ಪ್ರಸ್ತುತ
ಗುರು-ಶಿಷ್ಯ ಸಂಬಂದ ಪ್ರಜ್ಞಾ ಮತ್ತಿಹಳ್ಳಿ ಕೇವಲ ತರಗತಿಯ ನಾಕು ಗೋಡೆಗಳ ನಡುವೆ ವೇಳಾಪಟ್ಟಿಯ ಚೌಕಗಳ ಮಧ್ಯದಲ್ಲಿ ಸಿಲೆಬಸ್ ಎಂಬ ಅಕ್ಷರದ ಅಂಗಡಿ ಇಟ್ಟುಕೊಂಡ ಇವತ್ತಿನ ಗುರು, ಅಕ್ವೇರಿಯಂನ ಮೀನಿನಂತೆ ಅಸಹಾಯಕನಾಗಿದ್ದಾನೆ. ಅವನಿಗೆ ಸಮಯಮಿತಿ ಹಾಗೂ ವಿಷಯಮಿತಿ. ದಿನಕ್ಕೊಂದೊಂದೇ ಗುಳಿಗೆ ಆಹಾರ ನುಂಗಿ ಗಾಜಿನ ಗೋಡೆಗೆ ಮೂತಿ ಗುದ್ದುತ್ತ ಬುಳುಕ್ ಬುಳುಕ್ ಮುಳುಗುತ್ತಿದ್ದಾನೆ. ಗುರು-ಶಿಷ್ಯರು ಈ ಚರಾಚರದ ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯಬಲ್ಲ ಸಂಬಂಧವನ್ನು ಹೊಂದಿರುತ್ತಾರೆ. ತರಗತಿಯ ಕರಿಹಲಗೆಯ ಮೇಲೆ ಬಿಳಿ ಸೀಮೆ ಸುಣ್ಣಕ್ಕೆ ನೋವಾಗದಂತೆ ಭೂಮಿಯ ಚಿತ್ರ […]
ಲಹರಿ
ಹಾಡುಗಳು ಹೀಗೆ…. ಜಿ.ಲೋಕೇಶ್ ಈ ಬದುಕಿನ ಒತ್ತಡಗಳನ್ನು ನಿಭಾಯಿಸುವವರು ತಾವು ಅದರಿಂದ ಮುಕ್ತರಾಗಲು ತಾವು ತಾವಾಗಿಯೇ ಇರಲು ಹಲವು ದಾರಿಗಳನ್ನು ಕಂಡುಕೊಳ್ಳುತ್ತಾರೆ.ಅದರಲ್ಲಿ ಸಂಗೀತವಂತು ಮನಸ್ಸಿಗೆ ಹಬ್ಬ ನೀಡುವ ಬೆಳಕು.ಹಾಡುಗಳನ್ನು ಗುನುಗುತ್ತಾ ಅವುಗಳೊಡನೆ ದಿನ ದೂಡುವ ಎಷ್ಟೋ ಮನಸ್ಸುಗಳಿವೆ. ಕೆಲವು ಹಾಡುಗಳಂತು ಎಷ್ಟು ಕಾಡುತ್ತವೆ ಅಂದರೆ ಬಹುಶಃ ಅವು ನಮ್ಮ ಬದುಕಿನುದ್ದಕ್ಕೂ ಜೊತೆಗೆ ಇದ್ದು ಬಿಡುತ್ತವೆ.ನಮ್ಮೊಂದಿಗೆ, ನಮ್ಮೊಡನೆ,ನಮ್ಮ ಜೀವನದ ಘಟನೆಗಳೊಡನೆ ತಳಕು ಹಾಕಿಕೊಂಡಿರುತ್ತವೆ.ಅದರಲ್ಲಿ ಪ್ರೇಮಿಗಳಿಗಂತು ಹಾಡುಗಳು ವರದಾನ. ಅಂತಹ ಪ್ರೇಮಿ ಹೀಗೆ ತನ್ನ ಜೀವನವನ್ನು ತನ್ನ ಪ್ರಿಯತಮೆಗಾಗಿ ಮೀಸಲಿಡಬಹುದು. […]
ಇತರೆ
