ನಿಸ್ವಾರ್ಥತೆಯ ಹಾದಿಯಲ್ಲಿ….ಶಂಕರಾನಂದ ಹೆಬ್ಬಾಳ

ವಿಶೇಷ ಲೇಖನ

ನಿಸ್ವಾರ್ಥತೆಯ ಹಾದಿಯಲ್ಲಿ

ಶಂಕರಾನಂದ ಹೆಬ್ಬಾಳ

ಜನಜನಿತ ನೀನಾಗಿ ಘನತೆಯನು ತೋರದಿರು

ವಿನಯದಲಿ ಬಾಳದಿರೆ ಸರ್ವನಾಶವಿದು

ಅನುಚಣವು ಪರರೆಳ್ಗೆ ಬಯಸುತ  ಲೋಕದಲಿ

ಹಣತೆಯಂತಾಗು ನೀ- ವೀರಭದ್ರ||

ಇನ್ನೊಬ್ಬರ ಸೇವೆಗೆ ಮುಡಿಪಾಗಿಹ ಜೀವಕ್ಕೆ ಮೋಹವೇಕೆ,

ಸ್ವಾರ್ಥ ಸಾಧನೆಗೋಸ್ಕರ ಘನತೆಯನು ತೋರುತ್ತ ಜಗದಲ್ಲಿ

ವಿಖ್ಯಾತನಾಗಿ ಮೆರೆಯುವ ಆಸೆಯಿದೆ ಆದರೆ ವಿನಯವಿಲ್ಲದಿರೆ ಆ ಬಾಳು ಸರ್ವನಾಶ ಇನ್ನೊಬ್ಬರ ಏಳ್ಗೆಯನು ಬಯಸುವ ಹಣತೆಯಂತ ಗುಣವ ಧರಿಸು ಜಗದೊಳಗೆ ಎನ್ನುವ ಕವಿವಾಣಿ ನಿಜಕ್ಕೂ ಅದ್ಬುತವೇ ಸರಿ….

ನಿಮ್ಮ ಸೇವೆಯೆ ನಮ್ಮ ಗುರಿ ಎಂಬ ಪೊಳ್ಳು ಭರವಸೆ ನೀಡುವ ರಾಜಕಾರಣಿಗಳು ಇದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಾರೆ. ಇವರ ಬಾಯಲ್ಲಿ ಪರೋಪಕಾರಾರ್ಥಮಿದಂ ಶರೀರಂ ಎಂದು ಪದೆಪದೆ ಹೇಳುತ್ತಾರೆ. ಈ ಲೋಕದಲ್ಲಿ ಪ್ರಾಚೀನ ಕಾಲದಿಂದಲೂ ಇಲ್ಲಿಯವರೆಗೆ ಪಾಪ ,ಪುಣ್ಯವೆಂಬ ಎಂಬ ಕಲ್ಪನೆಗಳಿವೆ ಅದು ಹೇಗೆಂದರೆ ಸತ್ಕಾರ್ಯಗಳನ್ನು ಮಾಡಿ ಸದ್ಗುಣ,ಸದಾಚಾರ,ಸತ್ಸಂಗಿಗಳ ಒಡನಾಟ ಹೀಗೆ ನೂರೆಂಟು ಒಳ್ಳೆಯ ಸುಕೃತ ಕಾರ್ಯಗಳನ್ನು ಮಾಡಿದಾಗ ಪುಣ್ಯ ಲಭಿಸುತ್ತದೆ. ದ್ರೋಹ ,ಕಳವು,ದರೋಡೆ, ಮುಂತಾದ ದುಷ್ಕೃತ್ಯಗಳನ್ನು ಪಾಪಿಗಳಾಗುತ್ತಾರೆ ಎಂಬ ಕಲ್ಪನೆ ಮೊದಲಿನಿಂದಲೂ ಇದೆ.ಹೀಗಾಗಿ ಮನುಷ್ಯ ಸ್ವಾರ್ಥದ ಹಾದಿಯ ತೊರೆದು ನಿಸ್ವಾರ್ಥಿಯಾಗಿ ಬಾಳಬೇಕಲ್ಲವೆ.

