Category: ಇತರೆ

ಇತರೆ

ಪ್ರಸ್ತುತ

‘ಜಾಲ’ತಾಣ ಸ್ಮಿತಾ ರಾಘವೇಂದ್ರ ಹೆಸರೇ ಹೇಳುವಂತೆ ಇದೊಂದು “ಜಾಲ” ಮತ್ತೆ ನಾವೆಲ್ಲ ಅಲ್ಲಿ “ತಾಣ” ಪಡೆದವರು ಜಾಲದೊಳಗೆ ಸಿಲುಕಿಕೊಂಡ ಕೀಟದಂತಾಗಿದ್ದೇವೆ.. ಆದರೂ ನಾವಿಲ್ಲಿ ತಂಗಿದ್ದೇವೇ ತಂಗುತ್ತೇವೆ ಇಂದೂ ಮುಂದೂ ಸದಾ ತಂಗಲೇ ಬೇಕಾದ ಜಾಲದಲ್ಲಿ ಒಂದಿಷ್ಟು ಜಾಗೃತೆಯೂ ಮುಖ್ಯ ಅಂಶವಾಗುತ್ತದೆ. ಹೌದು.. ಸಾಮಾಜಿಕ ಜಾಲತಾಣವು ಸಂಬಂಧಗಳನ್ನು ಕಸಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಎಂಬುದು ಜನ ಜನಿತವಾದ ಮಾತು ಮತ್ತು ಸತ್ಯದ ಮಾತುಕೂಡಾ.. ಯಾಕೆ!? ಎಂದು ಸ್ವಲ್ಪವೇ ಸ್ವಲ್ಪ ವಿಚಾರಮಾಡುವದಕ್ಕೂ ನಮಗಿಂದು ಸಮಯವಿಲ್ಲ.. ಯಾಕೆಂದರೆ ನಮ್ಮ ಅಳಿದುಳಿದ ಸಮಯವನ್ನು ಜಾಲತಾಣ […]

ಲಂಕೇಶರನ್ನು ಏಕೆ ಓದಬೇಕು?

ರಾಜೇಶ್ವರಿ ಬೋಗಯ್ಯ ಜಾಣ ಜಾಣೆಯರೆ , ಎನ್ನುತ್ತಾ ದಿಕ್ಕು ,ದೆಸೆಯಿಲ್ಲದೆ  ಓದುವುದಕ್ಕೂ ,ಬರೆಯುವುದಕ್ಕೂ ಒಂದು ಗುರಿ ಇಲ್ಲದೆ ಸಿಕ್ಕಿದ್ದೇ ಓದುತ್ತಾ ಅಲೆಯುತ್ತಿದ್ದ ಅತ್ರಪ್ತ ಬ್ಯೂಟಿಫುಲ್ ಮನಸ್ಸುಗಳನ್ನು ಸೆಳೆದು ಕೂರಿಸಿದ್ದೇ ನಮ್ಮ ಜಾಣರಲ್ಲಿ ಜಾಣರು ಲಂಕೇಶರು. ಲಂಕೇಶರನ್ನು ನಾನ್ಯಾಕೆ ಓದಬೇಕು ? ಅಥವಾ ನಾನೇಕೆ ಲಂಕೇಶರನ್ನು ಓದುತ್ತೇನೆ ? ಎರಡೂ ಪ್ರಶ್ನೆಗಳು ಬೇರೆ ಬೇರೆ ಅನ್ನಿಸಿದರೂ ಉತ್ತರ ಮಾತ್ರ ಒಂದೇ. ಲಂಕೇಶರನ್ನಲ್ಲದೆ ಇನ್ಯಾರನ್ನು ಓದಬೇಕು ? ಇದು ನನ್ನ ಮರು ಪ್ರಶ್ನೆ. ಲಂಕೇಶರಿಗಿಂತ ಮೊದಲು ಯಾರ್ ಯಾರನ್ನೋ ಓದಿ […]

ಲಂಕೇಶರನ್ನು ಏಕೆ ಓದಬೇಕು?

