ಗಜಲ್
ಕಣ್ಣುಗಳು ಕೂಡುವಲ್ಲಿಗೆ ಹೃದಯ ಬೆರೆತಿದ್ದವು ಅವುಗಳ ತಪ್ಪೇನಿತ್ತು…?
ಮರೀಚಿಕೆಯಾಗಿಯಾದರೂ ಮೈ ಮರೆತಿರುವಾಗ ಬಂದು ಮೆರೆದು ಬಿಡು ಒಮ್ಮೆ
ಗಜಲ್
ಓಡಿ ಹೋದ ಪ್ರೇಮಿಗಳಿಗೆ ಶಕುನಿಯಾಗದಿರು ಪ್ಯಾರಿ
ಗಾಂಧಿ ತಾತನ ಮೂರು ಮಂಗಗಳೂ ಮಂಗಮಾಯ ಮಾಡದಿರು ಪ್ಯಾರಿ
ಗಜಲ್
ನನ್ನ ಓರೆಕೋರೆಗಳ ತಿದ್ದಲು ಕನ್ನಡಿಯಾಗುಳಿದಿದ್ದೆ ನೀನು
ಒಡೆದ ಕನ್ನಡಿಯ ಕೊಂಕುನೋಟಕ್ಕೆ ಬೆದರದಂತೆ ಅಳಿಸಿಬಿಡು ಗುರುತು
ಗಜಲ್
ಮುಷ್ಠಿ ಪ್ರೀತಿಯನು ನನ್ನೊಡಲಿಗೆ ಹರಿಸಿ ಹಸಿರಾಗಿಸು
ಬರುವ ಬಿರುಗಾಳಿಯನೆ ತಡೆಹಿಡಿದು ಕಾದಿರುವೆ ಒಲವೆ
ನನ್ನ ಕಣ್ಣಲ್ಲಿ ನಿನ್ನ ರೂಪು ಅಚ್ಚಾದ ಮೇಲೆ ನನಗೆ ಬೇರೇನೂ ಕಾಣುತ್ತಿಲ್ಲ
ಬದುಕ ಬಿರುಗಾಳಿಗೆ ತತ್ತರಿಸಿರುವೆ ನಿನ್ನ ಕೈ ಆಸರೆಯಿರದೆ ಹೇಗೆ ಏಳಲಿ ಒಡೆಯ
ಅವನ ಮುನಿಸಿಗೆ ಅನುರಾಗದ ಬೆಳೆ ನೆಲಕಚ್ಚಿದೆ ಬಾಡಿ
ಬಿರಿದ ಎದೆ ಹೊಲವು ಪರಿತಪಿಸುತಿದೆ ಮಳೆಯ ಬರುವಿಗಾಗಿ
ಗಜಲ್
ಬಾನಿನ ಬಣ್ಣದಲಿ ರಂಗೋಲಿಯ
ಬೆಡಗು ಮೂಡುತ್ತಿದೆ ಕಾಣ
ಗಾನದ ಸವಿಗೆ ಬಾನಾಡಿಗಳ
ಹಾರಾಟ ತಡೆದಳು ನೋಡು
ಗಜಲ್
ಬಚ್ಚಿಟ್ಟ ಬಯಕೆಗಳ ಅರುಹದೇ ಇದ್ದರೂ ಚಿಂತೆ ಇಲ್ಲ ಎನಗೆ ಸಮ್ಮತವು
ಅರ್ಥೈಸಿಕೊಳ್ಳುವ ಮನಸ್ಸುಗಳೇ ಹೀಗೆ ಉಳಿಯುವುದು ಸದಾ ಹಸಿರು
ಗಜಲ್
ನನ್ನ ದೂರಾಗಿಸಿ ನೀ ಮನಸಾರೆ ಸುಖದಿ ಬಾಳಲಾರೆ ಬಲ್ಲೆ ನಿನ್ನ ಹೃದಯವನ್ನು
ಒಂದೇ ದಿನವಾದರೂ ಜೊತೆ ಬಾಳಿದರೆ ಈ ಜನ್ಮ ಪರಿಪೂರ್ಣವೆಂದು ನಂಬಿರುವೆ
ಗಜಲ್
ಗಜಲ್ ಅಂತರಂಗದ ಪ್ರೀತಿಯ ದೀಪ ಬೆಳಗಬೇಕಿದೆ ತೂಗುದೀಪವೇವಿರಹವು ಮಂಜಿನ ಹೂವಾಗಿ ಕರಗಬೇಕಿದೆ ತೂಗುದೀಪವೇ ಒಲುಮೆಯ ಮಧುರ ನಕ್ಷತ್ರಗಳ ಎಣಿಕೆಯ ಎಷ್ಟೋ ರಾತ್ರಿಗಳು ಕಳೆದಿವೆಹೃದಯಗಳ ಬಡಿತ ಕೇಳುತ ಕರಗಳಲ್ಲಿ ಬೆರೆಯಬೇಕಿದೆ ತೂಗುದೀಪವೇ ಬೇವಫಾ ನಾವಿಬ್ಬರೂ ಅಲ್ಲ ಜನುಮಾಂತರ ಬಂಧನ ಬದಲಾಗುವುದೆಸ್ಪಂದಿಸಿದ ಭಾವ ರಾಗ ರಾಗಿಣಿಯರು ಬಾಳಬೇಕಿದೆ ತೂಗುದೀಪವೇ ಚಾತಕ ಪಕ್ಷಿಯಂತೆ ಕಾಯುತಿರುವೆ ನಿನ್ನೊಲುಮೆಯ ಗುಟುಕಿಗಾಗಿಹೃದಯಗಳಲ್ಲಿ ಮೂಡಿದ ಪ್ರೀತಿಯು ನೀಗಬೇಕಾಗಿದೆ ತೂಗುದೀಪವೇ ಆಮಂತ್ರಣ ನೀಡದೆ ಬರುವ ಸಾವು ಬರುವ ಮುನ್ನವೇ ಮಾಜಾದುಃಖ ದುಮ್ಮಾನ ಬಿಟ್ಟು ಒಂದಾಗಬೇಕಿದೆ ತೂಗುದೀಪವೇ ಮಾಜಾನ್ ಮಸ್ಕಿ