ಕಾವ್ಯಯಾನ

ಗಝಲ್

ಡಾ.ಗೋವಿಂದಹೆಗಡೆ

ಪ್ರಾಜ್ಞ ಎಂದುಕೊಂಡವರ ಸೋಗಲಾಡಿತನಕ್ಕೆ ನಗು ಬರುತ್ತದೆ
ಬೇಲಿಯ ಮೇಲೆ ಕೂತವರ ದಿವಾಳಿತನಕ್ಕೆ ನಗು ಬರುತ್ತದೆ

ಸೂರ್ಯ ಬೆಳಗುವನೆಂದರೆ ಸಾಕ್ಷಿ ಕೇಳುವರು ಇವರು ನೋಡು
ತನಗೇ ತಾನು ಹುಸಿಯಾದ ಈ ಅಧಃಪತನಕ್ಕೆ ನಗು ಬರುತ್ತದೆ

ರತ್ನದ ಕಾಂತಿಗೆ ಯಾರ ಶಿಫಾರಸಿನ ಹಂಗೇನಿದೆ ಹೇಳು
ತಿಳಿದೂ ಬೊಗಳುವವರ ಧಾಡಸೀತನಕ್ಕೆ ನಗು ಬರುತ್ತದೆ

ಕಪ್ಪುಕನ್ನಡಕ ಧರಿಸಿದರೆ ಕಣ್ಣನಷ್ಟೇ ಮರೆಸಬಹುದು
ಜಗವನ್ನೇ ಯಾಮಾರಿಸುವ ಮಂಕುತನಕ್ಕೆ ನಗು ಬರುತ್ತದೆ

“ನಾ ಕಂಡ ಮೊಲಕ್ಕೆ ಮೂರೇ ಕೊಂಬು” ಎಂಥ ವಾದ ‘ಜಂಗಮ’
ಅಡಿಪಾಯವಿಲ್ಲದೇ ಮಹಲೆಬ್ಬಿಸುವ ಜಾಣತನಕ್ಕೆ ನಗು ಬರುತ್ತದೆ

*****

Leave a Reply

Back To Top