ಆರ್ಥಿಕತೆ.

ನೋಟು ರದ್ದತಿಗೆ ಮೂರು ವರ್ಷ

ಗಣೇಶ್ ಭಟ್ ಶಿರಸಿ

2016 ರ ನವೆಂಬರ್ 08 ರಂದು ಭಾರತದಲ್ಲಿ ಆಂತರಿಕ ರ‍್ಥಿಕ ರ‍್ಜಿಕಲ್ ಸ್ಟ್ರೈಕ್ ನಡೆಯಿತು. ರೂ. 500 , 1000 ರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆಯಲಾಯಿತು. ಕಪ್ಪು ಹಣವನ್ನು ಹೊರಗೆಡಹುವದು ಭ್ರಷ್ಟಾಚಾರ ನರ‍್ಮೂಲನೆ ಮಾಡಲು ಈ ಕಠಿಣ ನರ‍್ಣಯ ಕೈಗೊಳ್ಳಲಾಗಿದೆಯೆಂದು ಜನರಿಗೆ ಹೇಳಲಾಯಿತು. ಸ್ವಲ್ಪ ದಿನಗಳ ನಂತರ ನೋಟ ರದ್ದತಿಯ ಉದ್ದೇಶಗಳನ್ನು ಇನ್ನಷ್ಟು ವಿಸ್ತ್ರತಗೊಳಿಸಲಾಯಿತು. ಚಲಾವಣೆಯಲ್ಲಿರುವ ಖೋಟಾ ನೋಟುಗಳನ್ನು ಕಂಡು ಹಿಡಿಯುವುದು ,
ಭಯೋತ್ಪಾದಕರಿಗೆ ಹಣ ಸಿಗದಂತೆ ಮಾಡುವುದು ಹಾಗೂ ಅವರ ಚಟುವಟಿಕೆಗಳಿಗೆ ನಿಯಂತ್ರಣ ಹಾಕುವುದು ಸೇರಿದಂತೆ ದಿನಕ್ಕೊಂದು ಹೊಸ ಉದ್ದೇಶವನ್ನು ಸರ‍್ಪಡೆ ಮಾಡಲಾಯಿತು.
ಇವುಗಳ ಜೊತೆಗೇ ನಗದು ರಹಿತ ಭಾರತದ ಕನಸನ್ನು ಬಿತ್ತಿ, ಚೀನಾದ ನಿಯಂತ್ರಣದ ಪೇಟಿಎಮ್ ಕಂಪನಿಯನ್ನು ಪ್ರೋತ್ಸಾಹಿಸಲು ಪ್ರಧಾನಿಯವರ ಚಿತ್ರಗಳನ್ನೇ ಬಳಸಿ ಜಾಹೀರಾತು ನೀಡಲಾಯಿತು. ಬ್ಯಾಂಕ್ ಖಾತೆಯನ್ನೇ ಹೊಂದಿರದ ಹಲವರನ್ನು ಒಳಗೊಂಡ ಗ್ರಾಮೀಣ ಭಾಗದ ಜನರು, ನಗರದ ಕೊಳಗೇರಿ ನಿವಾಸಿಗಳು, ಬ್ಯಾಂಕ್ ಖಾತೆ ಹೊಂದಿದ್ದರೂ ಕಂಪ್ಯೂಟರ್ , ಮೊಬೈಲ್, ಬಳಕೆಯನ್ನು ಅರಿಯದ ಜನಸಾಮಾನ್ಯರನ್ನೂ ಭಯಭೀತರನ್ನಾಗಿಸಲಾಯಿತು.
ಎರಡು ದಿನಗಳ ಬ್ಯಾಂಕ್ ರಜೆಯ ನಂತರ ಉಳಿದೆಲ್ಲಾ ಕೆಲಸಗಳನ್ನು ಬದಿಗಿಟ್ಟು, ರದ್ದಾದ ನೋಟುಗಳ ಬದಲಾವಣೆಗಾಗಿ ಬ್ಯಾಂಕ್ ಎದುರಿಗೆ ಸರತಿ ಸಾಲಿನಲ್ಲಿ ನಿಲ್ಲುವದೇ ಜನಸಾಮಾನ್ಯರ ಕೆಲಸವಾಯಿತು. ನೋಟು ರದ್ದುಪಡಿಸಿದ ನಂತರ ಕೇವಲ 50 ದಿನಗಳು ಮಾತ್ರ ಕಷ್ಟಪಡಿ, ಮುಂದೆ ಎಂದೆಂದಿಗೂ ನೀವು ಸುಖವಾಗಿ ಬದುಕುವ ಸ್ಥಿತಿ ನರ‍್ಮಾಣ ಮಾಡುತ್ತೇನೆಂದು ಪ್ರಧಾನಿಯವರು ದೇಶದ ಜನತೆಗೆ ಭರವಸೆ ನೀಡಿದರು. ಕಪ್ಪು ಹಣದ ಮೇಲಿನ ಯುದ್ಧಕ್ಕಾಗಿ ಅದಕ್ಕೂ ಮೊದಲಿನ 10 ತಿಂಗಳುಗಳ ಕಾಲ ಪರ‍್ವ ತಯಾರಿ ನಡೆದಿದ್ದರಿಂದಾಗಿ ಎಲ್ಲವೂ ಸುಸೂತ್ರವಾಗಿ , ಸುಲಲಿತವಾಗಿ ನಡೆಯಲಿದೆಯೆಂದು ಭರವಸೆ ನೀಡಿದರು.
