ಇರಬಹುದೆ?
ಪ್ರಮೀಳಾ ಎಸ್.ಪಿ.
ನಿತ್ಯ ನಿರಂತರ
ನೆರಳು ನೀಡುವ
ಎಲೆ ಯುದುರದ
ಮರವಾದರೂ ಇರಲಹುದೇ!
ಮುಂಗಾರೂ ಮೂರೇ ದಿನ
ಮಲ್ಲಿಗೆಯ ಪರಿಮಳವೂ
ಸಪ್ತದಿನಗಳೇ!
ಚಂದಿರನು ಬೆಳದಿಂಗಳ
ತಿಂಗಳಿಡೀ ಹೊಳಪಾಗಿ
ಹರವಲಹುದೇ!
ತುಂಬೆಯ ರಸ ಸವಿದ
ದುಂಬಿಯೊಂದು ಮತ್ತದರತ್ತ
ಇರಲುಬಹುದೇ!
ಅದರದರ ಕಾಲಕ್ಕೆ
ಭಾವ ಬಕುತಿಯ ತಾಳಕ್ಕೆ
ಸಿಕ್ಕಷ್ಟು ದಕ್ಕಿಸುವುದು
ನೇಮವಲ್ಲವೇ!
ಇಷ್ಟಾದರೂ ಹುಡುಕುತ್ತಲೇ ಇರುವೆ
ನಿತ್ಯವೂ ಹಸಿರಾದ ಪ್ರೀತಿಯನು
ನಾನು ಮೂರ್ಖಳಾದೆನೆ ಗೆಳೆಯ!
ನೈಸ್
ತುಂಬಾ ಚೆನ್ನಾಗಿದೆ.ಅಭಿನಂದನೆಗಳು ಪ್ರಮೀಳಾ.