Month: March 2020

ಪುಸ್ತಕ ಪರಿಚಯ

ನೂರು ಜನಪದ ಹಾಡುಗಳು ಕೆ.ಶಿವು ಲಕ್ಕಣ್ಣವರ ಬೈಲೂರ ಬಸವಲಿಂಗಯ್ಯನವರ ಸಮೃದ್ಧ ಜನಪದ ಹಾಡಿನ‌ ಕೃತಿಯೇ ‘ನೂರು ಜನಪದ ಹಾಡುಗಳು’‌ ಎಂಬ ಪುಸ್ತಕವು! ಪ್ರಸ್ತುತವಾಗಿ ಈ ‘ನೂರು ಜನಪದ ಹಾಡುಗಳು’ ಕೃತಿಯು ವಿಸ್ತೃತವಾಗಿ ಗರ್ಭಸೇರಲಿದ್ದ ಬೀಸೂಕಲ್ಲಿನ ಪದಗಳು, ಸೋಬಾನೆ ಪದಗಳು, ಜೋಗುಳ ಪದಗಳು, ಚೌಡಿಕೆ ಪದಗಳು, ಕಿನ್ನರಿ ಪದಗಳು, ಹಬ್ಬದ ಹಾಡುಗಳು, ಕೋಲಾಟದ ಪದಗಳು, ಗೀಗೀ ಪದಗಳು, ಹೀಗೆಯೇ ಹತ್ತಾರು ಪ್ರಕಾರಗಳನ್ನು ಒಳಗೊಂಡಿದೆ ಈ ‘ನೂರು ಜನಪದ ಹಾಡುಗಳು’ ಎಂಬ ಕೃತಿಯು… ಒಟ್ಟಾರೆ ಜನಪದ ಹಾಡು ಅಥವಾ ಜಾನಪದವೆಂದರೆ […]

ಕಾವ್ಯಯಾನ

ಗಝಲ್ ಡಾ.ಗೋವಿಂದಹೆಗಡೆ ಪ್ರಾಜ್ಞ ಎಂದುಕೊಂಡವರ ಸೋಗಲಾಡಿತನಕ್ಕೆ ನಗು ಬರುತ್ತದೆ ಬೇಲಿಯ ಮೇಲೆ ಕೂತವರ ದಿವಾಳಿತನಕ್ಕೆ ನಗು ಬರುತ್ತದೆ ಸೂರ್ಯ ಬೆಳಗುವನೆಂದರೆ ಸಾಕ್ಷಿ ಕೇಳುವರು ಇವರು ನೋಡು ತನಗೇ ತಾನು ಹುಸಿಯಾದ ಈ ಅಧಃಪತನಕ್ಕೆ ನಗು ಬರುತ್ತದೆ ರತ್ನದ ಕಾಂತಿಗೆ ಯಾರ ಶಿಫಾರಸಿನ ಹಂಗೇನಿದೆ ಹೇಳು ತಿಳಿದೂ ಬೊಗಳುವವರ ಧಾಡಸೀತನಕ್ಕೆ ನಗು ಬರುತ್ತದೆ ಕಪ್ಪುಕನ್ನಡಕ ಧರಿಸಿದರೆ ಕಣ್ಣನಷ್ಟೇ ಮರೆಸಬಹುದು ಜಗವನ್ನೇ ಯಾಮಾರಿಸುವ ಮಂಕುತನಕ್ಕೆ ನಗು ಬರುತ್ತದೆ “ನಾ ಕಂಡ ಮೊಲಕ್ಕೆ ಮೂರೇ ಕೊಂಬು” ಎಂಥ ವಾದ ‘ಜಂಗಮ’ ಅಡಿಪಾಯವಿಲ್ಲದೇ […]