ಆದರೆ , ಆಗ ಆದದ್ದೇ ಬೇರೆ. ಈ ವಿಷಯಕ್ಕೆ ಸಂಬಂಧಿಸಿ ದಿನಕ್ಕೊಂದು ಹೊಸ ನರ‍್ದೇಶನಗಳು ಬರಲಾರಂಭಿಸಿದವು. ಕೇವಲ 50 ದಿನಗಳಲ್ಲಿ, ಆರ್‍ಬಿಐ 63 ಸುತ್ತೋಲೆಗಳನ್ನು ಹೊರಡಿಸಿ ನಗೆಪಾಟಲಿಗೀಡಾಯಿತು. ಇದಕ್ಕೆ ಸಂಬಂಧಿಸಿದ ಅಧಿಕಾರಿಯೊಬ್ಬರು, ಎರಡು ಮೂರು ಸುತ್ತೋಲೆಗಳನ್ನು ಹೊರತುಪಡಿಸಿ ಉಳಿದವೆಲ್ಲವೂ ಪರ‍್ವಯೋಜಿತವೆಂದು ಹೇಳಿಕೆ ನೀಡಿ ತಮ್ಮ ನಡೆಯನ್ನು ಸರ‍್ಥಿಸಿಕೊಂಡರು.
ಐವತ್ತು ದಿನಗಳಲ್ಲ. 500 ಅಲ್ಲ, ಸಾವಿರ ದಿನಗಳು ಕಳೆದರೂ, ನೋಟ ರದ್ದತಿಯಿಂದ ಸಿಗಬಹುದಾದ ಲಾಭದ ಕುರಿತು ಮಾಡಿದ ಘೋಷಣೆಗಳು ಬರೀ ಭಾಷಣದ ತುಣುಕುಗಳಾಗಿ ಉಳಿದಿವೆಯೇ ಹೊರತು, ಯಾವುದೂ ವಾಸ್ತವವಾಗಿಲ್ಲ. ಅಂದಿನ ಪ್ರಧಾನಿಯವರೇ ಇಂದೂ ಇದ್ದಾರೆ, ನೋಟು ರದ್ದತಿಯ ಕುರಿತು ಎದೆಯುಬ್ಬಿಸಿ ಕೊಚ್ಚಿಕೊಳ್ಳುತ್ತಿದ್ದ ಪ್ರಧಾನಿಯವರು, ಇಂದು ಆ ವಿಷಯವನ್ನು ಅಪ್ಪಿತಪ್ಪಿಯೂ ಪ್ರಸ್ತಾಪಿಸುವದಿಲ್ಲ.
ನೋಟು ರದ್ದತಿಯಾಗಿ ಮೂರು ರ‍್ಷಗಳ ನಂತರ ದೇಶದ ಪರಿಸ್ಥಿತಿ ದಿನದಿಂದ ದಿನಕ್ಕೆ ಕೆಡುತ್ತಿದೆ. ನಿರುದ್ಯೋಗ ಸಮಸ್ಯೆಯ ಹೆಚ್ಚಳ, ಸಾಮಾಜಿಕ ಸಂರ‍್ಷ, ಜನಸಾಮಾನ್ಯರ ಅಸಹಾಯಕತೆ ಹೆಚ್ಚುತ್ತಿದೆ. ಭ್ರಷ್ಟಾಚಾರ ಯಾರ ನಿಯಂತ್ರಣಕ್ಕೂ ಸಿಗದೇ ವಿಕಾರ ರೂಪ ತಾಳುತ್ತಿದೆ. ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳು ಹೆಚ್ಚುತ್ತಿವೆಯೇ ಹೊರತು ಕಡಿಮೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಜನರ ನಂಬಿಕೆ ನಷ್ಟವಾಗುತ್ತಿದೆ. ಇಡೀ ರ‍್ಥ ವ್ಯವಸ್ಥೆಯಲ್ಲಿ ಅಪನಂಬಿಕೆ ಮೂಡಿ ಜನರನ್ನು ಅಭದ್ರತೆಯ ಭಾವ ಕಾಡುತ್ತಿದೆ. ಅತಿ ಶ್ರೀಮಂತರು ಮತ್ತು ಆಳುವ ಬಿಜೆಪಿಯ ಉನ್ನತ ವಲಯದೊಂದಿಗೆ ನಿಕಟ ಸಂರ‍್ಕ ಹೊಂದಿರುವವರನ್ನು ಹೊರತುಪಡಿಸಿ, ಉಳಿದವರು ರ‍್ಥಿಕ ಭಯೋತ್ಪಾದನೆಗೆ ಗುರಿಯಾದವರ ರೀತಿಯಲ್ಲಿ ಚಡಪಪಡಿಸುವಂತಾಗಿದೆ.
