Month: May 2020

ಕಾರ್ಮಿಕ ದಿನದ ವಿಶೇಷ-ಕವಿತೆ

ಕಾರ್ಮಿಕ-ಶ್ರಮಿಕ ಪ್ರೊ.ಕವಿತಾ ಸಾರಂಗಮಠ ಕಾರ್ಮಿಕ-ಶ್ರಮಿಕ ದೇವನಿತ್ತ ಭೂಮಿಯಲ್ಲಿ ಶ್ರಮಿಕ ಪ್ರಾಮಾಣಿಕತೆಯ ಧನಿಕ ಸಮಯದ ಪರಿಪಾಲಕ ನಿತ್ಯ ದುಡಿದು ತಿನ್ನುವ ಕಾಯಕ! ಕರ್ಮದಿಂದ ಜಗವೆಲ್ಲ ಸುಗಮ ಕರ್ಮದಿಂದಲೇ ಸಂತಸದ ಉಗಮ ಹರಿಸುತ ನಿತ್ಯ ಬೆವರ ಸುಮ ಜಗವೆಲ್ಲ ಹರಡುವ ಶ್ರಮದ ಕುಸುಮ! ಶ್ರಮದೊಂದಿಗೆ ದಿನಚರಿ ಆರಂಭ ಅವಿರತ ದುಡಿದ ಬೆವರಲವನ ಬಿಂಬ ಸಹಿಸುವ ಧನಿಕರ ದಬ್ಬಾಳಿಕೆ ಆದರೂ ಇವನ ಕೆಲಸಕಿಲ್ಲ ಹೋಲಿಕೆ! ಕಟ್ಟುವ ನಿತ್ಯ ಕಾಯಕದ ಕಟ್ಟೆ ಕೈಯಲ್ಲಿ ಹಿಡಿದು ಉಣ್ಣುವ ಕರ್ಮದ ತಟ್ಟೆ ತೊಟ್ಟರೂ ಚಿಂದಿ ಬಟ್ಟೆ […]

ಕಾರ್ಮಿಕ ದಿನದ ವಿಶೇಷ-ಕವಿತೆ

ಸನ್ಮಾನ ಸಂಮ್ಮೋದ ವಾಡಪ್ಪಿ ಸನ್ಮಾನ ಗಳಿಕೆಗೆ ಸ್ವಾಭಿಮಾನದ ದಿಟ್ಟ ಹೆಜ್ಜೆ ಇಡುತ ಬೆವರ‌ ಹನಿಗಳ ಸುರಿಸಿ ದುಡಿಮೆಯಲಿ ನಗುತ ಭವ್ಯ ದೇಶದ ಏಳಿಗೆಯ ಬೆನ್ನೆಲಬು ನಾವು ಶ್ರಮದ ದಾರಿ ಜೀವನದುದ್ದಕ್ಕೂ ನಡೆಯುತಿಹೆವು ಒಗ್ಗಟ್ಟಿನಲಿ ಒಕ್ಕೊರಲಿನ ಶಿಸ್ತಿನ ನಡೆಯು ದಣಿವಿಲ್ಲದ‌ ಚಲನೆ ನಿಲ್ಲಬೇಕು ಮನೆಯು ಸಹಿಷ್ಣುತೆಯಿಂದ ಸದಾ‌ ಕಾರ್ಯೋನ್ಮುಖ ಆತ್ಮವಿಶ್ವಾಸದ ಪಡೆ ಆಗನೆಂದು ವಿಮುಖ ಕಾರ್ಮಿಕರು ಒಂದೇ‌ ಸೂರಿನಲಿ ಬಂಧುಗಳು ಸಮಯ‌‌ ಪಾಲನೆ, ಶ್ರದ್ಧೆಯೇ ಪ್ರಮಾಣಗಳು ತಂತ್ರಜ್ಞಾನ ಕಾರ್ಯತಂತ್ರದಲ್ಲಿ‌ಯೂ ಪರಿಣಿತರು ಆರ್ಥಿಕತೆಯ ಬುನಾದಿ ನಿರಂತರ ಸಾಧಕರು ದಿನ‌‌ ವಾರ […]

