ಕಾವ್ಯ ಸಂಗಾತಿ
ದೇವರು.!!!??
ಶ್ರೀಕಾಂತಯ್ಯ ಮಠ
ನನಗೆ ಇನ್ನೂ ಪ್ರತ್ಯಕ್ಷ ದೇವರು ಕಾಣಿಸಲಿಲ್ಲ
ದೇವರಿಲ್ಲೆಂದು ವಾದದ ಕೂಗು ಕೇಳುವುದು ನನಗೆ.
ನನ್ನ ನಂಬಿಕೆ ವಿಶ್ವ ಶಕ್ತಿಯಲ್ಲಿ ದೇವರಿದ್ದಾನೆ ಎನ್ನುವೆ
ಎಲ್ಲಿದ್ದಾನೆ ಎನ್ನುವರೆ ಬಹಳಷ್ಟು ಕಾಣಿಸುವರು ನನಗೆ.
ನಾನು ದೇವರಿದ್ದಾನೆಂದು ಗುಡಿ ಗೋಪುರಕ್ಕೆ ಹೋಗುವೆ
ಕಲ್ಲೆಂದು ಜರೆಯುವರ ಹೆಚ್ಚಿನ ಸಂಖ್ಯೆ ಕಾಣುವರು ನನಗೆ.
ದೇವನೊಬ್ಬ ನಾಮ ಹಲವು ಹಿಂದೆ ಹೀಗಂದು ಹೋದರು
ಮಾನವರೆಂಬ ದೇವರು ಖಾವಿಯಲ್ಲಿ ಕಂಡರು ನನಗೆ.
ಆತ್ಮದೊಳಗಿನ ವಿಚಾರಕ್ಕೆ ನಿಜವೆಂದು ಜೈ ಎನ್ನುವೆ
ಬಹಿರಂಗದ ಮಾತಿಗೆ ಜೈ ಎನ್ನುವ ಕೈಗಳು ಕಾಣುವವು ನನಗೆ.
ವಿತಂಡವಾದಕ್ಕೆ ಬೆಲೆಯಿಲ್ಲ ಸಂವಾದಕ್ಕೆ ಸರಿಯೆನ್ನುವೆ
ಮೊಂಡು ವಾದದ ಮಾತಿಗೆ ಇರದೆ ಎದ್ದು ಹೋಗುವೆ.
ನಾನು ಅವರವರ ನಂಬಿಕೆಯನ್ನು ಅಲ್ಲಗಳೆಯುವುದಿಲ್ಲ
ಅವರಲ್ಲೊಬ್ಬನಿದ್ದಾನೆ ಎನ್ನುವ ಪ್ರಶ್ನೆಗಳೆ ಕೇಳುವವು ನನಗೆ.
ನಾನು ಈ ಜಗತ್ತನ್ನು ಸೃಷ್ಟಿಕರ್ತನಾದ ಶಿವನಿಂದ ಬಂದಿರುವುದೆನ್ನುವೆ
ತಂದೆ ತಾಯಿ ದೇವರೆಂದು ಹೇಳಿಗುಡಿಗೆ ಬರುವರೆ ಕಾಣುವರು ನನಗೆ.
ನಾನು ವಾದ ವಿವಾದ ಚರ್ಚೆ ವಿಮರ್ಶೆ ಮಾಡುವುದಕ್ಕೆ ಹೋಗುವುದಿಲ್ಲ
ಹೆಸರಲ್ಲಿ ದೇವರ ನಾಮವಿರುವರ ಮೆರೆಯುವರ ಸಂಖ್ಯೆ ತೋರಿಸುವೆ ನಿಮಗೆ.