Category: ಇತರೆ

ಇತರೆ

ಮರೆಯಲಾಗದ ಗಂಗಜ್ಜಿ

ಅವಳು ಮನೆಗೆ ಬಂದಾಗ ತಾನಾಗಿಯೇ ಕೆಲಸವನ್ನು ಹುಡುಕಿ ಮಾಡುವುದಲ್ಲದೆ. ನಾವು ಹೇಳಿದ ಕೆಲಸವನ್ನೆಲ್ಲ ಮುಗಿಸಿ ಕೊಟ್ಟ ದುಡ್ಡನ್ನು ಪಡೆದು ಊಟವನ್ನು ಮಾಡಿ ನಂತರ ಹೊರಡುತ್ತಿದ್ದಳು. ನಮ್ಮ ಅಕ್ಕ ಸೀತಮ್ಮ ಕೊಡುವ ಊಟವನ್ನುಂಡ ನಂತರ ತೃಪ್ತಿಯ ಮೆಚ್ಚುಗೆಯ ಮಾತು. ಇಷ್ಟೇ ಆಗಿದ್ದರೆ ಅವಳು ನಮ್ಮ ನೆನಪಿನಂಗಳದಲ್ಲಿ ಉಳಿಯುತ್ತಿರಲಿಲ್ಲವೇನೋ

ಪಾರ್ಟಿ

ಇಷ್ಟರಲ್ಲಿ ಎಲ್ಲರಿಗೂ ನಮ್ಮ ಕುಡಿತದ ಬಗೆಗಿರುವ ಕುತೂಹಲ ಪೂರ್ಣವಾಗಿ ನಶಿಸಿತ್ತು. ಮತ್ತೆ ಕಿಚನ್ ಗೆ ಹೋಗಿ ನಮ್ಮ ನಮ್ಮ ಗ್ಲಾಸ್ ಗಳನ್ನು ಬಾಯಿಗಿಟ್ಟು ನಿಧಾನವಾಗಿ ಒಂದು ಗುಟುಕು ಹೀರಿದೆವು . ಕಹಿಯಾದ ದ್ರಾವಣ ಬಾಯಿಗೆ ಎಳ್ಳಷ್ಟು ರುಚಿಸಲಿಲ್ಲ. ಅದರ ಬಣ್ಣ ಇಷ್ಟವಾದಷ್ಟು ರುಚಿ ಇಷ್ಟವಾಗಲೇ ಇಲ್ಲ. ಹೇಗೋ ಗ್ಲಾಸ್ ನಲ್ಲಿರುವಷ್ಟು ಹೀರಿ ಊಟ ಮಾಡಿ ಮುಗಿಸಿದಾಗ ತಡರಾತ್ರಿಯಾಗಿತ್ತು.

ನುಡಿ ಕಾರಣ

ಎಲ್ಲರೂ ಇಟ್ಟುಕೊಳ್ಳುತ್ತರೆಂದೆನೂ ಇಲ್ಲವಾದರೂ ವೈಯಕ್ತಿಕ ಬ್ಲಾಗ್ ಗಳನ್ನು ಹೊಂದುವ ಸ್ವಾತಂತ್ರ ಇರುವುದರಿಂದ,ಆದಕ್ಕಾದರೂ ತಮಗೆ ಇಷ್ಟವಾದ ಹೆಸರು ಕೊಟ್ಟಿರುತ್ತಾರೆ.

ಉಮರ್ ಖಯ್ಯಾಮ್‌

ಹಾಗೆ ನೋಡಿದರೆ ಖಯ್ಯಾಮ್ ರೂಮಿ, ಅತ್ತಾರ್, ಸನಾಯ್‌ಗಳಿಗಿಂತ ದೊಡ್ಡ ಅನುಭಾವಿಯೇನಲ್ಲ. ಅವನ ಕಾವ್ಯವನ್ನು ಈ ಕಾಲಕ್ಕೂ ಪ್ರಸ್ತುತಗೊಳಿಸುವುದು ಅವನನ್ನು ನಾವು ಅರ್ಥಮಾಡಿಕೊಳ್ಳಬಹುದು ಮತ್ತು ಆ ಅನುಭವವನ್ನು ಗ್ರಹಿಸಬಹುದು ಎನ್ನುವುದರಿಂದ.

