ಗಜಲ್
ಬೊಗಸೆ ತುಂಬ ಅರಳು ಮಲ್ಲಿಯಿಡಿದು ಕಾದಿರುವೆ ಒಲವೆ
ನಿನ್ನ ಹೆರಳಿಗೆ ಮುಡಿಸಲು ಹೂವನಿಡಿದು ಕಾದಿರುವೆ ಒಲವೆ
ಮನದ ಕನವರಿಕೆಗೆ ನಿದ್ದೆಯಲು ಕೊನೆಯಂಬುದೇ ಇಲ್ಲ
ಎದೆಯಲಿ ಅಚ್ಚಾಗಿ ನಿಂತ ಚಿತ್ರವನಿಡಿದು ಕಾದಿರುವೆ ಒಲವೆ
ಎದೆಯನಾಳ್ವ ದೇವತೆ ನೀನು ದೂರವಾದ ಮೇಲೆ
ಅಗಲಿಕೆಯ ನೋವಲ್ಲಿ ಹೃದಯವಿಡಿದು ಕಾದಿರುವೆ ಒಲವೆ
ಮುಷ್ಠಿ ಪ್ರೀತಿಯನು ನನ್ನೊಡಲಿಗೆ ಹರಿಸಿ ಹಸಿರಾಗಿಸು
ಬರುವ ಬಿರುಗಾಳಿಯನೆ ತಡೆಹಿಡಿದು ಕಾದಿರುವೆ ಒಲವೆ
ಒಂದೆ ಒಂದು ಹನಿ ಪ್ರೀತಿಗಾಗಿ ಕಾದಿರುವ ‘ಯಯಾ’
ಬಂದು ಬಿಡು ಬೇಗ ಪ್ರೀತಿಯಲಿ ಜೀವವಿಡಿದು ಕಾದಿರುವೆ ಒಲವೆ
ಯ.ಮಾ.ಯಾಕೊಳ್ಳಿ