ಲಹರಿ
ಮಳೆಯಲ್ಲಿ ನೆನೆದ ನೆನಪು ಪ್ರಮೀಳಾ ಎಸ್.ಪಿ. ” ಮಳೆ”… ಈ ಪದಕ್ಕೂ ಅದು ಸುರಿಯುವಾಗ ಕೊಡುವ ಅನುಭವಕ್ಕೂ ,ಪ್ರಕೃತಿಯಲ್ಲಿ ,ಉಂಟಾಗುವ ಬದಲಾವಣೆಗೂ ನಮ್ಮ ಬದುಕಿನಲ್ಲಿ ತರುವ ಸ್ಥಿತ್ಯಂತರಕ್ಕೂ ಹೇಳಲಾಗದ ಅವಿನಾಭಾವ ಸಂಬಂಧವಿದೆ.ಮಳೆ ಬರುತ್ತಿದೆ ಎಂದರೆ ಒಬ್ಬೊಬ್ಬರ ಯೋಚನಾ- ಲಹರಿ ಒಂದೊಂದು ರೀತಿ ಹರಿಯುತ್ತದೆ.ಹಿಂದೆಲ್ಲಾ ಹಳ್ಳಿಗಳಲ್ಲಿ ಮಳೆಗಾಲದ ಆರಂಭವಾಗುವ ಮುಂಚೆ ದನಕರುಗಳಿಗೆ ಹುಲ್ಲು ಸೊಪ್ಪು ಹೊಂದಿಸಿಕೊಂಡು;ಮನೆಗೆ ಸೌದೆ,ಬೆರಣಿ ಹಿತ್ತಲಿನಲ್ಲಿ ನೆನೆಯದ ಹಾಗೆ ಇಟ್ಟುಕೊಂಡು, ಹಪ್ಪಳ ಉಪ್ಪಿನಕಾಯಿ,ಹಿಟ್ಟು ಬೇಳೆ ಬೆಲ್ಲ ಕೂಡಿಟ್ಟುಕೊಂಡು,ಹೊಲಕ್ಕೆ ಗೊಬ್ಬರ ಚೆಲ್ಲಿ ,ಉಕ್ಕೆ ಪಾಕವಾಗಿಸಿ ಮಳೆಗಾಗಿ ಕಾಯುತ್ತಿದ್ದರು […]
ಹೊತ್ತಾರೆ
ಹೊತ್ತಾರೆ
ಅಮೇರಿಕಾದಿಂದ ಅಶ್ವತ್
ರಾಜ್ಯೋತ್ಸವದ ನೆಪದಲ್ಲೆರಡು ಮಾತು.
ಬಲಾಢ್ಯವಾಗಬೇಕಿರುವ ಕನ್ನಡಭಾಷಿಕ ಸಮುದಾಯ! ನಿಮ್ಮೆಲ್ಲರಿಗು ಕನ್ನಡ ರಾಜ್ಯೋತ್ಷವದ ಶುಭಾಶಯಗಳು…ಈ ಸಂದರ್ಭದಲ್ಲಿ ನಿಮ್ಮೊಂದಿಗೆಕೆಲ ವಿಷಯಗಳನ್ನು ಹಂಚಿಕೊಳ್ಳಬೇಕಿದೆ. ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ: ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೆÃಜಗೊಂಡಂತೆ ನಮಗೆ ಬಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ.ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಇತ್ತೀಚೆಗೆ ನಡೆದ ಕಳಸಾಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ […]
ಚರ್ಚೆ
