ಭರವಸೆಯ ಬದುಕು
ಪ್ರತಿಭಾ ಹಳಿಂಗಳಿ
ಭರವಸೆಯ ಬದುಕು
ದುಡಿಯುವ ಕೈಗಳೇ
ನಿವೇನು ಬೇಡುತಿರುವಿರಿ
ಹೊತ್ತು, ಹೊತ್ತಿನ ಊಟ
ಇರಲೊಂದು ನೆಲೆ
ಇಷ್ಟು ಸಾಕಲ್ಲವೇ?
ಇಲ್ಲ ಸಾಕಾಗಲಿಲ್ಲ
ನಾವೇನು ಯಂತ್ರಗಳಲ್ಲ,
ನಮ್ಮ ದೇಹದಲ್ಲೂ
ಹರಿದಾಡುತಿದೆ ರಕ್ತ
ಅದು ಕೂಡ ಕೆಂಪಲ್ಲವೇ
ನಿಮ್ಮೆಲ್ಲರ ಹಾಗೆ.
ಬೆವರು ಸುರಿಯುತಿಹೆ
ನಮ್ಮ ಹಣೆಯ ಮೇಲೆ
ಅದು ಯಾರದೋ
ಸಂಪತ್ತಿನ ಬಂಡವಾಳವಂತೆ
ಹಗಲು, ರಾತ್ರಿ ಶ್ರಮವಹಿಸಿ
ಮೈಯೆಲ್ಲ ಹಣ್ಣಾಗಿಸಿ
ದುಡಿಯುತಿರೆ ನಾವು
ನೀವು ಕೊಡುವ ಕಾಸು
ಧರ್ಮದ್ದೇನಲ್ಲ.
ಇಂದು ಬೆವರು ಹರಿಸಿದಾಗಲೇ ದೊರಕುವದು ಅನ್ನ
ಸಿಗದೆ ಹೋದರೆ ಕೆಲಸ
ದಿನವೂ ಉಪವಾಸವೇ.
ಯಾರಿಗೂ ತಿಳಿಯದು
ಈ ತಳಮಳ
ನಮ್ಮ ಬದುಕು ಎಂದಿಗೂ
ಹಾದಿ,ಬೀದಿಯಲ್ಲಿಯೇ
ಭರವಸೆ,ಭದ್ರತೆ ,ಕನಿಷ್ಠ
ಗೌರವವು ಇಲ್ಲದೆ
ನಡೆಯುತಿದೆ ನಮ್ಮ
ಜೀವನ.
******