ಮರುಕ ಹುಟ್ಟುತ್ತದೆ ವಿದ್ಯಾ ಶ್ರೀ ಎಸ್ ಅಡೂರ್ ಕೆಲವು ಸಮಯದ ಹಿಂದೆ ನಾನು ಪಟ್ಟಣದಲ್ಲಿರುವ ನನ್ನ ಗೆಳತಿಯ ಮನೆಗೆ ಹೋಗಿದ್ದೆ. ಬಾಲ್ಯದ ಗೆಳತಿ.ನಾನು ಮದುವೆಯಾಗಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಶಿಫ್ಟ್ ಆಗಿದ್ದರೆ, ಆಕೆಯೋ ನನ್ನೊಂದಿಗೆ ಹಳ್ಳಿಯಲ್ಲಿ ನನ್ನೆಲ್ಲ ತುಂಟತನಗಳಿಗೆ ಜತೆಯಾಗಿದ್ದವಳು, ಮದುವೆಯಾಗಿ ಮಹಾನಗರವನ್ನು ಸೇರಿ “ಸಿಟಿವಂತ“ಳಾಗಿದ್ದಳು. ಅನೇಕ ವರ್ಷಗಳಿಂದ ಭೇಟಿಯಾಗಿರದಿದ್ದ ನನಗೆ ಮಜಬೂತು ಖಾತರ‍್ದಾರಿಯ ಪ್ಲಾನ್ಮಾಡಿಕೊಂಡಿದ್ದಳು.ಆತ್ಮೀಯತೆಯಿಂದ ನನ್ನನ್ನು ಬರಮಾಡಿಕೊಂಡು ಮಾತಿನಲ್ಲಿ ಮೈಮರೆತಿದ್ದವಳು ಅಚಾನಕ್ಕಾಗಿ ನಾಲಿಗೆ ಕಚ್ಚಿಕೊಂಡು ತನ್ನ ಏಳೆಂಟು ವರ್ಶದ ಮಗಳನ್ನು ಬಳಿಗೆ ಕರೆದು ಕಿವಿಯಲ್ಲಿ […]
ಪ್ರಸ್ತುತ
ಮತ್ತೆ ಕಾಣಬಲ್ಲೆವೇ ಆ ದಿನಗಳನು..? ಮಲ್ಲಿಕಾರ್ಜುನ ಕಡಕೋಳ ದುರಿತಕಾಲ ಎಂಬ ಪದ ನಾವೆಲ್ಲ ಬರಹಗಳಲ್ಲಿ ಸೂಕ್ಷ್ಮತೆಯಿಂದ ಬಳಕೆ ಮಾಡಿದ ಪರಿಚಯವಿತ್ತು. ಪ್ರಸ್ತುತ ನಾವು ಅನುಭವಿಸುತ್ತಿರುವ ಖರೇ, ಖರೇ ದುರಿತಕಾಲದ ಈ ದಿನಗಳಿಗೆ ಕೊನೆಯೆಂಬುದು ಯಾವಾಗ ಎಂಬ ದುಗುಡ ನಮ್ಮನ್ನೀಗ ಘೋರವಾಗಿ ಬಾಧಿಸುತ್ತಿದೆ. ಅಷ್ಟಕ್ಕೂ ಕೊರೊನಾದ ಈ ಕಾಲಘಟ್ಟಕ್ಕೆ ಕೊನೆಯೆಂಬುದು ಇದೆಯೋ, ಇಲ್ಲವೋ ಎಂಬ ಕ್ರೂರ ಆತಂಕ. ಹಗಲು ರಾತ್ರಿಗಳೆನ್ನದೇ ಕಿವಿ, ಕಣ್ಣು, ಬಾಯಿ, ಮೂಗು, ಮನಗಳ ತುಂಬೆಲ್ಲ ಸೋಂಕಿತರು, ಶಂಕಿತರು, ರೆಡ್ ಝೋನ್, ಎಲ್ಲೋ ಝೋನ್, ಪೋಲಿಸರು, […]
ಪ್ರಸ್ತುತ
ಸಂವಾದ ಜ್ಯೋತಿ ಡಿ.ಬೊಮ್ಮಾ. ಹೌದು ಪಾಶ್ಚಾತ್ಯ ಸಂಸ್ಕೃತಿಯೆ ಚನ್ನ ಒತ್ತಾಯದ ಬದುಕು ಅವರಾರು ಬದುಕರು ಹೊಂದಾಣಿಕೆಯ ಪ್ರಯತ್ನವೇ ಮಾಡರವರು ನಮ್ಮಂತಲ್ಲ ಒಳಗೊಂದು ಹೊರಗೊಂದು ಇಷ್ಟವಿಲ್ಲದವನ/ಳೊಂದಿಗೆ ಏಗುವ ರಗಳೆ ಕುಡಿದು ಪೀಡಿಸುವ ಗಂಡನೊಡನೆ ಸಹಬಾಳ್ವೆ ಇಲ್ಲಿ ಮಕ್ಕಳಾಗದಿದ್ದರು ತಾನೆ ತಪಿತಸ್ಥಳು ಲೋಕಕ್ಕೆ ಅವನು ಗಂಡಸು..