ಅವರು ಬಂದಿದ್ದಾರೆ
ಮೂಲ: ಅಲ್ಫಾನ್ಸಿನಾ ಸ್ಟಾರ್ನಿ (ಅರ್ಜೆಂಟೈನಾ)
ಕನ್ನಡಕ್ಕೆ: ಕಮಲಾಕರ ಕಡವೆ
ಅವರು ಬಂದಿದ್ದಾರೆ
ಇಂದು ನನ್ನ ಅಮ್ಮ ಮತ್ತು ಅಕ್ಕ
ನನ್ನ ನೋಡಲು ಬಂದಿದ್ದಾರೆ
ಬಹಳ ಕಾಲ ಒಬ್ಬಂಟಿ ಇದ್ದೆ ನಾನು
ನನ್ನ ಕವಿತೆಯ ಜತೆ, ಗರ್ವದ ಜತೆ…ಮತ್ತೇನೂ ಇರಲಿಲ್ಲ
ನನ್ನ ಹಿರಿಯಕ್ಕ, ದೊಡ್ಡವಳಾಗಿದ್ದಾಳೆ, ಕೆಂಚು ಕೂದಲವಳು
ಅವಳ ಕಣ್ಣ ತುಳುಕಿದೆ ಮೂಲಭೂತ ಕನಸು
ನಾನೆಂದೆ ಕಿರಿಯಳಿಗೆ: “ಬದುಕು ಬಲು ಸಿಹಿ.
ಕೆಟ್ಟದ್ದೆಲ್ಲ ಕೊನೆಯಾಗುತ್ತದೆ.
ಅಮ್ಮ ನಕ್ಕಳು, ಎಲ್ಲರ ಆಂತರ್ಯ ಅರಿತವರು ನಗುವಂತೆ;
ನನ್ನ ಭುಜಗಳ ಮೇಲೆ ತನ್ನೆರಡೂ ಕೈಗಳ ಇಟ್ಟಳು
ನನ್ನನ್ನೇ ಕಣ್ಣುನೆಟ್ಟು ನೋಡಿದಳು
ನನಗೆ ಕಣ್ಣಲ್ಲಿ ನೀರು ಬಂತು.
ಮನೆಯಲ್ಲೇ ಬೆಚ್ಚಗಿನ ಕೋಣೆಯಲ್ಲಿ
ಕೂತು ಉಂಡೆವು
ವಸಂತದ ಮುಗಿಲು….
ಅದನ್ನು ಕಾಣಲು, ಕಿಟಕಿ ತೆರೆದೆವು.
ನಾವು ಸುಮ್ಮನೆ ಹಳೆಯದನೆಲ್ಲ ಮೆಲುಕುತ್ತ
ಕೂತಿದ್ದಾಗ
ನನ್ನ ತಂಗಿ – ಕಿರಿಯವಳು – ನಡುವೆ ಮಾತು ತೆಗೆಯುತ್ತಾಳೆ:
*******