*ಗೋರಿಯೊಳಗಿನ ಉಸಿರು”
ಪುಸ್ತತಕ ಸಂಗಾತಿ *ಗೋರಿಯೊಳಗಿನ ಉಸಿರು” ಗೋಕಾವಿ ನಾಡಿನ ಪ್ರಾಥಮಿಕ ಶಾಲೆಯೊಂದರ ಮುಖ್ಯೋಪಾದ್ಯಾಯರಾಗಿರುವ ಶ್ರೀ ಈಶ್ವರ ಮಮದಾಪೂರ ಅವರು ಈಗಾಗಲೇ ಕನ್ಮಡ ಕಾವ್ಯ ಕ್ಷೇತ್ರದ ಪರಿಚಿತ ಹೆಸರು. ಮಮದಾಪೂರರ ಚುಟುಕುಗಳು,ಮಮದಾಪೂರ ಹನಿಗವಿತೆಗಳು , ಕಾವ್ಯಯಾನ (ಕವನ ಸಂಕಲನ) ಮೊದಲಾದ ಸಂಕಲನಗಳನ್ನು ಹೊರ ತಂದಿದ್ದಾರೆ. ಈಚೆಗೆ ಕಾವ್ಯ ರಚನೆಗೆ ಕಾವ್ಯರಚಕರಿಗೆ ಪ್ರಧಾನ ವೇದಿಕೆಯಾಗಿರುವದು ವ್ಯಾಟ್ಸಪ್ ಎಂಬ ವಿನೂತನ ಮಾದ್ಯಮ.ಕನ್ನಡ ಕಾವ್ಯಕೂಟ ಎಂಬ ವ್ಯಾಟ್ಸಪ್ ಬಳಗದ ಮೂಲಕವೇ ನೂರಾರು ಜನ ಸಶಕ್ತ ಕವಿಗಳನ್ನು ಒಂದುಗೂಡಿಸಿದ ವಿಶೇಷತೆ ಈಶ್ವರ ಅವರದು.ಅವರು ಬರೆದಿರುವ ಚುಟುಕುಗಳ […]
ಕವಿತೆ ಹುಟ್ಟುವಾಗ
ಕವಿತೆ ಕವಿತೆ ಹುಟ್ಟುವಾಗ ಅಬ್ಳಿ,ಹೆಗಡೆ ಸೂರ್ಯ,ಸಾಯುತ್ತಿದ್ದ.ಕಾಯುವಹಾಗಿಲ್ಲ,ತಿರುಗಿ ಹುಟ್ಟುವವರೆಗೆ.ಕತ್ತಲು ಕಳೆಯುವವರೆಗೆ.ಪ್ರಸವವೇದನೆ ತಾಯಿಗೆ–ಭಯ,ಆತಂಕ,ಸಂತಸಒಟ್ಟೊಟ್ಟಿಗೆ,ಹೊಟ್ಟೆಯೊಳಗೆಕೈ,ಕಾಲಾಡಿಸುವ ಪುಟ್ಟ-ಕವಿತೆ,ದೈತ್ಯ ಪ್ರಸವವಾದರೆ ಅಳಿವು,ಉಳಿವಿನ ಪ್ರಶ್ನೆ.ತಂದೆಯಾರೊ ಗೊತ್ತಿಲ್ಲ.ವ್ಯಭಿಚಾರಿಣಿ ಪಟ್ಟ ಗಟ್ಟಿಆಗುವ ಆತಂಕ,ಒಳಗೊಳಗೆ,ಅಸಾಧ್ಯ-ನೋವಿನಲ್ಲೂ ತಾಯ್ತನ-ದ ಖುಷಿ,ಅಪ್ಯಾಯಮಾನ.ಸುಖ ಪ್ರಸವ ಕತ್ತಲಲ್ಲಿ,ಕಣ್ತೆರೆಯಬೇಕು-ಮುದ್ದು ಕವಿತೆ,ಹುಟ್ಟುವಹೊಸ ಬೆಳಕಲ್ಲಿ.ತನ್ನ,ಪುಟ್ಟ,ಪಿಳಿ,ಪಿಳಿಕಣ್ಣುಗಳಿಂದ ನೋಡಬೇಕು,ನಿಚ್ಚಳ ಬೆಳಕಲ್ಲಿ,ಹೊಚ್ಚ ಹೊಸ ಜಗತ್ತನ್ನು.ಮುಗಿಲೆತ್ತರಕ್ಕೆ ಎದ್ದುನಿಲ್ಲಬೇಕು ನೀಳಕಾಯಳಾಗಿ.ತಾಯ್ತನದ ಸಾರ್ಥಕತೆಇರುವದೇ ಇಲ್ಲಿ.ಭಯ,ಆತಂಕ,ನೋವು,ಸಂತಸ ಎಲ್ಲದರಸಾರ್ಥಕತೆಯೂ ಇಲ್ಲೆ.ಕತ್ತಲಲ್ಲಿ ಹುಟ್ಟಿದಕವಿತೆಯಲ್ಲಿ. **************************
‘ ಬಯಲೊಳಗೆ ಬಯಲಾಗಿ’
