ಕೇಶವರೆಡ್ಡಿ ಹಂದ್ರಾಳ
ಕೆ.ಶಿವು ಲಕ್ಕಣ್ಣವರ
ಕೇಶವರೆಡ್ಡಿ ಹಂದ್ರಾಳರವರು ಅಗ್ನಿ ಶ್ರೀಧರರ ವಾರಪತ್ರಿಕೆಯಾದ ‘ಅಗ್ನಿ’ಯಲ್ಲಿ ‘ಒಕ್ಕಲ ಒನಪು’ ಅಂಕಣ ಬರೆಯುತ್ತಿದ್ದರು. ಇವರು ‘ಅಗ್ನಿ’ಗೆ ಬರೆಯಲು ಪ್ರಾರಂಭಿಸಿದ್ದು ‘ಅಗ್ನಿ’ಯ ಎರಡನೇ ಕಚೇರಿ ಶುರುವಾದ ಮೇಲೆ. ಒಟ್ಟಾರೆ ಆಗಿ ‘ಅಗ್ನಿ’ಯಲ್ಲಿಯ ಇವರ ಅಂಕಣವಾದ ‘ಒಕ್ಕಲ-ಒನಪು’ ಆ ಹೊತ್ತಿಗೆ ಭಾರಿ ಪ್ರಚಾರ ಪಡೆದುಕೊಂಡಿತ್ತು. ಅಂದರೆ ಅಷ್ಟು ಸೊಗಸಾಗಿ ‘ಮಣ್ಣಿನ ಗುಣ’ ಪಡೆದುಕೊಂಡಿತ್ತು. ಇವರೊಂದಿಗಿದ್ದ ಅನೇಕರ ಅಂಕಣಗಳೂ ಸೊಗಸಾಗಿದ್ದವು. ಅವರ ಬಗೆಗೆ ನಂತರ ಬರೆಯುತ್ತೇನೆ. ಈಗ ಕೇಶವರೆಡ್ಡಿ ಹಂದ್ರಾಳರ ಬಗೆಗೆ ಚಿಕ್ಕ ಲೇಖನದ ಮೂಲಕ ನೋಡೋಣ…
ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಕೇಶವರೆಡ್ಡಿ ಹಂದ್ರಾಳ ಅವರು 22-07-1957 ರಲ್ಲಿ ಮಧುಗಿರಿ ತಾಲೂಕಿನ ಹಂದ್ರಾಳದಲ್ಲಿ ಜನಿಸಿದವರು…
ಹಂದ್ರಾಳದಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು 7ನೇ ತರಗತಿಯಲ್ಲಿ ರ್ಯಾಂಕ್ ಪಡೆದವರು. ನಂತರ ಬೆಂಗಳೂರಿನ ಚಿಕ್ಕಪೇಟೆಯಲ್ಲಿದ್ದ ಭಾರತೀಯ ವಿದ್ಯಾಶಾಲೆಗೆ ಸೇರಿದರು…
ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಅವರ ಪರಿಚಯವಾಗಿ, ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಮುಂದೆ ಆನಂದರಾವ್ ಸರ್ಕಲ್‍ನಲ್ಲಿದ್ದ ಎಸ್.ಜೆ.ಆರ್.ಸಿ.ಯಲ್ಲಿ ಪಿ.ಯು.ಸಿ.ಗೆ ಸೇರಿಕೊಂಡರು…
ಆ ಸಮಯದಲ್ಲಿ ಜೆ.ಪಿ. ಚಳವಳಿಯಲ್ಲಿ ಭಾಗವಹಿಸಿದರು. ದಲಿತ, ರೈತ ಚಳವಳಿ ಹಾಗೂ ಗೋಕಾಕ್ ಚಳವಳಿಯಲ್ಲೂ ಭಾಗವಹಿಸಿದರು…
1981ರಲ್ಲಿ ಪ್ರಥಮ ದರ್ಜೆಯಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪಾಸಾದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಅವರು ಆರು ವರ್ಷಗಳ ಕಾಲ ಉಪನ್ಯಾಸಕ ವೃತ್ತಿಯಲ್ಲಿದ್ದರು.
