ಕವಿತೆ
ಸೌಹಾರ್ದ
ರೇಷ್ಮಾ ಕಂದಕೂರು
ಜಾತಿಮತದ ಭೇದಾಗ್ನಿ ಮನೆ ಮನಗಳಲಿ ಆಗ್ನಿಸ್ಪರ್ಷ ಗೈದಿದೆ
ಪ್ರೀತಿ ವಿಶ್ವಾಸದ ದ್ವಂಸವಾಗುತ ನೀತಿ ನಿಯಮ ಸಾಯುತಿದೆ
ನೂರು ಮತಗಳ ಸಾರ ಒಂದೇ ತಿಳಿಯದ ಗಾಂಪರೊಡೆಯನಂತಿದೆ
ಭ್ರಾಂತಿ ಮೋಹಗಳು ದೇಶಪ್ರೇಮ ನೆಮ್ಮದಿಗೆ ಭೀತಿ ಹಬ್ಬಿಸುತಿದೆ
ಕೋಮು ಸೌಹಾರ್ಧವನು ಕ್ರೋದಾಗ್ನಿಯಲಿ ತಳ್ಳುತಲಿದೆ
ಸದ್ಗುಣಗಳು ಕ್ಷಾಮಕೆ ತುತ್ತಾಗಿ ಮಾನವೀಯತೆ ಬೆಂದಾಗಿದೆ
ಜಾತಿ ಜಂಜಡದಲಿ ನೀತಿಯನು ಬಲಿಕೊಟ್ಟು ಗಹಗಹಿಸುತಿದೆ
ಕುಟಿಲತೆ ವರ್ಧಿಸಿ ಭಾವೈಕ್ಯತೆಗೆ ಮಸಿಬಳಿದಂತಾಗಿದೆ
ದಯೆ ಪ್ರೇಮ ಗುಣ ಬೆಳೆಸಿ
ಬಿದ್ದವರನೆತ್ತಿ ಪೋಷಿಸುವಂತಾಗಬೇಕಿದೆ
ಸ್ನೇಹ ಸೌಗಂಧವ ತಾಗಿ ಸಿಪ್ರೀತಿರಸ ಉಣಿಸುವಂತಾಗಬೇಕಿದೆ
************************