ಗಳಿಸಿದ ಹಣವನ್ನು ಸುರಕ್ಷಿತವಾಗಿ ಎಲ್ಲಿ ಇಡಬೇಕು, ಎಲ್ಲಿ ತೊಡಗಿಸಬೇಕು, ಯಾವ ರೂಪದಲ್ಲಿ ಇಟ್ಟುಕೊಳ್ಳಬೇಕು ಎಂಬ ಸಮಸ್ಯೆ ಜನಸಾಮಾನ್ಯರನ್ನು ಕಾಡುತ್ತಿದೆ. ಬ್ಯಾಂಕ್‍ಗಳಲ್ಲಿ ನಡೆಯುತ್ತಿರುವ ಮೋಸ, ವಂಚನೆಯಿಂದಾಗಿ ಠೇವಣಿದಾರರ ಮೇಲೆ ಕತ್ತಿ ಬೀಸಲಾಗುತ್ತಿದೆ. ಮೋಸ ಮಾಡಿದವರು, ಸಾಲ ನೀಡಿದವರು ಆರಾಮಾಗಿ ಓಡಾಡಿಕೊಂಡಿದ್ದರೆ, ಬಡಪಾಯಿ ಠೇವಣಿದಾರರು ತಮ್ಮದೇ ಹಣ ವಾಪಾಸು ಪಡೆಯದಂತೆ ಆರ್‍ಐಬಿ ನರ‍್ಬಂಧ ಹೇರುತ್ತದೆ. ಎಮ್ಮೆಗೆ ಜ್ವರ, ಎತ್ತಿಗೆ ಬರೆ ಎಂಬ ಗಾದೆಯನ್ನು ನೆನಪಿಸುವ ನಡತೆ.
ಜನರನ್ನು ಮೋಸಗೊಳಿಸುವ ಬ್ಲೇಡ್ ಕಂಪನಿಗಳು ರಾಜಾರೋಷಾಗಿ ಕರ‍್ಯ ನರ‍್ವಹಿಸುತ್ತಿದೆ. ಯಾವುದೋ ಒಂದು ದಿನ ಬಾಗಿಲು ಮುಚ್ಚಿ ಅವರು ನಾಪತ್ತೆಯಾದ ನಂತರ ಪೋಲೀಸರ, ಅಧಿಕಾರಿಗಳ ಪ್ರವೇಶವಾಗುತ್ತದೆ. ಅಲ್ಲಿಯವರೆಗೆ ಅವುಗಳನ್ನು ತಪಾಸಣೆಗೊಳಪಡಿಸಬೇಕಾದ ಅಧಿಕಾರಿಗಳ ರ‍್ತವ್ಯ ಲೋಪಕ್ಕೆ ಮುಗ್ದ ಜನತೆ ಬಲಿಯಾಗುತ್ತಿದ್ದಾರೆ.