ಅವನಲ್ಲೆನು ಕೊರತೆ..! ಮಕ್ಕಳಾದ ಮೇಲೆ ಇನ್ನೆನಿದೆ. ಅನುಸರಿಸಿಕೊಂಡು ಹೋಗುವದೊಂದೆ. ಅವರಾದರೂ ಎಲ್ಲಿರುತ್ತಾರೆ ಕೊನೆವರೆಗೆ ನಮ್ಮವರಾಗಿ..! ಬಿಟ್ಟು ಬಿಡುವದೊಳಿತು ಮನಸ್ಸಿಗೊಪ್ಪದು ಸುಮ್ಮನಿರು ,ಮಾತು ಬೇರೆ ಆತ್ಮ ಬೇರೆ ಎರಡು ಒಂದಾಗಬೇಕಾದರೆ ತೆರೆ ಸರಿಸಿ ಬದುಕಬೇಕು. ಬಯಸಿ […]
ಪ್ರಸ್ತುತ
ಮಕ್ಕಳ ಆಯ್ಕೆಯಲ್ಲಿ ನಂಬಿಕೆ ಏಕಿಲ್ಲ….? ಅನಿತ.ಕೆ.ಬಿ. ವಿವಾಹವೆಂಬುದು ನಮ್ಮ ಸಮಾಜದಲ್ಲಿ ಕಂಡುಬರುವಂತಹ ಒಂದು ಸಂಸ್ಥೆ. ಗಂಡಿಗೆ ಹೆಣ್ಣು,ಹೆಣ್ಣಿಗೆ ಗಂಡು ಆಸರೆಯಾಗಿರುತ್ತಾರೆಂಬ ನಂಬಿಕೆಯಿಂದ ವಿವಾಹ ಅವಶ್ಶಕ ಹಾಗೂ ಅನಿವಾರ್ಯ. ಮದುವೆಯನ್ನು ಪುರಾಣಗಳ ಕಾಲದಲ್ಲಿ ಸ್ವಯಂವರ ರೀತಿ ನಡೆಸಲಾಗಿದೆ. ಹಾಗದರೆ ಮದುವೆ ಎಂದರೇನು…? ಎಂಬ ಪ್ರಶ್ನೆಗೆ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬರಾದ ಮ್ಶಾಲಿನೊಸ್ಕಿರವರು “ಸ್ತ್ರೀ-ಪುರುಷರ ನಡುವೆ ಲೈಂಗಿಕ ಹಾಗೂ ಮಾನಸಿಕ ಸಂಬಂಧವನ್ನ ದೃಢಪಡಿಸುವ ಮತ್ತು ಸಂತಾನೋತ್ಪತ್ತಿಗಾಗಿ ಉದ್ದೇಶಪೂರ್ವಕವಾಗಿ ಏರ್ಪಡಿಸುವ ಒಪ್ಪಂದ” ಎಂದಿದ್ದಾರೆ. ಮದುವೆ ಇಲ್ಲದೆ ಜೀವನ ನಡೆಸಲು ಸಾಧ್ಶವಿಲ್ಲವೇ? […]
ಅನುಭವ
ಮನೆ……. ಹಕ್ಕಿ ಮನೆ ಅನುಪಮಾ ರಾಘವೇಂದ್ರ ಮನೆ……. ಹಕ್ಕಿ ಮನೆ ಈ ಮರೆವು ಅನ್ನೋದು ಮನುಷ್ಯರಿಗೆ ಮಾತ್ರವೋ….? ಅಲ್ಲಾ ಪ್ರಾಣಿ ಪಕ್ಷಿಗಳಿಗೂ ಇರುತ್ತೋ…..? ನನಗೀ ಸಂಶಯ ಬರಲು ಕಾರಣವೇನೋ ಇದೆ. ಕೆಲವು ದಿನಗಳ ಹಿಂದಿನ ಘಟನೆ…… ಸಂಜೆ ವೇಳೆ ಹಟ್ಟಿ ಬಳಿಗೆ ಹೋದಾಗ ಹಟ್ಟಿಯ ಒಳಗಿನಿಂದ ಹಕ್ಕಿಯೊಂದು ಪುರ್ರನೆ ಹಾರಿ ಹೋಯ್ತು. ಮರುದಿನ ಬೆಳಗ್ಗೆಯೂ ಅದೇ ರೀತಿ ಹಕ್ಕಿ ಹಾರುವುದು ಕಂಡಿತು. ಹಕ್ಕಿಗಳ ಕಿಚ ಪಿಚ ಸುಮಧುರವಾದ ಸಂಗೀತ…… ನಾನು ಹೋದ […]