ಕುಂಬಾರನ ಮನೆಯಲ್ಲಿ ಸಿದ್ದವಾದ ಮಣ್ಣಿನ ಹಣತೆ ಹತ್ತಿಯ ಬೀಜದಿಂದ ಬತ್ತಿಯ ಹೊಸೆದು ತೈಲದಲ್ಲಿ ಮುಳುಗಿಸಿ

ಅದಕ್ಕೆ ಅಗ್ನಿಯ ಸ್ಪರ್ಶ ಮಾಡಿದಲ್ಲಿ ಅಂಧಕಾರವ ಸರಿಸಿ ಜಗವನ್ನೆ ಬೆಳಗಿಸುವ ಸಾಮರ್ಥ್ಯ ಆ ಹಣತೆಗೆ ಇದೆ. ಅದರಂತೆ

ಈ ಆತ್ಮದಲ್ಲಿನ ಅಹಮ್ಮಿಕೆಯ ಗುಣವನ್ನು ದೂರಕ್ಕೆ ಸರಿಸಿ

ಭುವಿಯಲಿ ಬಂದ ಕಾಯದ ಸಾರ್ಥಕತೆ ಅರಿಯಬೇಕು.

ಎಷ್ಟು ಕಾಲ ಬದುಕಿದ್ದೆ ಎನ್ನುವುದಕ್ಕಿಂತ ಎಷ್ಟು ಪುಣ್ಯಕಾರ್ಯಗಳನ್ನು ಮಾಡಿದೆ ಎಂಬುದು ಲೋಕ ಗುರ್ತಿಸುತ್ತದೆ. ಸತ್ತ ಮೇಲೆ ಜೀವ ಮಣ್ಣು ಪಾಲು ಇರುವ ಆಸ್ತಿಪಾಸ್ತಿ ಮಡದಿ ಮಕ್ಕಳ ಪಾಲು ಆತ್ಮ ದೇವರ ಪಾಲು

ಉಳಿದಿದ್ದು ನೀ ಗಳಿಸಿಟ್ಟ ಪಾಪ ಪುಣ್ಯಗಳು ಮಾತ್ರ.

ಒಂದೂರಿನಲ್ಲಿ ವಿಜಯ ಶರ್ಮ ವಿನಯಶರ್ಮ ಎಂಬ ಇಬ್ಬರೂ ಗೆಳೆಯರಿದ್ದರು. ಇಬ್ಬರೂ ಬಾಲ್ಯ ಸ್ನೇಹಿತರು ಸುಮಾರು ೨೦ ವರ್ಷಗಳ ಕಾಲ ಗುರುಕುಲದಲ್ಲಿ ಅಧ್ಯಯನ ಮಾಡಿ ಕೊನೆಗೆ