ನೋಟ್ ರದ್ದತಿಯಾದ ಕೆಲವೇ ದಿನಗಳ ನಂತರ ಬಂಗಾರದ ಮೇಲೆ ಮಿತಿ ಹೇರಲಾಗುವುದೆಂಬ ಸುದ್ದಿಗೆ ಬಾರೀ ಪ್ರಚಾರ ನೀಡಲಾಯಿತು. ಮಾಧ್ಯಮಗಳು ಪೈಪೋಟಿಗೆ ಬಿದ್ದವರಂತೆ ಜನರಲ್ಲಿ ಭಯ, ಆತಂಕ ಸೃಷ್ಟಿಸಿದರು. ಕಳೆದ ಒಂದು ವಾರದ ಹಿಂದೆ ಇದರ ಪುನರಾರ‍್ತನೆಯಾಯಿತು. ಕಾಳ ಧನಿಕರನ್ನು ಮಟ್ಟ ಹಾಕುವ ಉದ್ದೇಶದಿಂದ ವ್ಯಕ್ತಿಯು ಹೊಂದಬಹುದಾದ ಬಂಗಾರದ ಮೇಲೆ ಕೇಂದ್ರ ರ‍್ಕಾರ ಮಿತಿ ಹೇರುತ್ತದೆ, ತಪಾಸಣೆ ನಡೆಸುತ್ತದೆ. ಮುಂತಾದ ಸುದ್ದಿಗಳನ್ನು ಹರಿಬಿಡಲಾಯಿತು. ಭವಿಷ್ಯದ ಅನುವು , ಆಪತ್ತಿಗಾಗಿ ಚೂರು, ಪಾರು, ಬಂಗಾರ ಖರೀದಿಸಿ ಇಟ್ಟುಕೊಳ್ಳುವ ಜನಸಾಮಾನ್ಯರು ಪುನಃ ಗೊಂದಲಕ್ಕೊಳಗಾದರು.
ನಾಳಿನ ಭದ್ರತೆ ಯಾರಿಗೂ ಇಲ್ಲ. ನಮ್ಮ ದೇಶದ ಸಂವಿಧಾನವಾಗಲೀ, ರ‍್ಕಾರಗಳಾಗಲೀ ಭವಿಷ್ಯದ ಬದುಕಿನ ನಿಶ್ಚಿತತೆಯ ಭರವಸೆ ನೀಡುವುದಿಲ್ಲ. ರ‍್ಥಾತ್ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹಾಗೂ ಅವಲಂಬಿತರ ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ರ‍್ಕಾರವನ್ನು ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿ ನಾಳಿನ ಅನುವು- ಆಪತ್ತಿಗಾಗಿ, ಔಷದೋಪಚಾರಕ್ಕಾಗಿ ಉಳಿತಾಯ ಮಾಡುವುದು ಅನಿವರ‍್ಯ. ಎಲ್ಲಿಯವರೆಗೆ ಸಮಾಜ ಮತ್ತು ರ‍್ಕಾರ, ವ್ಯಕ್ತಿಯ ಬದುಕಿನ ಭದ್ರತೆಯ ಭರವಸೆ ನೀಡುವುದಿಲ್ಲವೋ ಅಲ್ಲಿಯವರೆಗೂ ಅಭದ್ರತೆಯ ಭಾವದಿಂದ ಸಮಾಜ ಮತ್ತು ವ್ಯಕ್ತಿ ಬಳಲುತ್ತಾರೆ. ಭ್ರಷ್ಟಾಚಾರಕ್ಕೆ ಇದೂ ಒಂದು ಕಾರಣ.
ಬ್ಯಾಂಕ್‍ಗಳಲ್ಲಿ ಇಡುವ ಠೇವಣಿಗೆ ಕೇಂದ್ರ ರ‍್ಕಾರ ಜಾರಿಗೆ ತಂದಿರುವ ಡಿಸಾಸಿಟ್ ಇನ್ಶುರೆನ್ಸ್ ಯೋಜನೆ ಇದೆ. ಇದರನ್ವಯ ಠೇವಣಿ ಮತ್ತು ಬಡ್ಡಿ ಸೇರಿ ಒಟ್ಟೂ ಒಂದು ಲಕ್ಷ ರೂಪಾಯಿಯವರೆಗೆ ಮಾತ್ರ ಇನ್ಶುರೆನ್ಸ್ ಅನ್ವಯವಾಗುತ್ತದೆ. ಮೂರು ದಶಕಗಳ ಹಿಂದೆ ನಿಗದಿಪಡಿಸಿದ ಮೊತ್ತ ಈಗಲೂ ಅಷ್ಟೇ ಇದೆ ಎನ್ನುವುದು ಇಂತಹ ಯೋಜನೆಗಳ ಅವಾಸ್ತವಿಕತೆ ಮತ್ತು ಅಪ್ರಸ್ತುತತೆಯನ್ನು ಎತ್ತಿ ತೋರಿಸುತ್ತದೆ. ಡಿಪಾಸಿಟ್ ಇನ್ಶುರೆನ್ಸ್ ಯೋಜನೆಯಡಿ ಠೇವಣಿಯ ಮರುಪಾವತಿಗಾಗಿ ಬೇಡಿಕೆ ಸಲ್ಲಿಸಬೇಕೆಂದರೆ ಸಂಬಂಧಿಸಿದ ಬ್ಯಾಂಕ್ ದಿವಾಳಿಯಾಗಿರಬೇಕು!