ಆನಂತರ 1987ರಲ್ಲಿ ಕೆ.ಎ.ಎಸ್. ಪಾಸು ಮಾಡುವ ಮೂಲಕ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಹಾಗೂ ಉಪ ಆಯುಕ್ತರಾಗಿ ಕೆಲಸ ಮಾಡಿದರು…
ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೇಶವರೆಡ್ಡಿ ಹಂದ್ರಾಳರವರ ಪ್ರಕಟಿತ ಕೃತಿಗಳೆಂದರೆ–
ಹಂದ್ರಾಳ, ಅಂತಃಪುರ, ಬರದ ನಾಡಿನಲ್ಲಿ ಬೆಳದಿಂದಳು, ಜಡೆಗೆ ಗುಲ್ ಮೊಹರ್ ಕೈಗಳು, ಒಂದು ಹಿಡಿ ಮಣ್ಣು, ಬಾರಕ್ಕ ಬೆಳದಿಂಗಳೆ. ಈ ಕ್ಷಣದ ಬುದ್ಧ ಅವರ ಕೆಲವು ಕಥಾ ಸಂಗ್ರಹಗಳು. ಒಕ್ಕಲ ಒನಪು, ಮರೆತ ಭಾರತ- ಪ್ರಬಂಧ ಸಂಕಲನಗಳು, ಸಿನಿಮಾ, ಧಾರಾವಾಹಿಗಳಿಗೆ ಕಥೆ, ಸಂಭಾಷಣೆ ಬರೆದಿದ್ದಾರೆ, ನನ್ನ ಕ್ರಾಂತಿಯ ಹುಡುಗಿ ಅವರ ಕವನ ಸಂಗ್ರಹ…
ಕೇಶವರೆಡ್ಡಿ ಹಂದ್ರಾಳರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹಲವು ಗೌರವ, ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಮಾಸ್ತಿ ಕಥಾ ಪುರಸ್ಕಾರ, ಪುಸ್ತಕ ಸೊಗಸು ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಲಭಿಸಿವೆ…
ಕೇಶವರೆಡ್ಡಿ ಹಂದ್ರಾಳರವರ ಬಗೆಗೆ ಸಂಕ್ಷಿಪ್ತವಾಗಿ ಒಂದಷ್ಟು–
ಕೇಶವರೆಡ್ಡಿ ಹಂದ್ರಾಳರವರು ಆರು ವರ್ಷ ಉಪನ್ಯಾಸಕರಾಗಿ ಕೆಲಸ ಮಾಡಿದರು. 1987ರಲ್ಲಿ ಕೆ.ಎ.ಎಸ್. ಪಾಸು ಮಾಢಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಹಾಗೂ ಉಪ ಆಯುಕ್ತರಾಗಿ ಕೆಲಸ ಮಾಡಿದರು…
ಕೇಶವರೆಡ್ಡಿಯವರು ಮದ್ದೂರಿನ ಚಂದ್ರಕಲಾ ಅವರನ್ನು ಪ್ರೀತಿಸಿ ಸರಳವಾಗಿ ವಿವಾಹ ಮಾಡಿಕೊಂಡರು. ಅವರಿಗೆ ಕ್ರಾಂತಿ, ಸಿರಿವೆನ್ನೆಲು ಎಂಬ ಇಬ್ಬರು ಮಕ್ಕಳಿದ್ದಾರೆ…
ಕೇಶವರೆಡ್ಡಿ ಹಂದ್ರಾಳರವರು ಸುಮಾರು 500 ಕಥೆಗಳನ್ನು ಬರೆದಿದ್ದಾರೆ…
ಅವರ ಕವನ ಸಂಕಲನಗಳು ಹೀಗಿದೆ–
ನನ್ನ ಕ್ರಾಂತಿಯ ಹುಡುಗಿ…
ಪ್ರಬಂಧ ಸಂಕಲನಗಳು ಹೀಗಿವೆ–
ಒಕ್ಕಲ ಒನಪು
ರಾಜಧಾನಿಯ ರಸ್ತೆಗಳಲ್ಲಿ
ಮರೆತ ಭಾರತ
ನೆಲದ ಕಣ್ಣು
ಅವರು ಪಡೆದ ಪ್ರಶಸ್ತಿಗಳು–
ಮಾಸ್ತಿ ಕಥಾ ಪುರಸ್ಕಾರ
ಪುಸ್ತಕ ಸೊಗಸು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2005, 2006)..!
ಒಟ್ಟಾರೆಯಾಗಿ ಕೇಶವರೆಡ್ಡಿ ಹಂದ್ರಾಳರ ‘ಮಣ್ಣಿನ ಗುಣ’ದ ‘ಒಕ್ಕಲ-ಒನಪು’ ಅಂಕಣ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಅದಕ್ಕೂ ಮಿಗಿಲಾಗಿ ‘ಅಗ್ನಿ’ ಬಳಗದ ಬಲು ಪ್ರೀತಿಯ ಅಂಕಣವಾಗಿತ್ತು ಎಂದು ಹೇಳುತ್ತಾ ಈ ಬರಹ ಮುಗಿಸುತ್ತೇನೆ…
**********