ಪರಿಚಯ

ಕೇಶವರೆಡ್ಡಿ ಹಂದ್ರಾಳ ಕೆ.ಶಿವು ಲಕ್ಕಣ್ಣವರ ಕೇಶವರೆಡ್ಡಿ ಹಂದ್ರಾಳರವರು ಅಗ್ನಿ ಶ್ರೀಧರರ ವಾರಪತ್ರಿಕೆಯಾದ ‘ಅಗ್ನಿ’ಯಲ್ಲಿ ‘ಒಕ್ಕಲ ಒನಪು’ ಅಂಕಣ ಬರೆಯುತ್ತಿದ್ದರು. ಇವರು ‘ಅಗ್ನಿ’ಗೆ ಬರೆಯಲು ಪ್ರಾರಂಭಿಸಿದ್ದು ‘ಅಗ್ನಿ’ಯ ಎರಡನೇ ಕಚೇರಿ ಶುರುವಾದ ಮೇಲೆ. ಒಟ್ಟಾರೆ ಆಗಿ ‘ಅಗ್ನಿ’ಯಲ್ಲಿಯ ಇವರ ಅಂಕಣವಾದ ‘ಒಕ್ಕಲ-ಒನಪು’ ಆ ಹೊತ್ತಿಗೆ ಭಾರಿ ಪ್ರಚಾರ ಪಡೆದುಕೊಂಡಿತ್ತು. ಅಂದರೆ ಅಷ್ಟು ಸೊಗಸಾಗಿ ‘ಮಣ್ಣಿನ ಗುಣ’ ಪಡೆದುಕೊಂಡಿತ್ತು. ಇವರೊಂದಿಗಿದ್ದ ಅನೇಕರ ಅಂಕಣಗಳೂ ಸೊಗಸಾಗಿದ್ದವು. ಅವರ ಬಗೆಗೆ ನಂತರ ಬರೆಯುತ್ತೇನೆ. ಈಗ ಕೇಶವರೆಡ್ಡಿ‌ ಹಂದ್ರಾಳರ ಬಗೆಗೆ ಚಿಕ್ಕ ಲೇಖನದ ಮೂಲಕ […]

ಅನುವಾದ ಸಂಗಾತಿ

ಅವರು ಬಂದಿದ್ದಾರೆ ಮೂಲ: ಅಲ್ಫಾನ್ಸಿನಾ ಸ್ಟಾರ್ನಿ (ಅರ್ಜೆಂಟೈನಾ) ಕನ್ನಡಕ್ಕೆ: ಕಮಲಾಕರ ಕಡವೆ ಅವರು ಬಂದಿದ್ದಾರೆ ಇಂದು ನನ್ನ ಅಮ್ಮ ಮತ್ತು ಅಕ್ಕನನ್ನ ನೋಡಲು ಬಂದಿದ್ದಾರೆ ಬಹಳ ಕಾಲ ಒಬ್ಬಂಟಿ ಇದ್ದೆ ನಾನುನನ್ನ ಕವಿತೆಯ ಜತೆ, ಗರ್ವದ ಜತೆ…ಮತ್ತೇನೂ ಇರಲಿಲ್ಲ ನನ್ನ ಹಿರಿಯಕ್ಕ, ದೊಡ್ಡವಳಾಗಿದ್ದಾಳೆ, ಕೆಂಚು ಕೂದಲವಳುಅವಳ ಕಣ್ಣ ತುಳುಕಿದೆ ಮೂಲಭೂತ ಕನಸುನಾನೆಂದೆ ಕಿರಿಯಳಿಗೆ: “ಬದುಕು ಬಲು ಸಿಹಿ.ಕೆಟ್ಟದ್ದೆಲ್ಲ ಕೊನೆಯಾಗುತ್ತದೆ. ಅಮ್ಮ ನಕ್ಕಳು, ಎಲ್ಲರ ಆಂತರ್ಯ ಅರಿತವರು ನಗುವಂತೆ;ನನ್ನ ಭುಜಗಳ ಮೇಲೆ ತನ್ನೆರಡೂ ಕೈಗಳ ಇಟ್ಟಳುನನ್ನನ್ನೇ ಕಣ್ಣುನೆಟ್ಟು ನೋಡಿದಳುನನಗೆ […]

ಕಥಾಯಾನ

ಆಕಾಂಕ್ಷಿ ಅಶ್ವಥ್ ವ್ಯಾಪಾರಿ ಬುದ್ಧಿಯಿಲ್ಲದ ಬೀದಿವ್ಯಾಪಾರಿ ರಾಮು, ಬಂದಿರುವ ಬೀದಿಯ ಗ್ರಾಹಕರಿಗೆ ಏನು ಬೇಕೆಂದು ಕೇಳುವುದು, ಅದಕ್ಕೆ ಹಣ ಎಷ್ಟು  ಎಂದು ಹೇಳಿ ಹೆಚ್ಚಿಗೆ ಹಣ ಕೊಟ್ಟವರಿಗೆ ಚಿಲ್ಲರೆ ಕೊಡುವುದರ ಹೊರತಾಗಿ ಒಂದೇ ಒಂದು ಹೆಚ್ಚಿನ ಮಾತನ್ನೂ ಆಡುವವನಲ್ಲ. ಇನ್ನು ಗಿಲೀಟಿನ ಮಾತು ಅಂದರೆ ಅವನಿಗೆ ಪರದೇಶೀ ಭಾಷೆಯೇನೋ ಅನ್ನುವಷ್ಟು ದೂರವೆನಿಸುವುದು.          ನಿತ್ಯವೂ ಬಿಳಿಕೆರೆ ಸರ್ಕಲ್ಲಿನ ರಾಯರ ಮಠದ ಹಿಂಭಾಗದಲ್ಲಿ, ಬೆಳಿಗ್ಗೆ ತಳ್ಳುವ ಗಾಡಿಯಲ್ಲಿ ಇಡ್ಲಿ ಮಾರುತ್ತಾ, ಸಂಜೆ ಹೊತ್ತಿನಲ್ಲಿ  ಬೇಲ್ ಪೂರಿ, ಚುರುಮುರಿ ಮಸಾಲೆ […]