ಆದಾಯಕರ ಇಲಾಖೆಯನ್ನು ಜನಸ್ನೇಹಿ ಯಾಗಿಸುವ ಬದಲಿಗೆ ಜನವಿರೋಧಿಯನ್ನಾಗಿಸಲಾಗಿದೆ. ಮಧ್ಯಮ ರ‍್ಗದವರಲ್ಲಿ ಭಯ ಹುಟ್ಟಿಸುವ ಇಲಾಖೆಯಂತೆ ಇದು ಕರ‍್ಯನರ‍್ವಹಿಸುತ್ತಿದೆ. ಜನಸಾಮಾನ್ಯರಿಗೆ ಸಿಗಬೇಕಾದ ಸಂಪನ್ಮೂಲಗಳ ಮೇಲಿನ ಹಕ್ಕು ಬೆರಳೆಣಿಕೆಯ ಉದ್ಯಮಪತಿಗಳ ಪಾಲಾಗುತ್ತಿದೆ. ಉಳ್ಳವರಿಗೆ ಅನುಕೂಲ ಮಾಡಿಕೊಡುವ ರೀತಿಯ ಕಾನೂನುಗಳ ರಚನೆ, ( ಕಾರ‍್ಪೋರೇಟ್ ವಲಯಕ್ಕೆ ಇತ್ತೀಚೆಗೆ ನೀಡಿರುವ ತೆರಿಗೆ ವಿನಾಯಿತಿ ಒಂದು ಉದಾಹರಣೆ) ಉಳ್ಳವರಿಗೆ ಕೊಳ್ಳೆಹೊಡೆಯುವ ಅವಕಾಶ ಸೃಷ್ಟಿ , ರ‍್ಕಾರದ ಅತಿಯಾದ ಹಸ್ತಕ್ಷೇಪಗಳಿಂದಾಗಿ ರ‍್ಥಿಕ ವ್ಯವಸ್ಥೆ ಶಿಥಿಲಗೊಳ್ಳುತ್ತಿದೆ. ಜನಸಾಮಾನ್ಯರು ಅದರಲ್ಲೂ ವಿಶೇಷವಾಗಿ ಮಧ್ಯಮ ರ‍್ಗದವರು ಭಯಭೀತರಾಗಿದ್ದಾರೆ.
ಮೂರು ರ‍್ಷಗಳ ಹಿಂದೆ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ 2000 ರೂ ಮುಖಬೆಲೆಯ ನೋಟನ್ನು ಚಲಾವಣೆಗೆ ತಂದಾಗಲೇ ಪ್ರಧಾನಿಯವರ ಘೋಷಣೆಯ ಟೊಳ್ಳುತನ ಬಯಲಿಗೆ ಬಂದಿತ್ತು. ಆರ್‍ಬಿಐಗೆ ಜಮಾ ಆಗುತ್ತಿದ್ದ ರದ್ದಾದ ನೋಟುಗಳ ಮೊತ್ತವನ್ನು ಬಹಿರಂಗಪಡಿಸಲು ಹಿಂಜರಿಯುತ್ತಿದ್ದ ಆರ್‍ಬಿಐ ಅಂತೂ ಅಗಸ್ಟ್ 2017 ರ ಅಂತ್ಯದಲ್ಲಿ ಬಿಡುಗಡೆ ಮಾಡಿದ ಅಂಕಿಅಂಶದಂತೆ 98.96% ನೋಟುಗಳು ವಾಪಾಸು ಬಂದಿದ್ದವು. 29-08-18 ರಂದು ಆರ್‍ಬಿಐ ನೀಡಿದ ಮಾಹಿತಿಯಂತೆ ಚಲಾವಣೆಯಲ್ಲಿದ್ದ 500, 1000 ರೂ. ನೋಟುಗಳ ಪೈಕಿ ರೂ. 15.42 ಲಕ್ಷ ಕೋಟಿ ರೂಪಾಯಿಗಳಲ್ಲಿ 15.31 ಲಕ್ಷ ಕೋಟಿ ರೂ.ಗಳು ( 99.35%) ವಾಪಾಸು ಬಂದಿತ್ತು. 10,720 ಕೋಟಿ ರೂಪಾಯಿ ಮೌಲ್ಯದ ನೋಟುಗಳು ವಾಪಾಸು ಬರದೇ ಉಳಿದವು.
