ಹೃದಿಹೃದಯಲು ಒಲವುದಿಸಿ

ಕಾವ್ಯಯಾನ

ಹೃದಿಹೃದಯಲು ಒಲವುದಿಸಿ

ಸರೋಜ ಪ್ರಶಾಂತಸ್ವಾಮಿ

ಋತು ಋತುವು ಗತಿಗತಿಸಿ,
ನೆಲದೊಗಲು ಹಪಹಪಿಸಿ,
ಬಿರಿದಿದೆದೆ ತಪತಪಿಸಿ
ಮನ್ವಂತರದ ತುದಿ ಅರಸಿ….

ಬೈಸಾಕಿಯು ಬೇಸರಿಸಿ,
ಚಿಗಿ ಚೈತ್ರದ ಪಡಿಯರಸಿ
ಮಗುವಂತೆ ಮುನಿಸೊಡೆಸಿ,
ಮೋತ್ಕರಿಸಿದೆ ಮಿಗಿಮಿಗಿಸಿ…

ಹೊಸ ಒಸಗೆಯ ಉಡಿಸುಡಿಸಿ,
ಕಸ ಕಳೆಯ ತೆಗೆತೆಗಿಸಿ
ಒಲವೇ.‌! ಬಾ ನೆನೆಸು ಉಸಿರಿಳಿಸಿ,
ಹೊಮ್ಮಾಗಿಯ ಕನಸಿಸಿ…

ಬಂಜಾಗಿಹ ನೆಲ ಬಸಿರಿಸಿ,
ಬಯಕೆ ಸಿರಿಯ ಪೇರಿಸಿ
ಹಸಿರೆಲ್ಲೆಡೆ ನಳನಳಿಸಿ,
ಮೈಯೊಡೆಸು ಸೀಮಂತಿಸಿ….

ಎದೆತುದಿಯ ಹಸಿರಾಗಿಸಿ,
ಮಣ್ಣಸವಿಯ ಉಣಿಸುಣಿಸಿ
ಹಣ್ಣಾಗಿಸಿ, ಕಣ್ಣಾಗಿಸಿ
ಜೊನ್ನಾಗಿಸು ಜಗಮಗಿಸಿ..‌.

ಹೃದಿ ಹೃದಿಯಲು ಒಲವುದಿಸಿ,
ಪ್ರತಿ ಉಸಿರ ನೇವರಿಸಿ
ಮಾಗುತಿರಲೀ ಮೇಘ ಸಂಗಮಿಸಿ,
ರಂಗಾಗಲಿ ಜಗ ಸಂಭ್ರಮಿಸಿ.


Leave a Reply

Back To Top