ಟಿಪ್ಪು ಸುಲ್ತಾನನ ಇತಿಹಾಸ ಪಠ್ಯದಿಂದ ತೆಗೆಯುವುದು ಎಷ್ಟು ಸರಿ ? ಡಾ.ಮಹಾಲಿಂಗ ಪೋಳ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಹಲವು ರಾಜ ಸಂಸ್ಥಾನಗಳ ಬೀಡಾಗಿತ್ತು.ಅವು ತಮ್ಮದೇಯಾದ ಗಡಿಯನ್ನು ಹೊಂದಿದ್ದವು.ತಮ್ಮ ಸಂಸ್ಥಾನದ ಗಡಿಯನ್ನು ವಿಸ್ತರಿಸಲಿಕ್ಕೆ ಪಕ್ಕದ ರಾಜ್ಯಗಳ ಮೇಲೆ ದಾಳಿ ಮಾಡುತಿದ್ದವು.ಅಲ್ಲದೇ ತಮ್ಮದೇಯಾದ ಸಂಸ್ಕೃತಿಯ ಪ್ರಸಾರಕ್ಕೆ ಕ್ರಮ ಕೈಗೊಳ್ಳುತ್ತಿದ್ದವು.ಇದು ರಾಜಪ್ರಭುತ್ವ ಚಾಲ್ತಿಯಾದಾಗಿನಿಂದ ಬಂದದ್ದು.ಟಿಪ್ಪು ಕೂಡ ಈ ನಾಡಿನಲ್ಲಿ ಒಂದು ಸಂಸ್ಥಾನದ ರಾಜನಾಗಿದ್ದವ.ಅವನ ಸಂಸ್ಥಾನದ ಪ್ರದೇಶ ವಿಸ್ತರಿಸಲು ಪಕ್ಕದ ರಾಜ ಸಂಸ್ಥಾನಗಳ ಮೇಲೆ ದಾಳಿ ಮಾಡಿದ ಸರಿ.ಹಲವು ವಿರೋಧಿಗಳನ್ನು ಕೊಂದ ಸರಿ.ಈ […]
ಕನ್ನಡದ ಅಸ್ಮಿತೆ
ನಾಡ ದ್ವಜ ಯಾಕೆ ಬೇಕು? ಚಂದ್ರಪ್ರಭ ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟ ಪಟ ಕಯ್ಯಾರ ಕಿಞ್ಞಣ್ಣ ರೈ ದೇಶ, ಭಾಷೆ, ಸಂಸ್ಕೃತಿ, ಸಂಪ್ರದಾಯ ಇತ್ಯಾದಿ ಎಲ್ಲವುಗಳ ಮೂಲ ನೆಲೆ ಅಸ್ಮಿತೆ. ಅಷ್ಟೇ ಅಲ್ಲ ಇವೆಲ್ಲ ಒಂದನ್ನೊಂದು ಪೂರಕವಾಗಿ ಪ್ರಭಾವಿಸುವ ಅಂಶಗಳು. ವ್ಯಕ್ತಿ, ವ್ಯಕ್ತಿಯ ಮನೆತನ, ಪ್ರದೇಶ ಎಲ್ಲಕ್ಕೂ ಒಂದು ಹೆಸರಿದೆ. ಹತ್ತಾರು ಸಂಗತಿಗಳನ್ನು ಹೇಳಿ ಬಿಡುವ ತಾಕತ್ತು ಆ ಒಂದು ಹೆಸರಿಗಿದೆ. ಗುರುತಿಸುವಿಕೆಯ ಇಂಥದ್ದೊಂದು ಅಂಶವಾಗಿ ಹುಟ್ಟಿದ್ದು ‘ಧ್ವಜ’ […]
ಅನುಭವ