ಹಂದೆಯ ಕೈಯಲ್ಲಿನ ವಜ್ರಾಯುಧ

ಎಲ್ಲರೂ ಒಮ್ಮನಸಿನಿಂದ ಲಂಚ ಕೊಡುವುದೇ ಇಲ್ಲ ಎಂದು ಸಂಕಲ್ಪ ಮಾಡಿ ನಿಂತರೆ ಒಂದಷ್ಟು ಕಾಲ ಸಮಸ್ಯೆಯಾಗಬಹುದು. ಆದರೆ ಭ್ರಷ್ಟಿಗಳು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲೇಬೆಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಯಾವುದೇ ಬದಲಾವಣೆ ಸಾಮಾನ್ಯ ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯ.

‘ಅರೇ ನೀವೇನ್ರೀ…! ಫೋನ್ ಮಾಡಿರೋರು ನೀವು. ಆವಿಷಯ ತಿಳಿಸುವುದನ್ನು ಬಿಟ್ಟು ಹೀಗೆ ಸತಾಯಿಸಿದರೆ ಹೇಗೆ? ನೀವ್ಯಾರೆಂದು ತಿಳಿಯುತ್ತಿದ್ದರೆ ನಾವೇಕೆ ಗುರುತಿಲ್ಲ ಅನ್ನುತ್ತಿದ್ದೆವು. ನಮ್ಮ ಮೊಬೈಲಲ್ಲಿ ನಿಮ್ಮ ಫೋಟೋ ಬೀಳುತ್ತದಾ?’ ಎಂದು ತಾವೂ ವ್ಯಂಗ್ಯವಾಗಿ ಉತ್ತರಿಸಿದರು.

ಮೋಹನಮೂರ್ತಿಯ ಮಹಾಪುರಾಣ

ಮಧ್ಯಾಹ್ನದ ಊಟದ ನಂತರ ಮತ್ತೊಂದು ವರಸೆ ನಿದ್ರೆ, ಮತ್ತೊಂದು ಜಲಕ್ರೀಡೆಯ ನಂತರ ಒಂದು ಚೀಲದೊಂದಿಗೆ ಮಾರುಕಟ್ಟೆಯ ಕಡೆಗೆ ಎರಡನೆಯ ಸರ್ಕೀಟ್‌ ಹೊರಡುತ್ತಿತ್ತು. ಬೆಳಗ್ಗೆ ನೋಡಿಕೊಂಡು ಬಂದಿದ್ದ ಹಣ್ಣು, ತರಕಾರಿ, ಹೂವುಗಳನ್ನು ಸ್ಯಾಂಪಲಿಗೆಂಬಂತೆ ಒಂದೆರಡು, ಒಂದು ಮುಷ್ಟಿ, ಒಂದು ಬೊಗಸೆ ಎಂಬಂತೆ ತನ್ನ ಚೀಲದಲ್ಲಿ ತುಂಬಿಕೊಳ್ಳುತ್ತಿದ್ದ

“ಶರಣ ಚಳವಳಿಯ ದೃಷ್ಟಿಯಲ್ಲಿ ದೇವರು-ದೇವಾಲಯ

ರೂಪು, ಗುರುತು, ರೀತಿ ಯಾವುದೂ ಇಲ್ಲದ ನಿರಾಕಾರ ಚಲುವನಿಗೆ ಅಂದರೆ ಇಷ್ಟಲಿಂಗಕ್ಕೆಯೇ ಎಂಬುದು ಸ್ಪಷ್ಟವಾಗುವುದಿಲ್ಲವೇ? ಅಲ್ಲಮನ ‘ಗುಹೇಶ್ವರ’ ವೂ ಅಷ್ಟೆ ಎದೆಯ ಗೂಡ-ಗುಹೆ-ಯಲ್ಲಿ ಅಂದರೆ ಉರಸ್ಥಲದಲ್ಲಿ ನೆಲೆಗಾಣಿಸಿಕೊಂಡ ಇಷ್ಟಲಿಂಗವೇ ಅಗುತ್ತದಲ್ಲವೇ?

ವೇಣು ಮಾವ ಕ್ಷಮಿಸು

ವೇಣು ಮಾವ ನಿರಾಶೆಯಿಂದ ಹೊರಟುಹೋದರು. ಹೋಗಿ ಎರಡು ದಿನ ಕಳೆದಿರಬಹುದು ಅಷ್ಟೇ, “ವೇಣು ನೆನ್ನೆ ಸತ್ತೋದ” ಎಂದು ಬಂದ ಸುದ್ದಿಗೆ ಅಪ್ಪ ಅಮ್ಮ ಸಾವಿಗೆ ಹೋಗಿ ಬಂದರು.

Back To Top