ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

human and love spirit powerful energy connect to the universe power abstract art watercolor painting illustration design hand drawn

ಛೋಟು ಹೊಟ್ಟೆಗಾಗಿ ಮೋಟೆ ಕಟ್ಟಿಕೊಳ್ಳದಿರು ಪ್ಯಾರಿ
ಕಾಲ ಬೊಬ್ಬೆಗೆ ಹೇಳಿದ ಸಾಂತ್ವನ ಮರೆಯದಿರು ಪ್ಯಾರಿ

ಮನುಷ್ಯತ್ವ ಮಾರಿ ಕೊಂಡವನ ಎದುರು ಅಂಗಲಾಚದಿರು ಪ್ಯಾರಿ
ಅನ್ನಕ್ಕಾಗಿ ಅರಸುವವನ ಮುಂದೆ ಡೊಳ್ಳು ಹೊಟ್ಟೆಯ ಕೇಕೆ ಹಾಕದಿರು ಪ್ಯಾರಿ

ಮಂದಿರ ಮಸೀದಿ ಇಗರ್ಜಿಗಳಿಗೆ ಶತಮಾನದ ಬೀಗ ಜಡೆಯದಿರು ಪ್ಯಾರಿ
ತುಕ್ಕು ಹಿಡಿದ ತುಟಿಗಳಿಗೆ ಕೀಲೆಣ್ಣಿ ಹಾಕಲು ಮರೆಯದಿರು ಪ್ಯಾರಿ

ಓಡಿ ಹೋದ ಪ್ರೇಮಿಗಳಿಗೆ ಶಕುನಿಯಾಗದಿರು ಪ್ಯಾರಿ
ಗಾಂಧಿ ತಾತನ ಮೂರು ಮಂಗಗಳೂ ಮಂಗಮಾಯ ಮಾಡದಿರು ಪ್ಯಾರಿ

ನಿಸರ್ಗದ ಕಾರ್ಖಾನೆಯಲಿ ಜೊಳ್ಳು ಸರಕು ಕೊಳ್ಳದಿರು ಪ್ಯಾರಿ
ಆಶಿಕ್ ನ ಎದೆಯಲಿ ಅರಳುವ ಮೊಗ್ಗುಗಳನ್ನು ಕೀಳದಿರು ಪ್ಯಾರಿ


ಎ ಎಸ್. ಮಕಾನದಾರ

About The Author

5 thoughts on “ಗಜಲ್”

  1. ಪ್ರಕಾಶಸಿಂಗ್ ರಜಪೂತ

    ಪ್ಯಾರಿಯ ಪ್ರೀತಿ ಬಲುಭದ್ರ ವಾದದ್ದು
    ಅದಕ್ಕಾಗಿ ಜೀವಗಳು ಬಹಳ ಕಾಲ ಕಾದದ್ದು

Leave a Reply

You cannot copy content of this page

Scroll to Top