ಕ್ಷಮಿಸು ಮಗಳೇ,

ಕವಿತೆ

ಕ್ಷಮಿಸು ಮಗಳೇ,

ಬಾಲಾಜಿ ಕುಂಬಾರ

Uttar Pradesh tops list in crimes against women - The Hindu

ಕ್ಷಮಿಸು ಮಗಳೇ,
ನಿನಗೆ ನಾಲಿಗೆ ಕತ್ತರಿಸಿದಾಗ
ನಮಗೂ ನಾಲಿಗೆ ಮೇಲೆ ಗಾಯವಾಗಿದೆ,
ಆದರೆ ಮಾತನಾಡಲು ಆಗಲಿಲ್ಲ.
ಮಾತು ಮೌನವಾಗಿದೆ, ವೇದನೆ ಮಿತಿಮೀರಿದೆ,

ಕ್ಷಮಿಸು ಮಗಳೇ,
ನಿನಗೆ ಕಾಲು ಕತ್ತರಿಸಿ, ಕೈ ಮುರಿದಾಗ
ಕಾಲುಗಳಿಗೆ ನೋವಾಗಿದೆ,
ಕೈಗಳಿಗೆ ಬೀಗಗಳಿವೆ, ಕೈಕಟ್ಟಿ ಕುಳಿತಿದ್ದೇವೆ
ನಿನ್ನ ‘ಜೀವ’ ಕಳೆದುಕೊಂಡು,
ಮತ್ತದೇ ಸೂತಕದ ಮನೆಯಲ್ಲಿ,

ಕ್ಷಮಿಸು ಮಗಳೇ,
ಇದು ‘ರಾಮರಾಜ್ಯ’ ಇಲ್ಲಿ ಸ್ವಾತಂತ್ರ್ಯವಾಗಿ
ತಿರುಗಾಡುವಂತೆ ಹೇಳಿದ್ದೇವೆ, ಆದರೆ
ರಾಮರಾಜ್ಯದ ಕೀಚಕರ ಕೈಯಿಂದ ನಿನ್ನನ್ನು
ರಕ್ಷಿಸಲು ಆಗದೇ, ನಾವು ಅಪರಾಧಿಗಳಾಗಿದ್ದೇವೆ.

ಕ್ಷಮಿಸು ಮಗಳೇ,
ಈಗ ಕೌರ್ಯ ಮೆರೆಯುತ್ತಿದೆ, ನ್ಯಾಯ ಗಂಟಲಲ್ಲಿ ಉಸಿರುಗಟ್ಟಿದೆ, ಇನ್ನು ಮನುಷ್ಯತ್ವ ಎಂಬುದು ಮರೀಚಿಕೆಯಾಗಿದೆ, ಎಲ್ಲೆಡೆ ರಕ್ತದ ಕಲೆಗಳು ಚಿಮ್ಮುತ್ತಿವೆ, ಇನ್ನೆಲ್ಲಿದೆ ‘ಭಾರತ ಮಾತೆಯ’ ರಕ್ಷಣೆ??

ಕ್ಷಮಿಸು ಮಗಳೇ,
ಅವಸ್ಥೆಯ ನೆಲದಲ್ಲಿ ಅನ್ಯಾಯ ಪಂಜಿನ
ಮೆರವಣಿಗೆ ಹೊರಟಾಗ ‘ಬಡ ಜೀವಗಳು’
ಮೌನವಾಗಿ ಪ್ರತಿರೋಧಿಸುತ್ತಿವೆ,
ಆ ಕ್ಷಣದ ತೊಳಲಾಟ, ಅಸಹಾಯಕತೆ,
ನಿನ್ನ ರಕ್ತ ಕಣ್ಣೀರು ನೆನೆದಾಗ, ಒಮ್ಮೆ ಕಣ್ಣು ಒದ್ದೆಯಾದವು, ಹಾಗೇ ರಕ್ತ ಕುದಿಯುತ್ತಿದೆ,

ಕ್ಷಮಿಸುಬಿಡು ಮಗಳೇ,
ನಿನಗೆ ಉಳಿಸಿಕೊಳ್ಳಲು ಆಗಲಿಲ್ಲ,

*****************************

5 thoughts on “ಕ್ಷಮಿಸು ಮಗಳೇ,

  1. ವೇದನೆ ಭರಿತ ನಿರೂಪಣೆ. ತುಂಬಾ ಅಮಾನವೀಯ ಕೃತ್ಯ

  2. ಇದೆಲ್ಲದಕ್ಕೂ ಕೊನೆಯೇ ಇಲ್ಲವೇ? ಘಟಿಸಿದ ಬಳಿಕ ನಾಲ್ಕಾರು ದಿನಗಳ ಕಾಲ ಎಲ್ಲರ ಬಾಯಲ್ಲಿ, ಪತ್ರಿಕೆ, ದೂರದರ್ಶಕಗಳಲ್ಲಿ ಬರೀ ಇದೇ ವಿಷಯವೇ.ಸಂಘಟನೆಯವರುಗಳು ಎಗರಾಡಿ ಬಿಡುತ್ತಾರೆ, ಅಷ್ಟೇ ಮತೊಂದು ಈ ರೀತಿಯ ಪ್ರಕರಣ ಆಗುವವರೆಗೆ ಎಲ್ಲ ಶಾಂತ.ದುಷ್ಟರಿಗೆ ಇನ್ನೊಮ್ಮೆ ಈ ರೀತಿಯ ತಪ್ಪು ಮಾಡದಂತಹ ಶಿಕ್ಷೆ ಕೊಡುವುದ್ಯಾವಾಗ, ಕೊಡುವವರ್ಯಾರು? ಯಾವುದು ರಾಮರಾಜ್ಯ? ಹಾಗೆಂದರೇನು?
    – ವೀಣಾ ದೇವರಾಜ,

  3. ಸೊಗಸಾಗಿ ಚಿತ್ರಿಸಿರುವಿರಿ
    ಅಭಿನಂದನೆಗಳು ತಮಗೆ

  4. ಹೌದು ರಾಮರಾಜ್ಯದಲ್ಲಿ ನಾವೆಲ್ಲ ಅಸಹಾಯಕರು.

Leave a Reply

Back To Top