ನಾನೇಕೆ ಲಂಕೇಶರನ್ನು ಓದುತ್ತೇನೆ ಬ ಬಸವರಾಜ ಕಹಳೆ ನೀಲವ್ವ ಓದಿದಷ್ಟು ವಿಸ್ತಾರ ಜನಸಾಮಾನ್ಯನ ಮೂಕ ಅಳಲಿನಲ್ಲಿ ಸಾಮ್ರಾಜ್ಯಗಳ ಬೀಳಿಸುವ ತಪಃಶಕ್ತಿ ಇದೆ ತಿಣುಕಾಡಿ ಬರೆದ ಕಗ್ಗಾವ್ಯಗಳ ಮಧ್ಯೆ ಮುದ್ದೆ ಮುರಿದಷ್ಟು ಸಲೀಸಾಗಿ ಓದಿಸಿಕೊಂಡು, ಕೆಲ ಕ್ಷಣಗಳಲ್ಲೇ ಮಿಂಚುವ ಮಿಂಚು ಹುಳುವಿನಂತಹ ಜೀವನದ ಹೊಳವುಗಳಿಗಾಗಿ ರಾವಣ ಪ್ರತಿಭೆಯನ್ನು ಓದಬೇಕು. ಈ ನೀಲಿ ಒಮ್ಮೊಮ್ಮೆ ಹುಳಿಮಾವಿನಮರದಂತೆಯೇ ಬಯಕೆ ಹುಟ್ಟಿಸುವ ಪ್ರೇಯಸಿ. ಆಲದಮರದಂತೆಯೇ ದಾರಿ ತೋರುವ ಗೆಳತಿ. ಥಟ್ಟನೆ ಇಷ್ಟವಾಗಿಬಿಡಬಲ್ಲ ಪಕ್ಕದ ಮನೆ ಹುಡುಗಿ. ಬದುಕುವ ಆಸೆಯಿಲ್ಲದವನಿಗೆ ಜೀವನೋತ್ಸಾಹವನ್ನು ತುಂಬುವಂತವಳು. ಆಗಸದ […]

ಲಂಕೇಶರನ್ನು ಏಕೆ ಓದಬೇಕು?

ನಾನೇಕೆ ಲಂಕೇಶರನ್ನು ಓದುತ್ತೇನೆ ಧನಂಜಯ್ ಎನ್ ಲಂಕೇಶರೇ ನಾನೇಕೆ ನಿಮ್ಮನ್ನು ಓದುತ್ತೇನೆ..? ಈ ರೀತಿಯ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡರೂ ಅಂತಹ ಆಶ್ಚರ್ಯವೇನೂ ಇಲ್ಲ. ತೇಜಸ್ವಿಯಿಂದ ಶುರುವಾದ ನನ್ನ ಮೊದಲ ಓದು ಕುವೆಂಪು , ಕಾರಂತರನ್ನು ಬಳಸಿ, ಭೈರಪ್ಪನವರ ತನಕವೂ ಬಂದು ನಿಂತಿತ್ತು. ಇವರೆಲ್ಲರ ಮಧ್ಯೆ ನಿಮ್ಮ ಹೆಸರು ಹಾಗೊಮ್ಮೆ ಹೀಗೊಮ್ಮೆ ಬಂದು ಹೋಗಿತ್ತಾದರೂ, ಹಲವು ಟೀಕೆ ಟಿಪ್ಪಣಿಗಳ ನಡುವೆ ‘ ನೋಡಿಕೊಂಡರಾಯಿತು ಎಂದು ಸುಮ್ಮನಿದ್ದುಬಿಡುತ್ತಿದ್ದೆ. ಭೈರಪ್ಪನವರ ” ಕವಲು ” ಕಾದಂಬರಿ ಓದಿದ ತರುವಾಯ, ಕನಿಷ್ಠ […]

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ನಾನೇಕೆ ಓದುತ್ತೇನೆ ಈ ಚರ್ಚೆಯ ಹಿನ್ನೆಲೆ ಮತ್ತು ವಿವರಗಳು “ಲಂಕೇಶರನ್ನು ನಾನೇಕೆ ಓದುತ್ತೇನೆ?” ಸ್ಪರ್ಧೆಯ ಫಲಿತಾಂಶ : ಸಹೃದಯರೇ, ‘ಮೈಸೂರು ಗೆಳೆಯರು’ ‘ಲಂಕೇಶ್ ನೆನಪು’ ಕಾರ್ಯಕ್ರಮದ ಭಾಗವಾಗಿ‘ನಾನೇಕೆ ಲಂಕೇಶರನ್ನು ಓದುತ್ತೇನೆ?’ ಬರಹ ಸ್ಪರ್ಧೆಯನ್ನು ಏರ್ಪಡಿಸಿದ್ದೆವು. ಈ ಸ್ಪರ್ಧೆಗೆ ಒಟ್ಟು ಆರು ಜನ ತಮ್ಮ ಬರಹಗಳನ್ನು ಕಳುಹಿಸಿದ್ದರು. ಈ ಬರಹಗಳನ್ನು ಓದಿ,ಅವುಗಳಲ್ಲಿ ಒಂದನ್ನು ಬಹುಮಾನಕ್ಕೆ ಆಯ್ಕೆ ಮಾಡಿ ಎಂದು (ಬರಹಗಾರರ ಹೆಸರನ್ನು ತೀರ್ಪುಗಾರರಿಗೆ ನೀಡದೆ, ನಾವು ಸ್ಪರ್ಧಿ-1, ಸ್ಪರ್ಧಿ -2 ಎಂದಷ್ಟೆ, ಬರಹದಲ್ಲಿ ಹಾಕಿ ಕಳುಹಿಸಿದ್ದೆವು) ನಾಡಿನ […]

