ಕವಿತೆ
ಏನು ಬರೆಯಲಿ ……!
ಅಕ್ಷತಾ ಜಗದೀಶ.
ಬರೆಯೆಂದೊಡನೆ ಏನು
ಬರೆಯಲಿ ನಾನು
ಕವನದ ಸಾಲುಗಳಿವು
ತಾವಾಗಿ ಸಾಗುತಿಹವು…
ಎಂದೂ ಕಾಣದ ಮೊಗವ
ಜೊತೆಯಲಿ ಕಳೆಯದ ದಿನವ
ಆ ಕ್ಷಣಗಳ ಕುರಿತು….
ಏನೆಂದು ಬರೆಯಲಿ ನಾನು…
ದೂರದ ಕಾನನದೊಳಿರುವ
ತೊರೆಯ ಮೇಲಿನ ಬುಗ್ಗೆ
ನಾ ಕಾಣ ಹೊರಟಾಗ…
ಮಾಯವಾಗಿ ಹೋದಾಗ….
ಆ ಬುಗ್ಗೆಯ ಕುರಿತು ನುಡಿಯೆಂದರೆ
ಏನು ನುಡಿಯಲಿ ನಾನು….
ಬಾನಲಿ ಮೂಡಿದ ಮಿಂಚೊಂದು
ಕ್ಷಣದಲಿ ಮೂಡಿ ಮಾಯವಾಗಿ
ಇರುಳ ದಾಟಿ ನಾ ಬಂದಾಗ
ಹಗಲಲಿ ಏನು ಹೆಳಲಿ ನಾನು..
ಬರೆಯೆಂದೊಡನೆ ಏನು
ಬರೆಯಲಿ ನಾನು…….
***