Year: 2020

ಒಕ್ಕಲುತನ

ಇನ್ನ ಕಬ್ಬ ಸುಲದು ರಸಾ ಹೀರೂದು ನಮ್ ಜನಕ್ಕೆ ಭಾರೀ ಸಲೀಸು. ಒಂದ ಕೈಯಾಗ ಸೈಕಲ್ ಹಿಡದು ಮತ್ತೊಂದ ಕೈಯಾಗ ಕಬ್ಬ ತಿನಕೋತ ಹೋಗವರನ್ನ ನೀವು ಎಲ್ಲೆಲ್ಲೂ ನೋಡಬಹುದು.

ಗಜಲ್

ಗಜಲ್ ಶ್ರೀ ಲಕ್ಷ್ಮಿ ಅದ್ಯಪಾಡಿ ನಿನ್ನ ಉಸಿರ ರಾಗಕ್ಕಾಗಿ ಹುಡುಕಾಡುತ್ತಿರುವೆನಿನ್ನ ಒಲವ ಪಿಸುನುಡಿಗಾಗಿ ಹುಡುಕಾಡುತ್ತಿರುವೆ.. ಕದ್ದು ನೋಡುವ ಸಾವಿರಾರು ಕಣ್ಣುಗಳ ನಡುವೆನಿನ್ನ ಪ್ರೇಮದ ನೋಟಕ್ಕಾಗಿ ಹುಡುಕಾಡುತ್ತಿರುವೆ.. ನನ್ನ ಕುಡಿ ನೋಟಕ್ಕೆ ಕಾದಿವೆ ನೂರು ಭ್ರಮರಗಳುಕೆನ್ನೆ ಸವರಿದ ಪುಟ್ಟ ಹೂವಿಗಾಗಿ ಹುಡುಕಾಡುತ್ತಿರುವೆ.. ಬಣ್ಣಗಳಲ್ಲಿ ಅದ್ದಿದ ಸಾವಿರ ಕುಂಚಗಳು ಕಾದಿವೆನಿನ್ನ ನೆನಪಿನ ಒಂದು ರೇಖೆಗಾಗಿ ಹುಡುಕಾಡುತ್ತಿರುವೆ ಜಗದ ಬನದೊಳು ಅರಳಿವೆ ವಿಧವಿಧವಾದ ಹೂಗಳುಒಡಲ ಕಂಪು ಸೂಸಿದ ಕಸ್ತೂರಿಗಾಗಿ ಹುಡುಕಾಡುತ್ತಿರುವೆ *****************************

ಗಜಲ್

ಗಜಲ್ ಸಿದ್ದರಾಮ ಹೊನ್ಕಲ್ ನಿನ್ನ ನೋಟ ಬಲು ಹಿತ ನೀಡಿದೆ ನೀ ಕಾಡಿಸುತ್ತ ಕೂಡಬೇಡದಿನಗಳು ದೀರ್ಘವಾಗಿಹವು ಆ ಮಾತನೇ ನೀ ಮುತ್ತಾಗಿಸಬೇಡ ನನ್ನ ಕಣ್ಣ ರೆಪ್ಪೆಗಳು ಕಣ್ಢೀರ ಬಿಸಿಗೆ ಕಣ್ಣೀರು ಮಿಡಿದಿವೆಕಲ್ಲು ಹೃದಯವಲ್ಲ ನಿನ್ನದು ಇಷ್ಟು ಕಠೋರ ನಟನೆಬೇಡ ಬೀಸುವ ತಂಗಾಳಿ ಸೂರ್ಯಚಂದ್ರರ ಸಹಜತೆ ಬೇಡವೆಜಗಕೆ ಬಂದವರಿಗೆಲ್ಲ ಒಂದೊಂದು ಬವಣೆ ನೀ ಚಿಂತಿಸಬೇಡ ನಾನೊಂದು ತೀರ ನೀನೊಂದು ತೀರವೆಂದು ನೊಂದೆಯಲ್ಲಾಮಧ್ಯೆ ಹರಿವ ಪ್ರೇಮದ ಹರಿವು ತಿಳಿಯದೇ ನೀ ಇರಬೇಡ ಇಂದಲ್ಲಾ ನಾಳೆ ವಜ್ರಲೇಪಿತ ಕುಸುಮ ಸುಖದಿ ಅರಳಿತುಕಳವಳಿಸದಿರು […]

ಪರಿವರ್ತನೆಗೆ ದಾರಿ ಯಾವುದಾದರೇನು?