ಮನೆಗೆ ಹೊರಟು ಹೋಗುವಾಗ ಗುರುಗಳು ಪಕ್ಕದ ರಾಜ್ಯದ ದೊರೆಗಳು ನನಗೆ ಬೇಕಾದವರು ನಿಮಗೆ ಅವರು ಸಹಾಯ ಮಾಡುತ್ತಾರೆ ಎಂದು ಹೇಳಿ ಬೀಳ್ಕೊಟ್ಟನು. ಇಬ್ಬರು ಶಿಷ್ಯರೂ ಅವರ ಪಾಕ್ಕೆ ನಮಸ್ಕರಿಸಿ ಅಲ್ಲಿಂದ ಪಕ್ಕದ ರಾಜ್ಯಕ್ಕೆ ಹೋಗಿ ರಾಜನನ್ನು ಕುರಿತು ” ಮಹಾರಾಜರೆ, ತಾವುಗಳು ನಮಗೆ ಸಹಾಯ ಮಾಡುವಿರೆಂದು ನಿಮ್ಮ ರಾಜ್ಯದ ಗುರುಗಳು ತಿಳಿಸಿದ್ದಾರೆಂದು ಹೇಳಿದಾಗ ಸರಿ ನಿಮಗೆ ನಾನೇನು ಸಹಾಯ ಮಾಡಲಿ ಎಂದನು ರಾಜ. ವಿನಯ ಶರ್ಮ “ನೋಡಿ ರಾಜರೆ, ಆಭರಣಗಳನ್ನು ಮಾಡುವ ಕಲೆಯಲ್ಲಿ ನಿಪುಣನಾಗಿದ್ದು ನನಗೆ ಒಂದಿಷ್ಟು ಹಣಕೊಟ್ಟರೆ ಒಂದು ಅಂಗಡಿಯನ್ನು ಹಾಕಿಕೊಂಡು ಜೀವನ ಸಾಗಿಸುತ್ತೇನೆಂದಾಗ ಸರಿ ಎಂದು ಹಣ ಒದಗಿಸಿದ. ಇನ್ನು ವಿಜಯಶರ್ಮ ನಿನಗೇನು ಬೇಕು ಎಂದಾಗ ನನಗೆ ಹಣ ಬೇಡ ದೊರೆಗಳೆ ಭಾರತೀಯ ಆಯುರ್ವೇದ ವೈದ್ಯಕೀಯ ಗ್ರಂಥವನ್ನು ತರಿಸಿಕೊಡಿ ಸಾಕು ಇದಲ್ಲದೆ ನನಗೆ ಏನು ಬೇಡ

ಎಂದನು ದೊರೆಗೆ ಆಶ್ಚರ್ಯವಾಗಿ ನಿನಗೆ ಹಣ ಆಸ್ತಿ ಏನು ಬೇಡವೆ ಎಂದಾಗ ಬೇಡವೆಂದ. ಸರಿ ಆಯುರ್ವೇದ ಪುಸ್ತಕ ತರಿಸಿ ಕೊಟ್ಟ ಮುಂದೆ ದಿನಗಳು ಉರುಳಿದಂತೆ ಇತ್ತ ವಿನಯಶರ್ಮ ಅಂಗಡಿಗಳ ಒಡೆಯನಾಗಿ ಆಗರ್ಭ ಶ್ರೀಮಂತನಾಗಿದ್ದ ಅವನ ಗೆಳೆಯ ವಿಜಯಶರ್ಮ ಒಂದು ಬಡಗ್ರಾಮದಲ್ಲಿ ಕಾಯಿಲೆಯಿಂದ ನರಳುವವರಿಗೆ ಉಚಿತವಾಗಿ ಔಷಧಿ ಕೊಡುತ್ತಿದ್ದ. ವಿನಯ ಶರ್ಮ‌ಸೊಕ್ಕಿನಿಂದ ಮೆರೆಯುತ್ತಿದ್ದರೆ ಮಿಜಯ ಶರ್ಮ ಸಾತ್ವಿಕ ಗುಣಗಳಿಂದ ಸರ್ವರಿಂದಲೂ ಪುರಸ್ಕೃತನಾಗಿದ್ದ. ವಿನಯಶರ್ಮನಂತೆ ಯಾವುದೆ ರೀತಿಯ ಐಶಾರಾಮಿ ಜೀವನ ಇಲ್ಲದೆ ಅವರಿವರು ಕೊಟ್ಟ ಪುಡಿಗಾಸಿನಲಿ ಯೋಗಿಯಂತೆ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ. ಒಮ್ಮೆ ಆಕಸ್ಮಾತಾಗಿ ಇಬ್ಬರೂ ಗೆಳೆಯರು ಪರಸ್ಪರ ಎದುರಾದರು . ಯೋಗಕ್ಷೇಮ ವಿಚಾರಿಸಿಕೊಂಡರು ಆದರೆ ವಿನಯಶರ್ಮ ಮೊದಲಿನಂತೆ ಇದ್ದಿಲ್ಲ. ವಿಜಯಶರ್ಮ ತಾನು ಏನನ್ನೂ ಮಾತಾಡದೆ ಸುಮ್ಮನೆ ಹೊರಟುಹೋದ.ಮುಂದೆ ರಾಜ್ಯಕ್ಕೆ ದೊಡ್ಡ ರೋಗವೊಂದು ಬಂದು ಪ್ರಜೆಗಳೆಲ್ಲ ಅಸುನೀಗಿದರು. ಕೆಲವೊಂದಿಷ್ಟು ಜನ ರೋಗದಿಂದ ಬಳಲಿ ವಿಜಯಶರ್ಮನ ಹತ್ತಿರ ಬಂದರು. ವಿಜಯಶರ್ಮ ಎಲ್ಲರನು ಪ್ರೀತಿಯಿಂದ ಉಪಚರಿಸಿ ಗುಣಪಡಿಸಿದ . ಎಲ್ಲರ ಹೊಗಳಿಕೆಗೆ ಪಾತ್ರನಾದ ಗೆಳೆಯನಾದ ವಿನಯಶರ್ಮ ಆಸ್ತಿಪಾಸ್ತಿ ಕಳೆದುಕೊಂಡು ರೋಗಿಯಾಗಿ ಸಾಯುವ ಪರಿಸ್ಥಿತಿ ಬಂತು . ಅವನ ಹೆಂಡತಿ ಮಕ್ಕಳು ಬೀದಿ ಪಾಲಾದರು