ಮಹಿಳಾದಿನದ ವಿಶೇಷ

ಮತ್ತೊಂದು ಮಹಿಳಾ ದಿನ, ಮತ್ತದೇ ವಿಷಾದ ತ್ರಿವೇಣಿ ಜಿ.ಹೆಚ್ ಮತ್ತೊಂದು ಮಹಿಳಾ ದಿನ, ಮತ್ತದೇ ವಿಷಾದ ಮಹಿಳಾ ಸಂಘಗಳಲ್ಲಿ ಮಹಿಳೆಯರ ಹಕ್ಕು ಕುರಿತು ಭಾಷಣ, ಸದಸ್ಯರಿಗೆ ಹೂವು, ಸೀರೆ, ಒಡವೆ, ವಸ್ತ್ರ ವೇಷ ಭೂಷಣಗಳ ಸ್ಪರ್ಧೆ, “ನಿಮಗೆ ವರ್ಷದಲ್ಲಿ ಒಂದು ದಿನವಾದರೂ ಇದೆ. ನಮಗೆ ಇಲ್ಲವೇ ಇಲ್ಲ” ಎಂಬ ಪುರುಷ ಸಹೋದ್ಯೋಗಿಗಳ ಕೂರಂಬು, ಇಷ್ಟೇ ತಾನೆ ಇಷ್ಟೂ ವರ್ಷ ಮಹಿಳಾ ದಿನಾಚರಣೆ ನಡೆದ ಪರಿ? ಒಂದು ಮಹಿಳಾ ಸಂಘದಲ್ಲಿ ಕಾರ್ಯಕ್ರಮಕ್ಕೆ ವಿಶಿಷ್ಠ ಕೇಶಾಲಂಕಾರ ಮಾಡಿಕೊಂಡು ಬರಲು ಸದಸ್ಯರಿಗೆ […]

ಮಹಿಳಾದಿನದ ವಿಶೇಷ

ನಿಲ್ಲದ ಅಮಾವಾಸ್ಯೆ ಚಂದ್ರಪ್ರಭ ನಿಲ್ಲದ ಅಮಾವಾಸ್ಯೆ…. ಈ ಸೃಷ್ಟಿ ನಿರಂತರ.. ಇಲ್ಲಿ ಯಾವ ಕಾರಣಕ್ಕೂ ಯಾವುದೂ ನಿಲ್ಲಲಾರದು ಅಂತ ಹೇಳೋಕೆ ನಮ್ಮಲ್ಲಿ ಪ್ರಚಲಿತ ಮಾತೊಂದಿದೆ.. ‘ಅಕ್ಕ ಸತ್ತರ ಅಮಾಸಿ ನಿಂದರೂದಿಲ್ಲ’ ಅಂತ. ಹೌದು, ಯಾವುದೂ ನಿಲ್ಲೂದಿಲ್ಲ. ಆದರೆ ಅದನ್ನು ನಡೆಯಿಸಿಕೊಂಡು ಹೋಗುವ ವ್ಯವಸ್ಥೆಯೊಂದು ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇರ್ತದೆ ಅನ್ನೊ ಸತ್ಯ ಯಾರ ಗಮನಕ್ಕೂ ಬಾರದೆ ಹೋಗ್ತದೆ ಅನ್ನೋದೇ ವಿಸ್ಮಯ. ಗಾಳಿ, ನೀರು, ಮಳೆ, ಬಿಸಿಲು.. ನಲ್ಲಿ ನೀರು, ದಿನಪತ್ರಿಕೆ, ತರಕಾರಿ, ಅಕ್ಕಿ,ಬೇಳೆ..ಪೆಟ್ರೋಲು,ಸೀಮೆ ಎಣ್ಣೆ, ಗ್ಯಾಸ್ ಒಲೆ.. […]