ಭಯದ ನೆರಳಲ್ಲಿ ಹೆಬ್ರಿ ಸದಾನಂದ ಶೆಟ್ಟಿ ಭಯದ ನೆರಳಲ್ಲಿ ಕೈಯಲ್ಲಿ ಸಣ್ಣ ಬ್ಯಾಗ್ ಹಿಡಿದ ನಾನು ನನ್ನ ಭಾವಿ ಪತ್ನಿ ನೋಡೊ ಬರದಲ್ಲಿ ಹೆಜ್ಜೆ ಹಾಕಿದೆ 40 ನಿಮಿಷ ಕಳೆದ ನ೦ತರ ಮಾವನ ಮನೆ ನಾಯಿಗಳ ಬೊಗಳುವಿಕೆಗೆ ಚಿಮಿಣಿ ಹಿಡಿದು ಹೊರ ಬ೦ದಳು ನನ್ನ ಭಾವಿ ಪತ್ನಿ, ಕಗ್ಗತ್ತಲು ” ಯಾರದು ಜಾಗ್ರತೆ ನಾಯಿ ಕಚ್ಚುತ್ತೆ ”ಅ೦ದಾಗ ” ನಾನು ಕಣೆ” ಅ೦ದಾಗ ಆಕೆಗೆ ಸಣ್ಣವರಿದ್ದಾಗಲಿ೦ದ ಗೊತ್ತಿದ್ದರಿ೦ದ ಓಡಿ ಹೋಗಿ ನಾಯನ್ನು ಕಟ್ಟಿ, ತ೦ಗಿಯನ್ನುದ್ದೇಶಿಸಿ ” ರತ್ನ […]
ಲಹರಿ
ಜೀವನ ಅನ್ನೋ ಸೈಕಲ್ ಶಂಭುಗೌಡ ಆರ್.ಜಿ. ಹುಟ್ಟೆಂಬುದ ಹುಟ್ಟಿದಾಗಿಂದ ಜೀವನ ಅನ್ನೋ ಸೈಕಲ್ ಹತ್ತಿ ಪೆಟಲ್ ತುಳ್ದಿದ್ದೋ ತುಳಿದಿದ್ದು…ಮಾರ್ಗ ಮಧ್ಯದಲ್ಲಿ ಹೆಸರಿಲ್ಲದ ಕಾಣದ ಕೈ ಒಂದು ಬೀಸಾಕಿದ ಬಿಕನಾಸಿ ಮುಳ್ಳು ಅಂಟಿಲ್ಲದಿದ್ದರೂ ಅಂಟ್ಕೊಂಡು ಪಂಚರ್ ಆಗಿ ಪಂಚರಂಗಿ ಟೈಟಲ್ ಇರೋ ಪಂಚರ್ ಅಂಗಡಿಯವರೆಗೂ ನಟರಾಜ ಸರ್ವಿಸ್ ನಲ್ಲಿ ನಡೆದು ರಿಪೇರಿ ಮಾಡಿಸಿ ಮತ್ತದೇ ಸೈಕಲ್ ಹತ್ತಿ ಕಾಣದ ಕನಸುಗಳ ಮೂಟೆಗಳನ್ನ ಹೊತ್ತು ಮತ್ತದೇ ಹೆಸರಿಲ್ಲದ ನನಸಿನ ನಗರಿಯತ್ತ ಪಯಣ ಶುರು.ಮಾರ್ಗ ಮಧ್ಯದಲ್ಲಿ ಬೇಟಿಯಾಗೋ ಅಪರಿಚಿತ ಮುಖಗಳನ್ನ ಪರಿಚಯಕ್ಕೂ […]
ಚಿಂತನೆ
ಇಷ್ಟಕ್ಕೆ ಹೀಗೆ ವರಿ ಮಾಡೋದಾ? ಪಿ.ಎಂ.ಇಕ್ಭಾಲ್ ಕೈರಂಗಳ ಮಾನಸಿಕವಾದ ಸಮಸ್ಯೆಗಳೇ ಹಾಗೆ. ಬಲು ಸಂಕೀರ್ಣ. ಹೀಗೇ ಇರುತ್ತದೆ ಎಂಬ ನಿಯಮವಿರಲ್ಲ. ಒಂದೊಂದು ಸಮಸ್ಯೆಯೂ ವೈವಿಧ್ಯ. ಅವುಗಳ ತೀವ್ರತೆ ಎಷ್ಟು ಎಂದು ಅವುಗಳನ್ನು ಅನುಭವಿಸುವ ನತದೃಷ್ಟರಿಗೇನೇ ಗೊತ್ತು. ಆದರೆ ಒಂದು ನೆನಪಿರಲಿ. ‘ನನ್ನ ಸಮಸ್ಯೆಗೆ ಪರಿಹಾರವಿಲ್ಲ’ ಎಂದು ತಿಳಿದು ಹತಾಶರಾದರೆ ಸಮಸ್ಯೆಯ ವ್ಯಾಪ್ತಿ ಮತ್ತಷ್ಟು ದೊಡ್ಡದಾಗುತ್ತದೆ. ಮಾನಸಿಕವಾಗಿ ಅನುಭವಿಸುವ ನೋವು, ಕೊರಗು ಅಥವಾ ಒತ್ತಡ ಸಣ್ಣ ಸಮಸ್ಯೆಯೇನಲ್ಲ. ಇತರರಿಗಾಗಿ ಅವರ ವಿಷಯದ ಆಳಕ್ಕಿಳಿದು ವಸ್ತುನಿಷ್ಠವಾಗಿ ಚಿಂತಿಸಿ ಅರ್ಥೈಸಲು ಮುಂದೆ […]