ಕೊನೆಗೆ ವಿನಯಶರ್ಮನ ದುಃಸ್ತಿತಿ ನೋಡಿ ವಿಜಯಶರ್ಮನ ಕುಟುಂಬವನ್ನು ಸ್ವಂತ ಸಹೋದರ ಕುಟುಂಬದಂತೆ ನೋಡಿಕೊಂಡ ಕೊನೆಗೆ ಗುಣಮುಖನಾದ ವಿನಯಶರ್ಮನಿಗೆ ತಪ್ಪಿನ ಅರಿವಾಗಿತ್ತು.ಈ ವೈದ್ಯನ ಬಗ್ಗೆ ಸುದ್ದಿ ಊರತುಂಬ ಹಬ್ಬಿತ್ತು. ಹೀಗಿರುವಾಗ ಸ್ವತಃ ರಾಜನಿಗೆ ರೋಗಬಂದು ಮರಣಿಸುವ ಸ್ಥಿತಿ ಬಂತು ಎಲ್ಲಾ ವೈದ್ಯರ ಔಷಧಗಳು ನಿಷ್ಪರಯೋಜವಾದವು.ಕೊನೆಗೆ ಮಂತ್ರಿಯ ಸಲಹೆಯಿಂದ ವಿಜಯಶರ್ಮನ ಗುಡಿಸಲಿಗೆ ಬಂದರು. ವಿಜಯಶರ್ಮ ತಾನು ರೋಗಿಗಳ ತಪಾಸಣೆಯನ್ನು ಮುಗಿಸಿ ಬರುವ ಸಮಯದಲ್ಲಿ