ಲಲಿತ ಪ್ರಬಂಧ ಪರಿವರ್ತನೆಗೆ ದಾರಿ ಯಾವುದಾದರೇನು? ನಾಗರೇಖಾ ಗಾಂವಕರ್ ಹೊಸ ಸುತ್ತೋಲೆಯಂತೆ ಪದವಿ-ಪೂರ್ವ ಹಂತಕ್ಕೂ ಪ್ರಾರ್ಥನೆಯನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶ ಹೊರಡಿಸಿದ್ದು ಪಡ್ಡೆ ಹುಡುಗರಿಗೆ ಕೊಂಚವೂ ಇಷ್ಟವಿಲ್ಲ. ಆಗಾಗ ಆ ಬಗ್ಗೆ ತಕರಾರು ಮಾಡುವ ಗುಂಪು ಇದ್ದೇ ಇತ್ತು. ಆದರೂ ಪ್ರಾಚಾರ್ಯರು ಅದಕ್ಕೆಲ್ಲ ಅವಕಾಶ ಕೊಡದೆ ಕಡ್ಡಾಯ ಎಂದು ನೋಟೀಸು ತೆಗೆದು ಒತ್ತಡ ಹೇರಿದ್ದರು. ಹಾಗಾಗಿ  ವಿದ್ಯಾರ್ಥಿಗಳು  ಪ್ರಾರ್ಥನೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ವಾಣಿಜ್ಯ ವಿಭಾಗದ ಆ ತರಗತಿಯಲ್ಲಿ ಇರುವುದು ಬರಿಯ ಇಪ್ಪತೆಂಟು ವಿದ್ಯಾರ್ಥಿಗಳು  ಮಾತ್ರ. ಉಳಿದೆಲ್ಲ ಮಕ್ಕಳು […]

ಕದಳಿಯ ಅಕ್ಕ

ಕವಿತೆ ಕದಳಿಯ ಅಕ್ಕ ಜ್ಯೋತಿ ಬಳ್ಳಾರಿ ಶಿವಮೊಗ್ಗ ಜಿಲ್ಲೆಯಉಡುತಡಿಯಲಿ ಹುಟ್ಟಿತು,ಒಂದು ಕನ್ನಡದ ಕಂದಮ್ಮಅವಳಿಂದ ಜಗಕ್ಕೆಲ್ಲಆನಂದ ನೋಡಮ್ಮ. ನಿರ್ಮಲಶೆಟ್ಟಿ ಸುಮತಿದಂಪತಿಗಳ ಅಕ್ಕರೆಯ ಕಂದಮ್ಮ,ಸುರದೃಪಿ ಗುಣವಂತಹೆಮ್ಮೆಯ ಮಗಳಮ್ಮ. ಅಂದದ ಮೈಮಾಟಕ್ಕೆಕೌಶಿಕ ಮಹಾರಾಜನ ವಶವಾದಳು ಕೇಳಮ್ಮ,ಮಾತು ತಪ್ಪಿದ ರಾಜನ ದಿಕ್ಕರಿಸಿಬಿಟ್ಟಳಮ್ಮ. ಅರಮನೆಯ ಭೋಗವತೊರೆದು ಕೇಶಾಂಬರಿಯಾಗಿ ಹೋರಟು ಬಿಟ್ಟಳಮ್ಮ.ಭವ ಬಂಧನವ ತೊರೆದು ಮಲ್ಲಿಕಾರ್ಜುನನ್ನುಕಾಡು ಮೆಡುಗಳಲ್ಲಿ ಹುಡುಕಿದಳಮ್ಮ. ಹಾಡುವ ಕೋಗಿಲೆಗೆಹಕ್ಕಿ ಪಕ್ಷಿಗಳಿಗೆ ಕಂಡಿರಾನನ್ನ ಪತಿನೆಂದು ಕೇಳಿದಳಮ್ಮ. ಕಲ್ಯಾಣದ ಅನುಭವ ಮಂಟಪದಲಿಅಲ್ಲಮಪ್ರಭುವಿನ ಪರೀಕ್ಷೆ ಗೆದ್ದಳಮ್ಮಜ್ಞಾನದ ಗಣಿಯಾಗಿಮಹಾಮನೆಯ ಅಕ್ಕ ಆದಳು ನೋಡಮ್ಮ. ಬಸವಣ್ಣನವರ ಜೊತೆಗೂಡಿಕಟ್ಟಿದಳು ಸಮಾನತೆಯ ಕಲ್ಯಾಣ […]