ಹಾಗಾದರೆ ಭಾರತದಲ್ಲಿ ಕಪ್ಪು ಹಣ ಇರಲೇ ಇಲ್ಲವೇ ಅಥವಾ ಈಗ ಇಲ್ಲವೋ? ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು ತಪ್ಪೇ? ಎಂಬಂತಹ ಪ್ರಶ್ನೆಗಳು ಉದ್ಭವವಾಗುವುದು ಸಹಜ.
ನೋಟುಗಳ ರದ್ದತಿ ಭಾರತಕ್ಕೆ ಹೊಸದಲ್ಲ. 1946 ರಲ್ಲಿಯೇ ರೂ. 1000, 5000 , 10,000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಲಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಕಾಳಸಂತೆ ಕೋರರು ಕಪ್ಪು ಹಣ ಸೇರಿಸಿಟ್ಟಿದ್ದಾರೆಂಬ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈ ಮುಖಬೆಲೆಯ ನೋಟುಗಳನ್ನು 1954 ರಲ್ಲಿ ಪುನಃ ಚಾಲನೆಗೆ ತರಲಾಯಿತು. 1978 ರಲ್ಲಿ ಇನ್ನೊಮ್ಮೆ ಈ ನೋಟುಗಳನ್ನು ರದ್ದುಪಡಿಸಲಾಯಿತು. ಆಗ ಕೂಡಾ ಕಪ್ಪು ಹಣ ನಿಯಂತ್ರಿಸುವ ಕಾರಣವನ್ನೇ ನೀಡಲಾಗಿತ್ತು. 1978 ರಲ್ಲಿ ದೊಡ್ಡ ಮುಖಬೆಲೆಯ ನೋಟುಗಳು ಶ್ರೀಮಂತರ ಕೈಯಲ್ಲಿ ಮಾತ್ರ ಇರುತ್ತಿದ್ದವು. ದೇಶದ ಹೆಚ್ಚಿನ ನಾಗರಿಕರು ರೂ. ಐದು , ಹತ್ತು ಸಾವಿರ ಮುಖಬೆಲೆಯ ನೋಟುಗಳನ್ನು ನೋಡಿಯೇ ಇರಲಿಲ್ಲ. ಆದರೆ 2016 ರಲ್ಲಿ ಜನಸಾಮಾನ್ಯರ ಕೈಯಲ್ಲಿ ಓಡಾಡುತ್ತಿದ್ದುದೇ 500, 1000 ರೂ. ನೋಟುಗಳು.
ತಾವು ನ್ಯಾಯಯುತವಾಗಿ ಗಳಿಸಿದ ರದ್ದಾದ ನೋಟುಗಳನ್ನು ದಿನಕ್ಕೆ ನಾಲ್ಕು ಸಾವಿರ ರೂಪಾಯಿ ಬದಲಾಯಿಸಲು ಜನಸಾಮಾನ್ಯರು ಪರದಾಡುತ್ತಿರುವಾಗ ಶ್ರೀಮಂತರು ಮತ್ತು ಪ್ರಭಾವಿ ಕುಳಗಳು ಕೋಟಿಗಳ ಲೆಕ್ಕದಲ್ಲಿ ಹೊಸ 2000 ರೂ. ನೋಟುಗಳನ್ನು ಪಡೆಯುತ್ತಿದ್ದರು. ಕೆಲವು ಬ್ಯಾಂಕ್‍ಗಳಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಆಪಾದಿಸಿ, ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಯಿತು. ಆರ್.ಬಿ.ಐನ ಕೆಲ ಅಧಿಕಾರಿಗಳು ಶಾಮೀಲಾಗಿದ್ದು ಬಹಿರಂಗವಾಯಿತು. ಆದರೆ ಅಷ್ಟರೊಳಗೆ ಧನಿಕರ ಕಾಳ ಸಂಪತ್ತು ಬಿಳಿಯಾಗಿ ಬಿಟ್ಟಿತ್ತು.