ಕಥಾಯಾನ

ಜುಗ್ಗ ರಾಮಣ್ಣ ಕು.ಸ.ಮಧುಸೂದನ ಜುಗ್ಗ ರಾಮಣ್ಣ ಊರಲ್ಲಿ ಎಲ್ಲರೂ ರಾಮಣ್ಣನನ್ನು ಕರೆಯುತ್ತಿದ್ದುದು ಜುಗ್ಗ ರಾಮಣ್ಣ ಅಂತಲೆ. ಅವನ ಮನೆ ಇದ್ದ ಬೀದಿಯ ಉಳಿದ ಮನೆಗಳವರು ತಮ್ಮ ನೆಂಟರಿಗಾಗಲಿ, ಪರಿಚಯದವರಿಗಾಗಲಿ ಮನೆಯ ವಿಳಾಸ ಕೊಡಬೇಕಾದರೆ ಬಸ್ ಸ್ಟ್ಯಾಂಡಿನಿಂದ ದಾವಣಗೆರೆ ರಸ್ತೆಯ ಕಡೆ ನಾಲ್ಕು ಹೆಜ್ಜೆ ಬಂದು ಜುಗ್ಗ ರಾಮಣ್ಣನ ಬೀದಿ ಎಲ್ಲಿ ಬರುತ್ತೆ ಅಂತ ಯಾರನ್ನೇ ಕೇಳಿದರೂ ಸಾಕು ನಾವಿರುವ ಬೀದಿ ತೋರಿಸ್ತಾರೆ ಅಂತ. ಅಷ್ಟರಮಟ್ಟಿಗೆ ಆ ಊರಿನವರು ಆ ಹೆಸರಿಗೆ ಹೊಂದಿಕೊಂಡು ಬಿಟ್ಟಿದ್ದರು. ಇದು ರಾಮಣ್ಣನ ಮನೆಯವರಿಗಷ್ಟೆ […]

ಕಾವ್ಯಯಾನ

ರೆಕ್ಕೆ ಬಿಚ್ಚಲು ಪ್ಯಾರಿಸುತ ಎಲ್ಲಿ ನೀನಿಲ್ಲವೋ… ಎಲ್ಲಿ ನೀನಿಲ್ಲವೋ ಅಲ್ಲಿ ನಾನೂ ಇಲ್ಲ ಅದು ನಿಲಯವಾಗಿದ್ದರು, ಆಲಯದಂತಿದ್ದರೂ, ಇದ್ದರೂ ಅದು ಶರೀರವಷ್ಟೇ..! ಮನಸು ನಿನ್ನ ಬೆನ್ನು ಬಿದ್ದಿದೆ ಆ ಕರಿನೆರಳಿನಂತೆ, ಮಾರುದ್ದ ಜಡೆಗೆ ಮುಡಿದ ಮಲ್ಲಿಗೆಯಂತೆ, ಹಿಂದೆ ಅಲೆಯುವ ಸೀರೆಸೆರಗಿನ ಗಾಳಿಯಂತೆ, ಗಾಳಿಯಲ್ಲಿ ಬರುವ ಹೂಡಿದೂಳಿನಂತೆ ಯಾವಾಗಲೂ ನೀ ನನ್ನಲ್ಲೇ ಇರುವೆ ಸದಾ ನೀರಿನಲಿರುವ ಮೀನಿನಂತೆ ನೀ ಪ್ರೇತವೆಂದರು,ಭೂತವೆಂದರು…! ನಾನಂತೂ ನಿನ್ನ ಬೆನ್ನು ಬಿಡೇನು ನಿನ್ನೊಮ್ಮೆ ತಿರುಗಿ ನೋಡುವಂತಿದ್ದರೆ ನಾ ಯಾವಾಗಲೂ ನಿನ್ನ ಕಣ್ಣ ಮುಂದೆ ಕಾಯ […]