ಮಹಿಳೆ
ನಾನು ಹೆಣ್ಣೆಂಬ ಹೆಮ್ಮೆ ನನಗಿದೆ! ಐಶ್ವರ್ಯ .ಎಲ್ ನಾನೊಂದು ಹೆಣ್ಣಾಗಿ ಈ ವಿಷಯದ ಬಗ್ಗೆ ಬರೆಯೋಕೆ ನನಗ್ಯಾವ ಮುಜುಗರವಾಗ್ಲಿ, ಅವಮಾನವಾಗ್ಲಿ ಇಲ್ಲ. ಬದಲಾಗಿ ನಾನೊಬ್ಬ ಹೆಣ್ಣೆಂಬ ಹೆಮ್ಮೆ ನನಗಿದೆ. ನೀವೆಲ್ಲ ಅನ್ಕೊಬಹುದು ಇದೇನು ಜಗಜ್ಜಾಹೀರು ಮಾಡೊ ವಿಷಯಾನ ಅಂತ ಆದ್ರೆ ಜಗತ್ತಿನ ಅದೆಷ್ಟೊ ಜೀವಗಳಿಗೆ ಗೊತ್ತಿಲ್ಲ ಹೆಣ್ತನದ ನಿಗೂಢತೆ, ನೋವುಗಳ ಬಗ್ಗೆ. ಕಂಬಳಿ ಹುಳುವದು ರೆಕ್ಕೆ ಕಟ್ಟುವ ಕಾಲದಂತೆ ಮೊಣಕಾಲಿನವರೆಗೂ ಲಂಗವೆತ್ತಿ ಕುಂಟೆಬಿಲ್ಲೆ ಆಡುತ್ತಿದ್ದವಳಿಗೆ ಹಿಂದೆಂದೂ ಆಗದಂತ ಕಿಬ್ಬೊಟ್ಟೆಯ ಬಾಧ, ಅಲ್ಲಿಂದಲೇ ಶುರುವಾಯ್ತೆನೋ ಹೆಣ್ಣೊಬ್ಬಳ ದೈಹಿಕ ಹೋರಾಟ, […]
ಮಕ್ಕಳ ಸಾಹಿತ್ಯ
ಆಯ್ಕೆ ಅವ್ಯಕ್ತ ನನ್ನಹೆಚ್ಚಿನ ಸಮಯವನ್ನು ನಾನು ಮಕ್ಕಳೊಂದಿಗೆ ಕಳೆಯುತ್ತಿರುವುದು.ಅವರೊಂದಿಗೆ ಆದ ಅನುಭವಗಳನ್ನು ಸಣ್ಣ ಸಣ್ಣ ಕಥೆಗಳ ಮೂಲಕ ಬರೆಯುತ್ತೇನೆ. ಅಂತ ಕಥೆಗಳಲ್ಲಿ ಇದೂ ಒಂದು) ಆಯ್ಕೆ ಒಳಗೆ ತಲೆಯಾಡಿಸುತ್ತಾ ನಡೆದು ಬಂದ್ಲು. ನಾನು ನೋಡಿ ಮುಗುಳ್ನಗೆ ಬೀರಿದೆ. ಜ್ವಾಲಾಮುಖಿ ಬಚ್ಚಿಟ್ಟಿದ್ದಂತೆ“ನಾನು ಅವರನ್ನೆಲ್ಲ ದ್ವೇಷಿಸುತ್ತೇನೆ”, “ಇನ್ಯಾವತ್ತೂ ಅವರೊಂದಿಗೆ ಮಾತಾಡೋದಿಲ್ಲ”. ನಾನು ತಾಳ್ಮೆಯಿಂದ “ಏನಾಯ್ತೆ ನನ್ ರಾಣಿ?”. ಅಂತ ಕೇಳ್ದೆ. ನನ್ನ ಪ್ರಶ್ನೆಗೆ ಕಾಯ್ತಿದ್ಲೆನೋಅನ್ನೋ ಹಾಗೆ“ನನಗೆ ನೋವಾಗಿದೆ, ನನ್ನ ಆಡ್ಕೋತಾರೆ,ನನ್ನ ನೋಡಿ ನಗ್ತಾರೆ,ನಾನು…. ನನ್ನ…. ನನಗೆ…”ನಿಲ್ಲೋಮಾತೇ ಇಲ್ಲ ! ನಾನುಸ್ವರ […]