ಕಾರ್ಮಿಕ ದಿನದ ವಿಶೇಷ-ಕವಿತೆ

ಭರವಸೆಯ ಬದುಕು ಪ್ರತಿಭಾ ಹಳಿಂಗಳಿ ಭರವಸೆಯ ಬದುಕು ದುಡಿಯುವ ಕೈಗಳೇ ನಿವೇನು ಬೇಡುತಿರುವಿರಿ ಹೊತ್ತು, ಹೊತ್ತಿನ ಊಟ ಇರಲೊಂದು ನೆಲೆ ಇಷ್ಟು ಸಾಕಲ್ಲವೇ? ಇಲ್ಲ ಸಾಕಾಗಲಿಲ್ಲ ನಾವೇನು ಯಂತ್ರಗಳಲ್ಲ, ನಮ್ಮ ‌ದೇಹದಲ್ಲೂ ಹರಿದಾಡುತಿದೆ ರಕ್ತ ಅದು ಕೂಡ ಕೆಂಪಲ್ಲವೇ ನಿಮ್ಮೆಲ್ಲರ‌ ಹಾಗೆ. ಬೆವರು ಸುರಿಯುತಿಹೆ ನಮ್ಮ ಹಣೆಯ ಮೇಲೆ ಅದು ಯಾರದೋ ಸಂಪತ್ತಿನ ಬಂಡವಾಳವಂತೆ ಹಗಲು, ರಾತ್ರಿ ಶ್ರಮವಹಿಸಿ ಮೈಯೆಲ್ಲ ಹಣ್ಣಾಗಿಸಿ ದುಡಿಯುತಿರೆ ನಾವು ನೀವು ಕೊಡುವ ಕಾಸು ಧರ್ಮದ್ದೇನಲ್ಲ. ಇಂದು ಬೆವರು ಹರಿಸಿದಾಗಲೇ ದೊರಕುವದು ಅನ್ನ […]

ಕಾರ್ಮಿಕ ದಿನದ ವಿಶೇಷ-ಬರಹ

ಮನೆಯ ಕಾರ್ಮಿಕರು ವಸುಂಧರಾ ಕದಲೂರು.     ‘ಮನೆಯ ಕಾರ್ಮಿಕರು’      ‘ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವ ‘ ಎಂದು ಪ್ರಾರಂಭವಾಗುವ ಬಸವಣ್ಣನವರ ಒಂದು ವಚನವಿದೆ.  ‘ಕಾಯಕವೇ ಕೈಲಾಸ’ ವೆಂದು ಜೀವನದ ನಿಜತತ್ವ ಸಾರಿದ ಬಸವಣ್ಣನವರದು ಶರಣ ಸತಿ ಲಿಂಗ ಪತಿಯ ಭಾವ.      ಲಾಕ್ ಡೌನ್ ಸಮಯದಲ್ಲಿ ಮನೆವಾರ್ತೆಗೆ ಎಳಸುತ್ತಿರುವ ಗಂಡಂದಿರು ಅದೆಷ್ಟು ಜನವೋ.. ಬಹುಶಃ ಕೆಲವರಿಗಾದರೂ ಈಗ ಮನೆಕೆಲಸದ ಮಹತ್ವ ಅರಿವಾಗಿರಬಹುದು. ಇಲ್ಲವಾದರೆ, “ನನ್ನ ಹೆಂಡತಿಯೇ..? ಎಲ್ಲೂ ಕೆಲಸಕ್ಕೋಗಲ್ಲ, ಮನೇಲಿರ್ತಾಳೆ” ಎಂದು ಮೂಗು […]

