ರೈತ ಗಜಲ್

The Age of Robot Farmers | The New Yorker

ದಣಿವರಿಯದೆ ದೇಹ ದಂಡಿಸುವನು ನಮ್ಮ ಧಣಿ
ಮರೆತ ಜಗಕೆಲ್ಲ ಜೀವ ಕೊಡುವವನು ನಮ್ಮ ಧಣಿ

ನೆಲವೇ ಶ್ರೇಷ್ಠವೆನುತ ನೊಸಲಿಗೆ ವಿಭೂತಿ ಧರಿಸುವನು
ಜಲವನು ಅರಿಯದವರಿಗೆಲ್ಲ ತಿಳಿಸಿದವನು ನಮ್ಮ ಧಣಿ

ಬೆನ್ನನು ಬಾಗಿಸಿ ಭುವಿಗೆ ಬಾಗುವ ಭವಿಷ್ಯದ ಭವಿತವನು
ಸ್ವರ್ಗಕ್ಕೂ ಸ್ವಾಭಿಮಾನಿ ಬದುಕು ಕಲಿಸಿದವನು ನಮ್ಮ ಧಣಿ

ದೇಗುಲವೆನುತ ದುಡಿಮೆಗೆ ದೇಹ ದಾರಿ ದೋರಿದವನು
ಕಾಯಕ ಯೋಗಿಯಾಗಿ ತಪವ ಗೈಯುವನು ನಮ್ಮ ಧಣಿ

ನೇಗಿಲ ಹೊತ್ತರೂ ನೋಗದಲಿ ನಾಕವನು ಕಂಡವನು
ತಾಯಿಯ ಮಡಿಲಲ್ಲಿಯೇ ಅನ್ನ ನೀಡಿದವನು ನಮ್ಮ ಧಣಿ

**********************************

ರೇಮಾಸಂ

Leave a Reply

Back To Top