ಗಜಲ್

ಗಜಲ್

ಕೆ.ಸುನಂದಾ

Spring Bird, Bird, Spring, Blue, Nature

ನಿನ್ನ ಕಂಡ ಕ್ಷಣದಿಂದ ಆನಂದದ ಭಾಷ್ಪಗಳು ಸುರಿಯುತಿದೆ ಗೆಳೆಯ
ಆಡಿದ ಮಾತುಗಳೆಲ್ಲ ಮಧುರ ಸಂಗೀತದಂತೆ ಸೆಳೆಯುತಿದೆ ಗೆಳೆಯ

ಅದೆಷ್ಟೋ ವರ್ಷಗಳಿಂದ ಕದಲದೆ ಕಾಯುತ್ತಿರುವೆ ನೀನು ಬರುವೆ ಎಂದು
ವಸಂತನ ಆಗಮನದ ಆನಂದವಿಂದು ನಮ್ಮಲಿ ಉಲಿಯುತಿದೆ ಗೆಳೆಯ

ಮೌನವೆ ಎನ್ನ ಬದುಕೆಂದು ದೂಡುತ್ತಲಿದ್ದೆ ಕಹಿಯಾದ ಕ್ಷಣಗಳನ್ನು
ಬರಡಾದ ಭೂವಿಗೆ ವರ್ಷಧಾರೆ ಬಂದಂತೆ ಹರ್ಷ ಮೆರೆಯುತಿದೆ ಗೆಳೆಯ

ಪವಿತ್ರ ಪ್ರೇಮಕೆ ಆತಂಕಗಳು ಹೆಚ್ಚು ಕೊನೆಗೆ ಜಯ ಸಿಕ್ಕೇಸಿಗುವುದು
ಅಂತರಂಗದ ಖುಷಿಗೆ ಅಂತರಾತ್ಮದ ನಂದಾದೀಪ ಉರಿಯುತಿದೆ ಗೆಳಯ

ಸರ್ವಸ್ವವೂ ನೀನೆ ಎಂದು ನಂಬಿದ್ದ “ನಂದೆ”ಗೆ ಮೋಸ ಆಗದು
ವಿಶ್ವಾಸಕ್ಕೆ ಇನ್ನೊಂದು ಹೆಸರೇ ನೀನು ಸಂತಸ ಹರಿಯುತಿದೆ ಗೆಳೆಯ

*************************************

One thought on “ಗಜಲ್

Leave a Reply

Back To Top