ಮಹಿಳಾದಿನದ ವಿಶೇಷ

ನಮ್ಮೊಳಗಿನ ಬೆಳಕು ಬಿದಲೋಟಿರಂಗನಾಥ್ ಹೆಣ್ಣೆಂದರೇ ನಮ್ಮೊಳಗಿನ ಬೆಳಕು ಹೆಣ್ಣೆಂದರೆ ಭೂಮಿ ತೂಕ.ಆಕೆಯು ಸಕಲವನ್ನು ಹೊತ್ತು ಸಾಗುತ ಬದುಕನ್ನು ನೀಸಿದವಳು.ಮನೆಯೆಂದರೆ ಅವಳು ತೊಲೆ ಕಂಬ.ಅದಿಲ್ಲದೆ ಛಾವಣಿ ಎಲ್ಲಿ ನಿಂತಿತು.ಹೆಣ್ಣು ಕುಟುಂಬದ ಕಣ್ಣು.ಎಲ್ಲರನ್ನು ನೋಡುತ್ತಾ ಪೊರೆಯುತ್ತಾ,ಅವರ ಸೇವೆಗಳನ್ನು ಮಾಡುತ್ತಾ ಬದುಕನ್ನು ಏಗಿದವಳು ಎಂದರೆ ತಪ್ಪಾಗಲಾರದು.ಒಂದು ಹೆಣ್ಣು ಮಗಳಾಗಿ ,ಹೆಂಡತಿಯಾಗಿ ಅತ್ತೆಯಾಗಿ ಸೊಸೆಯಾಗಿ ಸಕಲ ಪಾತ್ರಗಳನ್ನು ನಿರ್ವಹಿಸುತ್ತಾ ಸೈ ಎನಿಸಿಕೊಂಡವಳು.ಅವಳಿಲ್ಲದೆ ಬದುಕೇ ಶೂನ್ಯ.ಅವಳನ್ನು ಸಮಾಜ ನೋಡುವ ದೃಷ್ಠಿ ಬದಲಾಗಬೇಕು.ಗಾಂಧೀಜಿಯ ಆಸೆಯಂತೆ ಒಂದು ಹೆಣ್ಣು ನಡುರಾತ್ರಿಯಲ್ಲಿ ನಿರ್ಭಿಡೆಯಾಗಿ ಓಡಾಡುವಂತಹ ಸಮಾಜ ನಿರ್ಮಾಣ ಆಗಬೇಕು. […]

ಮಹಿಳಾದಿನದ ವಿಶೇಷ

ಮಹಿಳಾ ಸಾಹಿತ್ಯ ಅಂದು ಇಂದು ಸುಜಾತಾ ರವೀಶ್ ಮಹಿಳಾ ಸಾಹಿತ್ಯ ಅಂದು ಇಂದು ಕವಿ ಮಹಾಲಿಂಗರು ಹೇಳುತ್ತಾರೆ “ಸುಲಿದ ಬಾಳೆಯ ಹಣ್ಣಿನಂದದ ಕಳೆದ ಸಿಗುರಿನ ಕಬ್ಬಿನಂದದ ಅಳಿದ ಉಷ್ಣದ ಹಾಲಿನಂದದ ಕನ್ನಡ ಸಾಹಿತ್ಯ”ಎಂದು. ನಿಜ ಮಧುರಕ್ಕೆ ಮಧುರವೂ ಸವಿಗೆ ಸವಿಯೂ ಆದ ನಮ್ಮ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಕಡೆಗಣಿಸುವಂತಹದ್ದಲ್ಲ. ಪ್ರಚಲಿತವಿದ್ದ ಸ್ತ್ರೀಯರ ಸ್ಥಾನಮಾನ ನೆಲೆ ಬೆಲೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ ಈ ಪಾಲು ಕಡಿಮೆಯೇ. ಮಹಿಳಾ ಸಾಹಿತ್ಯವನ್ನು ಕಾಲಘಟ್ಟದ ಮಾಪನದಲ್ಲಿಟ್ಟು ಅಳೆದು ನೋಡುವಾಗ ಈ ರೀತಿ ವಿಂಗಡಿಸಬಹುದು […]

Back To Top