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಗಝಲ್ ಪ್ರತಿಮಾ ಕೋಮಾರ ಗಜಲ್ ಕರವೆರಡು ಕೊರಡಾದರೂ ಸೋಲುವುದಿಲ್ಲ  ಅವನು ಉಳಿ ಮೇಲೆ ಉಳಿ ಬಿದ್ದರೂ ಎದೆಗುಂದುವುದಿಲ್ಲ ಅವನು ಕತ್ತಲೇ ಮನೆಯಾದರೂ ಕೊರಗುವುದಿಲ್ಲ ಅವನು ಎಲ್ಲರಿಗೂ ಬೆಳಕನ್ನೇ ಹಂಚಿದರೂ ಬೀಗುವುದಿಲ್ಲ ಅವನು ಒಡಲಾಳದಲ್ಲಿ ಹರಿದರೂ ಲಾವಾ, ಹೇಳಿಕೊಳ್ಳುವುದಿಲ್ಲ ಅವನು ಉಳ್ಳವರು ತುಳಿಯುತ್ತಲಿದ್ದರೂ ಚಕಾರವೆತ್ತುವುದಿಲ್ಲ ಅವನು ಮಳೆ,ಬಿಸಿಲು ,ಚಳಿ ಏನೇ ಇದ್ದರೂ ಅಳುಕುವುದಿಲ್ಲ  ಅವನು ಕಾಯಕದಲ್ಲಿ ಮೇಲು ಕೀಳೆಂಬ ಭಾವ ತೋರುವುದಿಲ್ಲ ಅವನು ಆಲಸ್ಯದಿ ದುಡಿಯದೇ ಕುಳಿತು ಉಣ್ಣುವುದಿಲ್ಲ ಅವನು ಕಾಯಕವೇ ಕೈಲಾಸ ಎಂಬ ತತ್ವ ಮರೆಯುವುದಿಲ್ಲ […]

ಕಾರ್ಮಿಕ ದಿನದ ವಿಶೇಷ-ಕವಿತೆ

ನಾವು ಮತ್ತು ಅವರು ಶೋಭಾ ನಾಯ್ಕ. ಹಿರೇಕೈಕಂಡ್ರಾಜಿ. ನಾವು ಮತ್ತು ಅವರು ಇಲಿ ಕೊರೆದ ಮನೆ ಗೋಡೆಗೆ ಮಣ್ಣ ಮೆತ್ತಿಯೇ ಬಂದಿದ್ದಾರಿಲ್ಲಿ ಮಹಡಿ ಮನೆಗೆರಡು ಕಂಬ ಎಬ್ಬಿಸಲು ಅವರ ಮೈ ಬೆವರಿಗಷ್ಟು ಕೂಡಿಸಿ, ಕಳೆದು ಲೆಕ್ಕಹಾಕಿ ಕೂಲಿ ಕೊಡುವ ನಾವುಗಳು ನಮ್ಮ ಮೈ ಬೆವರನ್ನು ಹೇಳಿದಷ್ಟು ಕಟ್ಟಿ ಇಳಿಸಿ ಬರುತ್ತೇವೆ. ಸಂಜೆ ಮೀನು ಮತ್ತು ಮಾರುದ್ದ ಜಡೆಯ ಮಗಳಿಗೆರಡು ರಿಬ್ಬನ್ನು ಒಯ್ಯುವಾಗ ನಗುತ್ತವೆ ಅವರ ಕೈಯಲ್ಲಿ ನಾವೇ ಕೊಟ್ಟ ನೋಟುಗಳು ಇಲ್ಲಿನ ಬರಕತ್ತಿನ ಬದುಕ ಕಂಡು ಕೊನೆಗೂ […]

