ಕಾವ್ಯ ಸಂಗಾತಿ
ಮಾಳೇಟಿರ ಸೀತಮ್ಮ ವಿವೇಕ್
ಚುಟುಕುಗಳು
ಲೋಕಾರೂಢಿ ಮಾತು ಸಂತೋಷಕೆ
ಅನಿವಾರ್ಯತೆ ಜಪ ನೆಪ ಮಾತ್ರಕೆ
ಹುಟ್ಟು ಸಾವು ಗ್ರಹಿಸಿದ ಮನಕೆ
ಜೀವನ ಕ್ಷಣಗಳೆಲ್ಲವು ಒಂದು ಕಲಿಕೆ
***
ನಕ್ಷತ್ರವಾಗ ಬಯಸುವವಳು ಹೆಣ್ಣು
ಸಮಚಿತ್ತರು ಕಾಯ್ವರು ಹೆಣ್ಣು ಹೊನ್ನು ಮಣ್ಣು
ಪೊರೆವಂತವರ ಸಂಸ್ಕಾರಕ್ಕವಳೇ ಕಣ್ಣು
ಕೆರಳಿಸುವಂತವರ ಬಾಳಿಗೆ ಅವಳೇ ಹುಣ್ಣು
***
ಸಾಹಿತ್ಯ ಲೋಕ ಇದ್ದಂತೆ ಮಹಾಸಾಗರ
ಬಗೆದಷ್ಟು ಸಿಗುವುದು ನಾನಾ ವಿಚಾರ
ಓದುವನುಭವ ಸುತ್ತಿದಂತೆ ದೊಡ್ಡ ದೊಡ್ಡ ನಗರ
ಗ್ರಂಥಾಲಯವೇ ಸಾಹಿತಿಗಳಿಗೆ ಘನಭಂಡಾರ
**
ಪ್ರಕೃತಿಯಿಂದ ಪ್ರತೀ ದಿನ ಸಿಗುವುದು ಅವಕಾಶ
ತನುಮನವಿದ್ದಾಗಲೇ ಅಂತಹ ಸದಾವಕಾಶ
ಸುಜ್ಞಾನವನ್ನು ನಿರ್ಲಕ್ಷಿಸಿದರೆ ಅರ್ಧದಲ್ಲೇ ವಿಧಿವಶ
ಅರಿವುಗಳಿಸಿ ಮನತೆರೆದು ಜೀವಿಸಿದರೆಲ್ಲವು ಕೈವಶ
***
ಮಾನವನಾಗಿ ಬೆಳೆಸಿಕೊಂಡರೆ ವಿದೇಯತೆ
ಮಾನವೀಯತೆ ಎದ್ದುಕಾಣುತ್ತದೆ,
ಮನುಷ್ಯನಾಗಿ ಅಳವಡಿಸಿಕೊಂಡರೆ
ಸತ್ವಭರಿತ ತತ್ವ
ಮನುಷ್ಯತ್ವ ಎದ್ದು ಕಾಣು-
ಮಾಳೇಟಿರ ಸೀತಮ್ಮ ವಿವೇಕ್
ಮಾಳೇಟಿರ ಸೀತಮ್ಮ ವಿವೇಕ್