶಂಕರಾನಂದ ಹೆಬ್ಬಾಳ

ವಿಶೇಷ ಲೇಖನ

ನಿಸ್ವಾರ್ಥತೆಯ ಹಾದಿಯಲ್ಲಿ

ಶಂಕರಾನಂದ ಹೆಬ್ಬಾಳ

ರೋಹಿಣಿ ಯಾದವಾಡಕವಿತೆ-ಸುಳಿ

ಜಗವಿದು ಬಲು ವಿಚಿತ್ರದ ಸುಳಿ
ಬಿಡಿಸಿಕೊಳಲಾಗದ ಬಂಧಿಯ ಭಾವ
ಸತ್ಯ ನಡೆಯಲು ಬಿಡರಿಲ್ಲಿ ಕುಹುಕಿಗಳು
ಕಾಲೆಳೆದು ಬಿಡುವರು ವಿಕೃತಿ ತೋರಿ

ತಪ್ಪು ತಿದ್ದಲ್ಹೋದರೆ ತಪ್ಪಿಗಸ್ತನಾಗಿಸುವರು
ತಪ್ಪುಗಳ ನೋಡಿ ಮೌನಿಯಾಗಿರಬೇಕು
ಅನುಸರಿಸಿ ನಡೆದರೆ ಮಾತ್ರ ನಿನ್ನುಳಿವು
ಇಲ್ಲವಾದರೆ ಬಲಿಯಾಗುವೆ ಸುಳಿಗೆ ಸಿಕ್ಕು

ಸತ್ಯ ನುಡಿದರೂ ನೀನು ಆಡುವರಾಟ
ಇತರರ ಅಸತ್ಯದ ನಡೆ ಬೆಂಬಲಿಸುತ
ಸುತ್ತ ನಡೆವ ಡೊಂಬರಾಟಕೆ ತಾಳ
ಹಾಕುತಲಿದ್ದರೆ ಮಾತ್ರ ಉಳಿಗಾಲ ಇಲ್ಲಿ

ನಡೆ-ನುಡಿ ಒಂದಾಗ ಬೇಕಿಲ್ಲ ಇಲ್ಲಿ
ಅವರಂತೆ ಬಾಲ ಬಡಿದು ನಡೆದಾಗ
ನಿನ್ನೆಲ್ಲ ತಪ್ಪು ಮನ್ನಿಸುವರು ಎಲ್ಲ
ಸುಳಿಯಿಂದ ಪಾರಾಗಿ ಬದುಕುವೆ ಆಗ

ತಿರುಗುಣಿಯಂತೆ ತಿರುಗುವ ಸುಳಿಯಲಿ
ಸಿಲುಕಿಸಿ ಒದ್ದಾಡಿಸುವರು ಮೋಜಿನಲಿ
ಸಮಯ ಸಾಧಕರ ತಿಳಿದು ನಡೆಯಬೇಕು
ತಿರುಗುಣಿಗೆ ಸಿಕ್ಕು ರೂಪ ತಾಳುವ ಮಾಟದಿ.

ಶಿಲ್ಪ ಸಂತೋಷ್ ಕವಿತೆ-ತಲೆದಿಂಬು, ಬಂಧನವಿಲ್ಲದ ಬಂಧು

ಕಾವ್ಯ ಸಂಗಾತಿ

ತಲೆದಿಂಬು, ಬಂಧನವಿಲ್ಲದ ಬಂಧು

ಶಿಲ್ಪ ಸಂತೋಷ್

Back To Top