ತಮ್ಮ ಗುಡಿಸಲಿನ ಮುಂದೆ ಸಾಕ್ಷಾತ ಮಹಾರಾಜರೆ ನಮ್ಮ ಗುಡಿಸಲಿಗೆ ಬಂದಿದ್ದು ನೋಡಿ ಅವರ ಕಾಲಿಗೆ ನಮಸ್ಕರಿಸಿದ ಮಹಾರಾಜರು ನೀವು ಯಾರು? ನಮ್ಮ ಕಾಲಿಗೆ ಏಕೆ ಬೀಳುತ್ತಿದ್ದಿರಿ ಎಂದಾಗ ನಾನು ನಿಮ್ಮಿಂದ ಉಪಕೃತನಾದವನು ಅಂದು ನೀವು ಕೊಟ್ಟ ಆಯುರ್ವೇದ ಪುಸ್ತಕದಿಂದ ಜನಸೇವೆ ಮಾಡುತ್ತಿದ್ದೇನೆ. ಎಂದನು . ಮಂತ್ರಿಯು ಪಂಡಿತರೆ, ನಮ್ಮ ದೊರೆಗಳಿಗೆ ಮಹಾಕಾಯಿಲೆಯೊಂದು ಬಂದು ಎಲ್ಲ ಬಗೆಯ ಔಷಧಗಳು ವ್ಯರ್ಥವಾಗಿ ಕೊನೆಗೆ ನಿಮ್ಮಲ್ಲಿ ಕಡಿಮೆಯಾಗುವುದೆಂಬ ಮಹದಾಸೆ ಹೊತ್ತು ಬಂದಿದ್ದೇವೆ ಗುಣಪಡಿಸಿ ಎಂದರು. ಇದು ನಮ್ಮ ಭಾಗ್ಯ ಎಂದು ವಿಜಯಶರ್ಮ ಹೆತ್ತ ತಂದೆ ತಾಯಿಯನ್ನು ಉಪಚಾರ ಮಾಡುವಂತೆ ದೊರೆಗಳನ್ನು ಉಪಚಾರಮಾಡಿ ರೋಗದಿಂದ ಗುಷಮುಖಮಾಡಿದ .ರಾಜನಿಗೆ ಸಂತಸವಾಯಿತು ಇನ್ನು ಇನ್ನು ಮುಂದೆ ನೀವೆ ನಮ್ಮ ರಾಜವೈದ್ಯರು ಯಾರಿಗೂ ಜಗ್ಗದ ಈ ರೋಗವನ್ನು ಅದೆಷ್ಟು ಬೇಗ ಕಡಿಮೆ ಮಾಡಿದಿರಿ ಭಲೆ, ಪಂಡಿತರೆ ಎಂದು ಹರ್ಷ ವ್ಯಕ್ತ ಪಡಿಸಿದ. ನಿಮ್ಮ ಕುಟೀರವನ್ನು ಇಂದೆ ಬದಲಿಸಿ ಮಹಾ ಮಂತ್ರಿಗಳೆ , ಇವರಿಗೆ ಒಂದು ೧೦ ಅಂತಸ್ತಿನ ಮಹಾಭವನವನ್ನು ಕಟ್ಟಿಸಲು ತಿಳಿಸಿದ ರೋಗಿಗಳನ್ನು ನೋಡಿಕೊಳ್ಳಲು ಉಚಿತ ಆಳುಗಳನ್ನು ನೇಮಿಸಿದ ಅಂದಿನಿಂದ ಆ ವಿಜಯಶರ್ಮನ ಅದೃಷ್ಟ ಖುಲಾಯಿಸಿತು. ಬರಿ ವೈದ್ಯ ರಾಜವೈದ್ಯನಾದ ಸುತ್ತೆಲ್ಲ ದೇಶಗಳನ್ನು ನಿಸ್ವಾರ್ಥ ವೈದ್ಯಕೀಯ ಸೇವೆ ಮಾಡುತ್ತ ಜೀವನ ಕಳೆದ.

ಹೀಗೆ ಸೇವೆಯಲ್ಲಿ ನಿಸ್ವಾರ್ಥತೆ ಇದ್ದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಇರುವ ಜೀವನದಲ್ಲಿ ತಾಮಸ ಬುದ್ದಿಯ ದೂರಿಟ್ಟು ಸಾತ್ವಿಕ ಗುಣಗಳ. ಬೆಳೆಸಿಕೊಂಡು ನಾವು ನೀವೆಲ್ಲ ಸುಖಿಗಳಾಗೋಣ….ನೆಮ್ಮದಿಯ ಜೀವನ ಸಾಗಿಸೋಣ


ಶಂಕರಾನಂದ ಹೆಬ್ಬಾಳ

Leave a Reply

Back To Top