ಕಾವ್ಯಯಾನ

ಕವಿತೆ ವಿಜಯಶ್ರೀ ಹಾಲಾಡಿ ಚಿತ್ರ ಬಿಡಿಸುವ ಮರಚಳಿಗೆ ನರಳಿ ಇಬ್ಬನಿಅಡರಿ ಹಿಮಗಾಳಿಶೀತ ಹಿಡಿದುಕೊಂಡಿದೆ ಗಳಿತ ಎಲೆಯೊಂದುಹಳದಿ ಉಸಿರಿನ ಕೂಡೆಮಣ್ಣಿಗೆ ಸೋಕಿ ನಿಡಿದುನಿರಾಳ ಅಪ್ಪಿಕೊಂಡಿದೆ ಧೂಳ ಹೆಜ್ಜೆಗಳಲ್ಲಿಪಾದವೂರಿದ ಬೀಜಮುಗಿಲೂರಿನ ಕನಸರಂಗುಗಳ ಕವಿದುಕೊಂಡಿದೆ ಮೈಮುರಿದು ಆಕಳಿಸುವನಿಗೂಢ ಇರುಳು ಮಾತ್ರಬಿಟ್ಟ ಕಣ್ಣು ಬಿಟ್ಟಹಾಗೆಗೂಬೆದನಿಗೆ ಆಲಾಪಿಸಿದೆ. *******

ಹೊತ್ತಾರೆ

ಅಮ್ಮನ ಅಡುಗೆ ಅಮೆರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಅಜ್ಜಿಯನ್ನು ನಾನು ಅಮ್ಮ ಅಂತ ಕರೆಯುತ್ತಿದ್ದುದು. ನನ್ನ ಬಾಲ್ಯದ ಮುಕ್ಕಾಲು ಪಾಲಿಗಿಂತಲೂ ಹೆಚ್ಚು ಅಮ್ಮನ ಜೊತೆಯಲ್ಲೇ ಕಳೆದಿದ್ದರಿಂದ ನೆನಪುಗಳ ರಾಶಿಯೇ ಇದೆ. ಹಾಗಾಗಿ ನಾನು ನಿಧಾನವಾಗಿ ಸಂದರ್ಭಗಳನ್ನೆಲ್ಲ ಪೋಣಿಸುತ್ತಾ ಒಂದೊಂದೇ ಬರಹ ಬರೆಯುತ್ತಿರುತ್ತೇನೆ. ಮುಂದೆ ಎಲ್ಲವನ್ನೂ ಕ್ರೋಢೀಕರಿಸುವುದೂ ಆಗುತ್ತದೆ. ಒಂದಂತೂ ನಿಜ ಇದುವರೆಗಿನ ನನ್ನ ಬದುಕಿನ ಎಂತಹದ್ದೇ ಮುಖ್ಯ ಸಂದರ್ಭವಾದರೂ ಅಲ್ಲಿ ಅಮೂರ್ತವಾಗಿ ಅಮ್ಮ ಇದ್ದೇ ಇರುತ್ತಾರೆ. ನನಗಿನ್ನೂ ನೆನಪಿದೆ. ನನಗೆ ಬುದ್ಧಿ ತಿಳಿಯುವಾದಾಗಿಂದಲೂ, ಅಮ್ಮ ನಿತ್ಯವೂ ಕೋಳಿ […]

ಕಾವ್ಯಯಾನ

ಗಾಂಧಿ ನಕ್ಕರು ಅಶ್ವಥ್ ಗಾಂಧಿ ನಕ್ಕರು ಗಾಂಧಿತಾತ ರಾಷ್ಟ್ರಪಿತ ತನ್ನೊಳಗೇ ತಾನು ದೈವಭಕ್ತ ಸಂಪತ್ತಿನುತ್ತುಂಗ ಎಂಜಿ ರಸ್ತೆ ಗಾಂಧಿಗೆಂದು ಮೀಸಲಂತೆ ಬೀದಿ ಬದಿಯ ಬಡವನ ಪಾಲು ಚಿತ್ರಮಂದಿರದ ಕೊನೆಯ ಸಾಲು ಕಣ್ಣರಳಿಸಿ ಕತ್ತನೆತ್ತಿ ತುಣುಕು ತುಣುಕೇ ದೃಶ್ಯವುಂಡು ಬೆರಗಾಗುವ ಬೆಪ್ಪನ ಕಂಡು ಗಾಂಧಿ, ಸುಮ್ಮನೆ ನಕ್ಕುಬಿಟ್ಟರು ಹೊಸ ಕಾಲದ ಅಭ್ಯುದಯಕೆ ಒಂದು ಸಂಜೆ ಕಾರ್ಯಕ್ರಮಕೆ ಸೆಲ್ಫಿ ತೆಗೆದುಕೊಳ್ಳಲೊಂದು ಪೊರಕೆ ತಂದು, ಕ್ಯಾಮರ ಬಂದು ಸಾವಧಾನ ಕೊಂಡುತಂದು ಗಾಂಧಿಯನ್ನು ಬಳಸಿಕೊಂಡು ನೀರು ಸಿಂಪಡಿಸಿಕೊಂಡು ಹುಸಿಬೆವರು ಬರಿಸಿಕೊಂಡು ಸಮಾಧಾನ ಭಂಗಿಯಲ್ಲಿ […]

Back To Top