ಪುಸ್ತಕ ಸಂಗಾತಿ ‘ ಬಯಲೊಳಗೆ ಬಯಲಾಗಿ’ ಕನ್ನಡ ಗಜಲ್ ಸಾಹಿತ್ಯ ಲೋಕದಲ್ಲಿ ಈಗಾಗಲೇ ಅಂತರ್ಜಾಲದ ಗುಂಪುಗಳ ಮೂಲಕ ಗಜಲ್ ಕಾರರಾಗಿ ಹೆಸರು ಮಾಡಿರುವ ಶ್ರೀ. ಲಕ್ಷ್ಮಿಕಾಂತ ಮಿರಜಕರ ಅವರು ಬಯಲೊಳಗೆ ಬಯಲಾಗಿ ತಮ್ಮ ಮೊದಲ ಗಜಲ್ ಸಂಕಲನವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಹಾವೇರಿ ಜಿಲ್ಲೆಯ ಶ್ರೀ. ನೇತಾಜಿ ಹಾಗೂ ಶ್ರೀಮತಿ. ಲಕ್ಷ್ಮಿ ದಂಪತಿಯ ಪುತ್ರರಾದ ಲಕ್ಷ್ಮಿಕಾಂತ ಹುಟ್ಟೂರು ಶಿಗ್ಗಾಂವನಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಪೂರೈಸಿದವರು. ಬೆಂಗಳೂರಿನ ಎಂ. ವಿ. ಜೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ. ಎಡ್. ಪದವಿ […]
ತವರಿನ ಬೆಟ್ಟ
ಕಥೆ ತವರಿನ ಬೆಟ್ಟ ಶಾಂತಿ ವಾಸು ನಿಮ್ಮವ್ವ ಯೋಳ್ಕೊಟ್ಟಾಳೆನೋ? ಯಾವನ್ತವ ಉಕ್ತೈತೆ ಅಂತ ಮಾಡೀ? ಅವ್ನು ಯಾವನೋ ಮನೆ ಕಟ್ಟುದ್ರೆ ನಿನ್ನನ್ಡ್ಯಾಕೇ ಉರ್ಕಂತೈತೆ ರಂಡೆ? ಪಿರ್ಯಾದಿ ಯಾಕೆ ಕೊಟ್ಟೆ ಅಂದ್ರೆ ನನ್ನಿಷ್ಟ ಅಂತೀಯ”? ಎನ್ನುತ್ತಾ ಹೆಂಡತಿ ಟಂಕಿಯ ಬೆನ್ನಿನ ಮೇಲೆ ಒಂದೇ ಸಮ ನಾಲ್ಕೈದು ಸಲ ಕುಟ್ಟಿ ಹೊಸ್ತಿಲು ದಾಟಿ ಹೊರಬಂದ ಅಳ್ಳಯ್ಯನಿಗೆ ಎಡಗಡೆಯ ಜಗುಲಿಯ ಮೇಲೆ ಪಟ್ಟಾಪಟ್ಟಿ ಚಡ್ಡಿ, ಮಾಸಿದ ಬನಿಯನ್ನು ತೊಟ್ಟು ಪಕ್ಕದಲ್ಲೇ ಚೌಕದ ಮನೆಗಳ ತೂತು ಬಿದ್ದ ಕಂಬಳಿ ಅದರ ಮೇಲೊಂದು ಕೋಲಿಟ್ಟು, […]
ಮಾಯಾಮೃಗ
ಕವಿತೆ ಮಾಯಾಮೃಗ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಸುಡು ಬಿಸಿಲಲ್ಲಿ ಅಲೆದಾಡಿದಧೂಳು ಮೈಯ ಗಾಳಿಗೆ ಜ್ವರವೇರಿಇಳಿದಿದೆ ಹರಿವ ನೀರಿನಲೆಗೆ ಗಾಳಿ ಮೈಕೊಡವಿದಲ್ಲಿಉದುರಿದ ಬಕುಳ ಹೂವಿಗೆ ವಿರಹ ಬೆಂಕಿಹಾ! ಹಾ! ಎನುತ ತುಂಬಿಯ ಚುಂಬನದ ನೆನಪಲ್ಲಿ ಮೈನೆನೆದುಅಲೆಗಳಿಗೆ ಮೈಯೊಡ್ಡಿ ತೇಲಿ ಹೋಗಿದೆ. ಮರಗಿಡ ಬಳ್ಳಿಗಳ ಮೈತುಂಬಮದನಶರ ನಾಟಿ ನೇಸರಗೆ ಬಸಿರಾಗಿಮೊಗ್ಗುಗಳ ಹೆತ್ತು ತೊಟ್ಟುಗಳ ತೊಟ್ಟಿಲಲಿ ತೂಗಿಕೆಂಪು ಚಿಗುರು ಬೆರಳುಗಳಹಸಿಮೈ ಬಾಣಂತಿಕೇಶಗಳ ಬಿಚ್ಚಿ ಮಳೆನೀರ ಕಾದಿದೆ ಚಿತ್ರಗಳು ತಮ್ಮನ್ನು ತಾವೆಬರೆದುಕೊಂಡಂತೆಹಕ್ಕಿಗಳು ರೆಕ್ಕೆ ಬಿಡಿಸಿ ಚಿಮ್ಮಿಬಾಂದಳವ ಬಿಳಿ ಹಾಳೆ ಮಾಡಿವೆಅವನು ಬಿಡಿಸಿದ ಚಿತ್ರದಂಥಪ್ರಕೃತಿಗೆ ಜೀವ […]