ಕಾರ್ಮಿಕ ದಿನದ ವಿಶೇಷ -ಲೇಖನ

ಕಾರ್ಮಿಕರ ದಿನಕ್ಕೊಂದು ಬೆಲೆ ಬರಬೇಕಿದೆ ಶಿವಲೀಲಾ ಹುಣಸಗಿ ಕಾರ್ಮಿಕರ ದಿನಕ್ಕೊಂದು ಬೆಲೆ ಬರಬೇಕಿದೆ ಇಂದು ಸಮಾನತೆ,ಅಸಮಾನತೆಗಳ ನಡುವೆ ತುಟಿಕಚ್ಚಿ ಹಿಡಿದು ಮೌನದೊಳಗೆ ತನ್ನಾತ್ಮವನ್ನು ಬಿಗಿದು ಒಡಲೊಳಗೆ ಅಗ್ನಿಯನ್ನು ಬಚ್ಚಿಟ್ಟು ನಡೆಯುವ ಸಂಸಾರದ ನೋಗವನ್ನು ಎಳೆಯುವ ಜೀವವೆಂದರೆ ಅದು ಹೆಣ್ಣು… ಸಾಧನೆಯ ಮೆಟ್ಟಿಲೇರಿದ ಮಹಿಳೆಯರ ಸಾಲು ಬೆರಳೆನಿಕೆಯಷ್ಟಿದ್ದರೂ,ಅದೇ ಮಹತ್ತರ ಶಿಖರವೆಂಬಂತೆ ಬಿಂಬಿಸಿ, ಮಹಿಳಾ ಸಬಲೀಕರಣವಾಗಿದೆಯೆಂದು ಕಾಣುವ ಪರಂಪರೆ ಭಾರತದ ನಾಗರಿಕ ಸಮಾಜದಲ್ಲಿ ಬೇರೂರಿದೆ..ನಮ್ಮ ದೇಶ ಪುರುಷ ಪ್ರಧಾನ ಸಮಾಜದ ಅಡಿಯಲ್ಲಿ ಮುಂದುವರೆದಿದ್ದಕ್ಕೆ ಇತಿಹಾಸ ಸಾಕ್ಷಿ….ಆದರೆ  ಸಾಧಕರೂ ಇನ್ನೂ ಎಲೆಮರೆಯಕಾಯಿಯಂತೆ […]

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ನಾವು ಕಾರ್ಮಿಕರು ಸಾಯಬಣ್ಣ ಮಾದರ ನಾವು ಕಾರ್ಮಿಕರು ನಮ್ಮಗರಿವಿಲ್ಲದೆ ಹಗಲು ಇರುಳು ಚಲಿಸುತ್ತಿವೆ ಕಷ್ಟಕಾರ್ಪಣ್ಯಕೆ ಬರವಿಲ್ಲದೆ ಚಲಿಸುತ್ತಿದೆ ಜೀವ ಮುಸುಕು ಹೊದ್ದು ಹಸುರನುಟ್ಟು ನಾಳೆ ಎಂಬುವುದು ಭಯವಿಲ್ಲದೆ! ತಲೆಯೊಡೆದು ಬದಕುವವರು ನಾವಲ್ಲ ಬರಿ ದುಡಿದು ತಿನ್ನುವರು ನಾವೆಲ್ಲ ! ನಿಮ್ಮ ಗೋಪುರ ಮೀನಾರಗಳಿಗೆ ನಮ್ಮ ಎಲುಬುಗಳೆ ಹಂದರವಾಗಿ ನಿಮ್ಮ ತೆವಳುವ ಕನಸುಗಳಿಗೆ ನಮ್ಮ ಸ್ವಪ್ನದೆಲೆಗಳಾಗಿ ಚಲಿಸುತ್ತಿದ್ದೇವೆ ಮಾಸಿದ ಬಣ್ಣ ಬಳಿದುಕೊಂಡು ನಿಮ್ಮ ಭಾಷೆ-ಭಾವಗಳು ನುಂಗಿ ಹಾಕಿವೆ ಎಷ್ಟೊಂದು ಜೀವಗಳು ಉಸಿರಿನ ಸಮಾಧಿಗಳ ಮೇಲೆ ಆಕಾಶದಲ್ಲಿ ಹಾರಾಡಿ […]