ಉಡ್ಡಾಣ

ಕಥೆ ಉಡ್ಡಾಣ ಹೇಮಾ ಸದಾನಂದ್  ಅಮೀನ್   ಎಡೆಬಿಡದೆ ಅಳುವ ಆ ಮಗುವಿನ  ತಾಯಿಯ ಬೇಜವಾಬ್ದಾರಿತನವನ್ನು ನೋಡಿ ಯಾರೂ ಸಿಡಿಮಿಡಿಗೊಳ್ಳುವದು ಸಹಜವೇ. ಆದರೆ ಇದು  ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟಿನಲ್ಲಿ  ಆಗಿರುವುದರಿಂದ ಕೇವಲ ಮುಖ ಸಿಂಡರಿಸಿ, “  ತಾನು ಡಿಸ್ಟರ್ಬ್ ಆಗಿದ್ದೇನೆ. ದಯಮಾಡಿ ನಿಮ್ಮ ಸಮಸ್ಯೆಯನ್ನು  ಆದಷ್ಟು ಬೇಗ ಬಗೆಹರಿಸಿಕೊಳ್ಳಿ “ ಎಂದು ವಕ್ರ ದೃಷ್ಟಿಯಿಂದಲೇ ಎಚ್ಚರಿಕೆ ಕೊಡುವ ಮನಸ್ಥಿತಿಯುಳ್ಳವರ ಮಧ್ಯ ಮೂರೂ ತಿಂಗಳ ಗರ್ಭಿಣಿಯಾಗಿದ್ದ  ಸಮೀಕ್ಷಳ ಮನಸ್ಸು  ತೀರ ವಿಚಲಿತಗೊಂಡಿತ್ತು. ಆಕೆ ಆ ತಾಯಿ ಮಗುವನ್ನು ಒಂದೇ […]

ನೀ ಬಂದ ಘಳಿಗೆ

ಕವಿತೆ ನೀ ಬಂದ ಘಳಿಗೆ ಅನ್ನಪೂರ್ಣಾ ಬೆಜಪ್ಪೆ ಮಲಗು ಮಲಗೆನ್ನ ಕಂದಮಲಗೆನ್ನ ಹೆಗಲಿನಲಿಕಾಯುವೆನು ಅನವರತ ಭಯಬೇಡ ಮಗುವೆಸವಿಯುತಿರು ಪ್ರತಿ ಕ್ಷಣವನಲುಗದೆಯೆ ಕೊರಗದೆಯೆಬಾಳ ಹಾದಿಯಲೆನಗೆ ಬಲವದುವು ನಿನ್ನ ನಗುವೆ ರವಿಯು ಉದಿಸುವ ವೇಳೆನಲಿವ ಇಳೆಯದೆ ಸುಖವುನೀ ನನ್ನ ಮಡಿಲ ತುಂಬುತಲಿ ಬಂದ ಘಳಿಗೆಎಳೆಯಬೆರಳಿನ ಸ್ಪರ್ಶದಲಿನೂರು ತಂತಿಯು ಮಿಡಿದುಎದೆಯ ನೋವೆಲ್ಲ ಮರೆಯಾದಂತೆ ಮರೆಗೆ ಮುಪ್ಪು ಕಾಡುವವರೆಗೆತಪ್ಪು ಒಪ್ಪುಗಳ ಅರುಹಿತೆಪ್ಪವಾಗುತ ಬರುವೆ ಬಾಳ ಯಾನದಲ್ಲಿಕಪ್ಪು ಮೋಡವು ಸರಿದುತುಪ್ಪದಂತೆಯೆ ಘಮಿಸಿಒಪ್ಪವಾಗಿರಲಿ ಬದುಕು ಸವಿ ನಗುವ ಚೆಲ್ಲಿ **********************

