Category: ಗಝಲ್

ಗಜಲ್

ಗಜಲ್ ರತ್ನರಾಯಮಲ್ಲ ಕಾಳಸಂತೆಯಲಿ ಹಾಸಿಗೆಗಳು ಕೊಳೆಯುತ್ತಿವೆಜೀವದ ಬಡತಿಗಾಗಿ ಆಸ್ಪತ್ರೆಗಳು ಹವಣಿಸುತ್ತಿವೆ ಜನನದಲ್ಲಿ ಮರಣವೂ ಇದೆ ಅಂಜುವವರಾರುಸಾವಿನಲ್ಲೂ ರಾಜಕೀಯ ಪಕ್ಷಗಳು ಚಿಗುರುತ್ತಿವೆ ಪಾಪ-ಪುಣ್ಯ ಬಾಲ್ಯದಿಂದಲೂ ಅನುರಣಿಸುತಿದೆಮಸಣಗಳೂ ಇಂದು ಧನವನ್ನು ಬೆಳೆಯುತ್ತಿವೆ ಆತ್ಮವಿಶ್ವಾಸದ ಫಸಲಿಗೆ ಪರಂಪರೆಯೇ ಇದೆ ಇಲ್ಲಿಮಾಧ್ಯಮಗಳೇ ಭಯ ಬಿತ್ತಿ ದುಡ್ಡು ದೋಚುತ್ತಿವೆ ಮರಣಕ್ಕೆ ಚುಂಬಿಸಲು ಭಯ ಪಡದಿರು ‘ಮಲ್ಲಿ’ಹಣದ ಹಾದರವು ಹೆಣಗಳನ್ನು ಉರುಳಿಸುತ್ತಿವೆ ****************

ಗಜಲ್.

ಗಜಲ್. ವಿಜಯಲಕ್ಷ್ಮಿ ಕೊಟಗಿ ನನ್ನ ದೇಹದ ಬಣ್ಣ ಬಿಸಿಲನ್ನೇ ಉಂಡು ಕಪ್ಪಾಗಿದೆ ಕಾಮ್ರೇಡ್ನನ್ನ ಗಜಲ್ ದುಡಿದು ಹಕ್ಕಳೆದ್ದು ಕೆಂಪಾಗಿದೆ ಕಾಮ್ರೇಡ್ ನಾನು ಹಸಿವನ್ನು ತಣಿಸಲು ಕೆಸರಿಗಿಳಿಯಲು ಹೇಸದಿರಬಹುದುನನ್ನ ಗಜಲಿನಲ್ಲಿ ಸ್ವಾಭಿಮಾನದ ನಿರ್ಮಲ ಕನಸಿದೆ ಕಾಮ್ರೇಡ್ ನಾನು ಆಸ್ತಿ ಅಧಿಕಾರವಿಲ್ಲದ ಬಡವನೇ ಇರಬಹುದುನನ್ನ ಗಜಲಿಗೆ ಸಂವಿಧಾನದ ಒಡನಾಟವಿದೆ ಕಾಮ್ರೇಡ್ ನಾನು ನರಪೇತಲ ನಾರಾಯಣನಂತೆ ಇದ್ದಿರಬಹುದುನನ್ನ ಗಜಲಿಗೆ ಬಲಭೀಮನ ತಾಕತ್ತಿದೆ ಕಾಮ್ರೇಡ್ ನಾನು ದಲಿತ ಶೂದ್ರ ಕೂಲಿಕಾರ್ಮಿಕನೇ ಇರಬಹುದುನನ್ನ ಗಜಲ್ ಶ್ರಮಿಕರ ಬೆವರಿಗೆ ಅರ್ಪಿತವಾಗಿದೆ ಕಾಮ್ರೇಡ್ ನಾನು ಮನುಷ್ಯನೆಂದೇ ಭಾವಿಸದ […]

ಗಜಲ್

ಮುಚ್ಚಿದ ಕಿಟಕಿಗೆ ಬಡಿದು ಸಾಯುವ ಹಕ್ಕಿಗೆ ಯಾವ ಭ್ರಮೆ
ಚಾಚಿದ ಕೈಗಳೆಲ್ಲ ಹಿಂದೆ ಸರಿಯುತ್ತಿವೆ ಸಹಿಸಲಾಗುತ್ತಿಲ್ಲ.

ನೆಲವೇ ಶ್ರೇಷ್ಠವೆನುತ ನೊಸಲಿಗೆ ವಿಭೂತಿ ಧರಿಸುವನು
ಜಲವನು ಅರಿಯದವರಿಗೆಲ್ಲ ತಿಳಿಸಿದವನು ನಮ್ಮ ಧಣಿ

ನೆತ್ತಿಯ ಮೇಲೆ ಕೆಂಡಕಾರುವ ಸೂರ್ಯ ಪಾದದಡಿ ಕಾದ ಬುವಿ
ಸವೆದ ದೇಹ ಕಳೆದುಹೋದ ಯೌವನದ ಕನಸುಗಳು ಕಾಡುತಿವೆ

ಗಜ಼ಲ್

ಕಣ್ಣೀರು ಕಡಲಾಗಿ ಹರಿದು ಹೋದಾಗ ಈಜಿ ದಡ ಸೇರಿದ್ದೇವೆ
ಬದುಕು ನೊಂದು-ಬೆಂದು ಕತ್ತಲಾದಾಗ ಚಿಮ್ಮಣಿ ಹಿಡಿದಿದ್ದೇವೆ

ಛಿದ್ರವಾಗಿದೆ ಅನ್ನದಾತನ ಹೃದಯ ಸದಾ ವರ್ಷವಿಲ್ಲದೆ ಕಂಗಾಲಾಗಿ ಕೂತಿಹನು|
ಭದ್ರತೆ ದೊರೆಯದೆ ತಳದಹೂಳಿಗೆ ಕಣ್ಕುಕ್ಕಿ ಬೆದರುತ ಹುದುಗಿದೆ ನಿತ್ಯ|

Back To Top