ಕಾರ್ಮಿಕದಿನದ ವಿಶೇಷ-ಲೇಖನ

ಅರ್ಥ ಕಳೆದುಕೊಳ್ಳುವ ಸಮಯ ಪ್ರಮೀಳಾ .ಎಸ್.ಪಿ.ಜಯಾನಂದ್. ಅರ್ಥ ಕಳೆದುಕೊಳ್ಳುವ ಸಮಯ. “ರೈತ ದೇಶದ ಬೆನ್ನೆಲುಬು” ಎನ್ನುವರು.ಹಸಿವು ಇಂಗಿಸುವ ಕಾಯಕ ಮಾಡುವ ರೈತ ದೇಹದ ಮತ್ತು ದೇಶದ ಆಧಾರ  ವಾಗಿರುವುದು ಸತ್ಯ. ಹಾಗಾಗಿಯೇ ದೇಶದ ಹಲವಾರು ಯೋಜನೆಗಳು ರೈತರ ಪರವಾಗಿ ಬಂದು ನಿಲ್ಲುತ್ತವೆ.ಆದರೆ ಕೃಷಿಭೂಮಿ ಇಲ್ಲದವರು,ಕಾರ್ಖಾನೆ ಗಳಲ್ಲಿ ದುಡಿಯುವ ಮಂದಿ,ಕೂಲಿ ಕಾರ್ಮಿಕರು, ಹಲವಾರು ಸ್ತರಗಳಲ್ಲಿ ದುಡಿದು ದೇಶದ ಅಭಿವೃದ್ಧಿಗೆ ಕರಣರಾಗುತ್ತಾರೆ.ಇವರುಗಳಲ್ಲಿ ಎರಡು ವಿಧ. 1-ಸಂಘಟಿತ ಕಾರ್ಮಿಕರು 2-ಅಸಂಘಟಿತ ಕಾರ್ಮಿಕರು. ಈ ದೇಶದ ಕಾರ್ಮಿಕ ಕಾಯ್ದೆಯು ಹಲವು ಸೌಲಭ್ಯಗಳು ಮತ್ತು […]

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ನಾಲ್ಕು ಶಬ್ದ ಮರಾಠಿ ಮೂಲ: ನಾರಾಯಣ ಸುರ್ವೆ ಕನ್ನಡಕ್ಕೆ: ಕಮಲಾಕರ ಕಡವೆ ನಾಲ್ಕು ಶಬ್ದ ಪ್ರತಿದಿನದ ರೊಟ್ಟಿಯ ಪ್ರಶ್ನೆ ಪ್ರತಿದಿನದ್ದೂ ಆಗಿದೆ ಒಮ್ಮೊಮ್ಮೆ ಗಿರಣಿ ಹೊರಗೆ, ಒಮ್ಮೊಮ್ಮೆ ಒಳಗೆ ಕಾರ್ಮಿಕನು ನಾನು, ಹರಿತ ಕತ್ತಿಯಂತವನು ಪಂಡಿತರೇ, ಕೊಂಚ ಅಪರಾಧ ಮಾಡಬೇಕಿದೆ ಸ್ವಲ್ಪ ಸಹಿಸಿದೆ, ನೋಡಿದೆ, ಯತ್ನಿಸಿದೆ ನಾನು ನನ್ನ ಜಗತ್ತಿನದೇ ಆದ ಪರಿಮಳವೂ ಅಲ್ಲಿದೆ ಆಗೀಗ ತಪ್ಪಿದೆ, ಸೋತೆ, ಹೊಸತನ್ನು ಕಲಿತೆ ಹೇಗೆ ಬಾಳುತಿರುವೇನೋ ಹಾಗೇ ನನ್ನ ಮಾತಿದೆ ರೊಟ್ಟಿ ಬೇಕು ಸರಿಯೇ, ಮತ್ತೂ ಏನೋ […]

Back To Top