ಗಜಲ್
ಅಶ್ಫಾಕ್ ಪೀರಜಾದೆ.


ಮುಳ್ಳುಗಳ ಪಹರೆಯಲಿ ಮಂದಾರ ತಣಿಯುತಿದೆ
ಸೀಮೆಗಳು ದಾಟಿ ಪ್ರೀತಿ ಸುಗಂಧ ಪಸರಿಸುತಿದೆ
ಉಸಿರು ಬಂಧಿಸುವ ವ್ಯರ್ಥ ಪ್ರಯತ್ನ ನಡೆಯುತಿದೆ
ಗಾಳಿಗೆ ಬಿರುಗಾಳಿಯಾಗಿಸುವ ಶ್ರಮ ಸಾಗುತಿದೆ
ಮರ್ಯಾದಾ ನೀತಿ ಒಲುಮೆಗೆ ಕಫನ್ ತೊಡಿಸುತಿದೆ
ಅಲೌಕಿಕ ಅನುಭೂತಿಗೆ ಜಾತಿ ನಂಜು ಸವರುತಿದೆ
ಅಗೋ ಅಲ್ಲಿ ಆ ದಮನಿತರ ಗುಡಿಸಲು ಸುಡುತಿದೆ
ಮಕ್ಕಳು ಕೂಡಿ ಆಡಿದ ತಪ್ಪಿಗೆ ಹಿಂಸೆ ವಿಜೃಂಭಿಸುತಿದೆ
ಮುಗ್ಧರನ್ನ ಶಿಕ್ಷಿಸುವ ಫರಮಾನ್ ಜಾರಿಯಾಗುತಿದೆ
ಸತ್ತರು ಪ್ರೇಮಿಗಳ ಅದೇ ಇತಿಹಾಸ ಮರುಕಳಿಸುತಿದೆ
ಅನುರಾಗಿಗಳ ದಾರಿಗೆ ಮುಳ್ಳಿನ ಮಳೆ ಸುರಿಯುತಿದೆ
ತುಳಿದರೂ ಬಿಡದೇ ಪವಿತ್ರ ಪುಷ್ಪ ಅರಳಿ ನಗುತಿದೆ