ಗಜಲ್
ತಾರೆಗಳು ಎಣಿಸುತ ರಾಧೆಯು .
.ಅರಮನೆಗೆ ನಡೆದಳು ನೋಡು
ಮರಗಳ ಹಸಿರಲಿ ಮಮತೆಯ
ಮಂದಹಾಸ ಪಡೆದಳು ನೋಡು
ಬೃಂದಾವನ ಹೂ ಗಿಡಗಳು
ನಿನಗಾಗಿ ಕಾಯುತಿದೆ ನೋಡು
ಸುಮಧುರ ಕೊಳಲಿನ ನಾದಕೆ
ಮೊಸರ ಕಡೆದಳು ನೋಡು
ನವಿಲಿನ ನರ್ತನ ಮುದ್ದು
ಕಂಗಳ ಕುಣಿಸುತಿದೆ ಅಲ್ಲವೇ
ರವಿಯ ಕಿರಣವು ಮನಸೋಕಿ
ಮೌನವ ಒಡೆದಳು ನೋಡು
ಬಾನಿನ ಬಣ್ಣದಲಿ ರಂಗೋಲಿಯ
ಬೆಡಗು ಮೂಡುತ್ತಿದೆ ಕಾಣ
ಗಾನದ ಸವಿಗೆ ಬಾನಾಡಿಗಳ
ಹಾರಾಟ ತಡೆದಳು ನೋಡು
ಕರೆವ ಕುಡಿ ಕಾಂತಿಗೆ
ರಶ್ಮಿಯ ಮನ ಹಿಗ್ಗಿದೆ
ಹರಿವ ನದಿಯ ಸಲೀಲಕೆ
ಸ್ಪಟಿಕದಿ ಹೊಡೆದಳು ನೋಡು.
ಭಾರತಿ ರವೀಂದ್ರ