ಬಯಲಿಗೆ ಬಂದ ಭ್ರಷ್ಟಾಚಾರದ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರ. ನೋಟು ರದ್ದತಿಗಾಗಿ 10 ತಿಂಗಳಿನಿಂದಲೂ ಪರ‍್ವ ತಯಾರಿ ನಡೆಸಿದ್ದ ತಜ್ಞರ ತಂಡಕ್ಕೆ ಇಂತಹ ಸರಳ ವಿಚಾರ ಗೊತ್ತಿರಲಿಲ್ಲವೆಂದು ನಂಬುವುದು ಕಷ್ಟ. ಇದರೊಟ್ಟಿಗೇ ಬೆರಳೆಣಿಕೆಯ ದೊಡ್ಡ ಕುಳಗಳು, ಸಾವಿರ ಕೋಟಿಗಳ ಲೆಕ್ಕದಲ್ಲಿ ರದ್ದಾದ ನೋಟುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಡಾಲರ್ ಖರೀದಿಸುವ ಮೂಲಕ ಹಾಗೂ ತಮ್ಮ ಛಾಯಾ ಕಂಪನಿಗಳ ಹೆಸರಿನಲ್ಲಿ ವಿದೇಶೀ ಹೂಡಿಕೆಯ ನಾಟಕವಾಡಿದವು. ಆ 50 ದಿನಗಳಲ್ಲಿ ಡಾಲರ್ ಎದುರು ರೂಪಾಯಿಯ ಏರಳಿತವನ್ನು ಗಮನಿಸಿ, ಡಾಲರ್ ಖರೀದಿಸಿದವರ ಹಾಗೂ ವಿದೇಶೀ ಬಂಡವಾಳದ ಒಳಹರಿವಿನ ಮೂಲವನ್ನು ತಪಾಸಣೆ ಮಾಡಿದರೆ, ಸತ್ಯ ಹೊರಬರುತ್ತದೆ. ಇಂದಿನ ಕೇಂದ್ರ ರ‍್ಕಾರಕ್ಕೆ ಇದನ್ನು ಕೈಗೊಳ್ಳುವ ಧರ‍್ಯವಿಲ್ಲ.
ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವುದರಿಂದ ಕಪ್ಪು ಹಣ ಮತ್ತು ಲೆಕ್ಕ ತಪ್ಪಿಸಿದ ಸಂಪತ್ತಿನ ಸೃಷ್ಟಿಯನ್ನು ನಿಯಂತ್ರಿಸಲು ಸಾಧ್ಯವೆಂದು ನಾನು ಇದೇ ಅಂಕಣದಲ್ಲಿ ( 27-10-2016) ಪ್ರತಿಪಾದಿಸಿದ್ದೆ. ದೊಡ್ಡ ನೋಟುಗಳನ್ನು ಭೂಮಿ ಖರೀದಿ, ಬಂಗಾರ ಖರೀದಿಗಳಲ್ಲಿ ಬಳಸಿ ಕಪ್ಪು ಸಂಪತ್ತು ಸೃಷ್ಟಿಯಾಗುವದಕ್ಕೆ ಇನ್ನಷ್ಟು ಸಹಾಯಕವಾಗಲು 2000 ದ ನೋಟು ಬಂತೆಂದು 17-11-16 ರಂದು ವಿವರಿಸಿದ್ದೆ. ನೋಟು ರದ್ದತಿಯನ್ನು ಮಾಡಿದ ರೀತಿ, ನಡೆಸಿದ ವಿಧಾನಗಳನ್ನು ಗಮನಿಸಿದಾಗ ಇದು ರ‍್ಕಾರ ಪೋಷಿತ, ಸಂಘಟಿತ ಲೂಟಿ, ಕಾನೂನಿನ ರಕ್ಷಣೆಯಲ್ಲಿ ಜನಸಾಮಾನ್ಯರ ಸುಲಿಗೆ ಎಂದು ಹಲವರು ಮಾಡಿರುವ ಟೀಕೆಯಲ್ಲಿ ತಪ್ಪಿಲ್ಲವೆನಿಸುತ್ತದೆ.
ನೋಟು ರದ್ದತಿಯಾದಾಗಲೇ ಹಲವು ರ‍್ಥಿಕ ತಜ್ಞರು ರ‍್ಥಿಕ ಹಿಂಜರಿತದ ಮುನ್ಸೂಚನೆ ನೀಡಿದ್ದರು. ತಮ್ಮ ಆಪ್ತ ವಲಯದ ಹಿತಾಸಕ್ತಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡ ಪ್ರಧಾನಿ ಮತ್ತು ಅವರ ತಂಡದವರು ಇಂತಹ ಸಲಹೆ, ಮುನ್ಸೂಚನೆಗಳಿಗೆ ಬೆಲೆ ನೀಡಲೇ ಇಲ್ಲ. ಬದಲಿಗೆ ದೇಶದ ಮಧ್ಯಮ ರ‍್ಗದವರನ್ನೂ ಬೆದರಿಸುವ ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಮಧ್ಯಮ ರ‍್ಗದವರ ಬಹುನಿರೀಕ್ಷಿತ ಆದಾಯ ತೆರಿಗೆಯ ಮಿತಿ ಏರಿಸುವುದನ್ನು ಮುಂದೂಡುವ ಸಲುವಾಗಿ ಬಂಗಾರದ ನಿಯಂತ್ರಣದ ನಾಟಕ ನಡೆಸಲಾಗುತ್ತಿದೆಯೆಂಬ ಅಭಿಪ್ರಾಯವನ್ನು ತಳ್ಳಿ ಹಾಕಲಾಗದು.