ತಲ ಷಟ್ಪದಿಯಲ್ಲೊಂದು ಶಿಶುಗೀತೆ

ಪುಟ್ಟನ ಮನೆ ತೇಜಾವತಿ ಹೆಚ್.ಡಿ. ಒಮ್ಮೆ ಪುಟ್ಟಅಮ್ಮನೊಡನೆಸಾಗರ ನೋಡಲೋದರಾಶಿ ರಾಶಿಉಸುಕು ಕಂಡುಕುಣಿದು ಕುಣಿದು ಹಿಗ್ಗಿದ || ಪುಟ್ಟ ನುಣುಪುಉಸುಕಿನಲ್ಲಿಚಂದ ಮನೆಯ ಕಟ್ಟಿದಅಲೆಯು ಬಂದುಕೊಚ್ಚಿ ಹೊಯ್ದುಅಮ್ಮಾ! ಎಂದು ಕೂಗಿದ || ಅಮ್ಮ ಬಂದುಹೇಳು ಕಂದಏಕೆ ಅಳುವೆ ಎನ್ನಲುನೋವಿನಿಂದಉರುಳಿ ಬಿದ್ದಮನೆಯ ತೋರಿ ಹಲುಬಿದ || ಕೇಳು ಮಗನೆಏಕೆ ಅಳುವೆಮರಳ ಮನೆಯು ಕ್ಷಣಿಕವುನೀನು ಕಟ್ಟುಮನದ ಮನೆಯಆತ್ಮ ಛಲವು ಜೊತೆಗಿದೆ || ಒಡನೆ ಪುಟ್ಟಎದ್ದು ನಿಂತುಅಮ್ಮನಪ್ಪಿ ಹೇಳಿದಬಿಡೆನು ನಾನುನಿನ್ನ ಮಾತಒಪ್ಪಿಕೊಂಡೆ ಎಂದನು || ಮಗನ ನುಡಿಯಕೇಳಿ ಅಮ್ಮಪ್ರೀತಿ ಧಾರೆ ಎರೆದಳುಮಿಂದ ಪುಟ್ಟಮಡಿಲ ಸುಖದಿಹೊಸತು […]

ಗಜಲ್

ಗಜಲ್ ಕೆ.ಸುನಂದಾ ನಿನ್ನ ಕಂಡ ಕ್ಷಣದಿಂದ ಆನಂದದ ಭಾಷ್ಪಗಳು ಸುರಿಯುತಿದೆ ಗೆಳೆಯಆಡಿದ ಮಾತುಗಳೆಲ್ಲ ಮಧುರ ಸಂಗೀತದಂತೆ ಸೆಳೆಯುತಿದೆ ಗೆಳೆಯ ಅದೆಷ್ಟೋ ವರ್ಷಗಳಿಂದ ಕದಲದೆ ಕಾಯುತ್ತಿರುವೆ ನೀನು ಬರುವೆ ಎಂದುವಸಂತನ ಆಗಮನದ ಆನಂದವಿಂದು ನಮ್ಮಲಿ ಉಲಿಯುತಿದೆ ಗೆಳೆಯ ಮೌನವೆ ಎನ್ನ ಬದುಕೆಂದು ದೂಡುತ್ತಲಿದ್ದೆ ಕಹಿಯಾದ ಕ್ಷಣಗಳನ್ನುಬರಡಾದ ಭೂವಿಗೆ ವರ್ಷಧಾರೆ ಬಂದಂತೆ ಹರ್ಷ ಮೆರೆಯುತಿದೆ ಗೆಳೆಯ ಪವಿತ್ರ ಪ್ರೇಮಕೆ ಆತಂಕಗಳು ಹೆಚ್ಚು ಕೊನೆಗೆ ಜಯ ಸಿಕ್ಕೇಸಿಗುವುದುಅಂತರಂಗದ ಖುಷಿಗೆ ಅಂತರಾತ್ಮದ ನಂದಾದೀಪ ಉರಿಯುತಿದೆ ಗೆಳಯ ಸರ್ವಸ್ವವೂ ನೀನೆ ಎಂದು ನಂಬಿದ್ದ “ನಂದೆ”ಗೆ […]

Back To Top