ನೋಟು ರದ್ದತಿಯ ನಂತರದ ಮೂರು ರ‍್ಷಗಳಲ್ಲಿ ಆಗಿರುವ ಉದ್ಯೋಗ ನಷ್ಟ, ರ‍್ಥಿಕ ಹಿಂಜರಿತ, ಅಂದಿನ ನರ‍್ಣಯ ಸರಿ ಇರಲಿಲ್ಲವೆಂಬುದನ್ನು ಸೂಚಿಸುತ್ತದೆ. ಚಲಾವಣೆಗೆ ಬಂದಿರುವ ಹೊಸ ನೋಟುಗಳು ಕೆಲವೇ ತಿಂಗಳುಗಳಲ್ಲಿ ರದ್ದಿಯಂತಾಗಿರುವುದನ್ನು ನೋಡುವಾಗ ಹಳೆಯ 10, 20, 50 ರ ನೋಟುಗಳನ್ನು ಬದಲಿಸುವ ಸಾವಿರಾರು ಕೋಟಿ ರ‍್ಚಿನ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿರಬಹುದಾದ ಅನುಮಾನ ಮೂಡಿಸುತ್ತದೆ. ಕಪ್ಪು ಸಂಪತ್ತಿನ ಸೃಷ್ಟಿಗೆ ತಡೆ ಒಡ್ಡಬಹುದಾದ ನೋಟು ರದ್ದತಿಯ ತಪ್ಪು ವಿಧಾನಗಳು, ಅವೈಚಾರಿಕ ಕ್ರಮಗಳು, ಅಧಿಕಾರದ ದಾಹ, ರಾಜಕೀಯ ಲಾಭದಾಸೆಗಳಿಂದಾಗಿ ಇಂದು ಸಂಪತ್ತಿನ ಕೇಂದ್ರೀಕರಣವನ್ನು ಹೆಚ್ಚಿಸಿ ದೇಶದ ರ‍್ಥಿಕ ಅಧೋಗತಿಗೆ ಕಾರಣವಾಗುತ್ತಿರುವುದು ದುರಂತ. ಕಪ್ಪು ಹಣದ ನಿಯಂತ್ರಣಕ್ಕೆ ಉತ್ತಮ ಆಯುಧವಾಗಬಲ್ಲ ನೋಟ್ ರದ್ದತಿ ಅಸ್ತ್ರವನ್ನು ದುರುಪಯೋಗ ಮಾಡಿ ವ್ರ‍್ಥಗೊಳಿಸಲಾಯಿತು.
ಭಾವನಾತ್ಮಕ ಅಂಶಗಳನ್ನೇ ಪ್ರಧಾನವಾಗಿಸಿ, ಇತರರನ್ನು ಹಳಿಯುವುದರಿಂದಲೇ ದೇಶ ಕಟ್ಟಲಾಗದು. ಕೆಲವು ಶ್ರೀಮಂತರ ಏಳ್ಗೆಗಾಗಿಯೇ ಅಹರ್ನಿಶಿ ದುಡಿಯುತ್ತಾ, ಜನಪ್ರಿಯ ಯೋಜನೆಗಳ ಮೂಲಕ ಬಡವರ ಮೂಗಿಗೆ ತುಪ್ಪ ಸವರಿ, ಮಧ್ಯಮ ವರ್ಗದ ಜನರನ್ನು ತುಳಿಯುವ ಇಂದಿನ ಬಂಡವಾಳವಾದಿ ಕೇಂದ್ರೀಕೃತ ರ‍್ಥವ್ಯವಸ್ಥೆಯನ್ನು ಕೊನೆಗೊಳಿಸಲು ಸಾಮಾಜಿಕ- ಆರ್ಥಿಕ ಕ್ರಾಂತಿಯಿಂದ ಮಾತ್ರ ಸಾಧ್ಯ. ಜನರ ಕೈಗೆ ಆರ್ಥಿಕ ಅಧಿಕಾರ, ಸರಕಾರದ ಅತಿ ಕಡಿಮೆ ಹಸ್ತಕ್ಷೇಪವಿರುವ ವಿಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯ ಅನುಷ್ಠಾನದಿಂದ ಮಾತ್ರ ನೈಜ ಪ್ರಗತಿ ಸಾಧ್ಯ.

*************************************************************

ಪರಿಚಯ:

ಕೃಷಿಕರು, ಅಂಕಣಕಾರರು, follower of PROUT, a new socio economic theory, lives in sisri

Leave a Reply

Back To Top