ಲಂಕೇಶರನ್ನು ನಾನೇಕೆ ಓದುತ್ತೇನೆ
ಈ ಚರ್ಚೆಯ ಹಿನ್ನೆಲೆ ಮತ್ತು ವಿವರಗಳು
“ಲಂಕೇಶರನ್ನು ನಾನೇಕೆ ಓದುತ್ತೇನೆ?” ಸ್ಪರ್ಧೆಯ ಫಲಿತಾಂಶ :
ಸಹೃದಯರೇ,
‘ಮೈಸೂರು ಗೆಳೆಯರು’ ‘ಲಂಕೇಶ್ ನೆನಪು’ ಕಾರ್ಯಕ್ರಮದ ಭಾಗವಾಗಿ
‘ನಾನೇಕೆ ಲಂಕೇಶರನ್ನು ಓದುತ್ತೇನೆ?’ ಬರಹ ಸ್ಪರ್ಧೆಯನ್ನು ಏರ್ಪಡಿಸಿದ್ದೆವು. ಈ ಸ್ಪರ್ಧೆಗೆ ಒಟ್ಟು ಆರು ಜನ ತಮ್ಮ ಬರಹಗಳನ್ನು ಕಳುಹಿಸಿದ್ದರು. ಈ ಬರಹಗಳನ್ನು ಓದಿ,ಅವುಗಳಲ್ಲಿ ಒಂದನ್ನು ಬಹುಮಾನಕ್ಕೆ ಆಯ್ಕೆ ಮಾಡಿ ಎಂದು (ಬರಹಗಾರರ ಹೆಸರನ್ನು ತೀರ್ಪುಗಾರರಿಗೆ ನೀಡದೆ, ನಾವು ಸ್ಪರ್ಧಿ-1, ಸ್ಪರ್ಧಿ -2 ಎಂದಷ್ಟೆ, ಬರಹದಲ್ಲಿ ಹಾಕಿ ಕಳುಹಿಸಿದ್ದೆವು)
ನಾಡಿನ ಹಿರಿಯ ಕವಿಗಳಲ್ಲಿ ಒಬ್ಬರಾದ ಶ್ರೀಮತಿ ಎಂ. ಆರ್.ಕಮಲ ಮೇಡಂ ಅವರನ್ನು ನಾವು ಕೇಳಿಕೊಂಡಾಗ, ಅವರು ಖುಷಿಯಿಂದ ಈ ಕೆಲಸ ಮಾಡಿ ಕೊಡುವುದಾಗಿ, ಒಪ್ಪಿಕೊಂಡು ನಾವು ಕೇಳಿಕೊಂಡಿದ್ದ ಅವಧಿಯ ಒಳಗೆ, ಬರಹಗಳನ್ನು ಓದಿ, ಆ ಆರು ಬರಹಗಳಲ್ಲಿ ಎರಡನ್ನು ಬಹುಮಾನಕ್ಕೆ ಆಯ್ಕೆ ಮಾಡಿ ಕಳುಹಿಸಿದ್ದಾರೆ.
ತೀರ್ಪುಗಾರರಿಗೆ ನಾವು ಬಹುಮಾನಕ್ಕೆ ಒಂದು ಬರಹವನ್ನು ಆಯ್ಕೆ ಮಾತ್ರ ಮಾಡಿ ಎಂದಿದ್ದೆವು. ಆದರೆ ಮೇಡಂ ಅವರು ಈ ಬರಹಗಳನ್ನು ಓದಿ ಮತ್ತೊಂದು ಬರಹದ ಮೌಲ್ಯದ ಬಗೆಗೂ ಒಳ್ಳೆಯ ಮಾತುಗಳನ್ನು ಹೇಳಿ, ಸಾಧ್ಯವಾದರೆ ಅದಕ್ಕೂ ಬಹುಮಾನ ನೀಡಿ ಎಂದಿದ್ದಾರೆ. ತೀರ್ಪುಗಾರರ ಮಾತಿಗೆ ಆಯೋಜಕರಾದ
‘ ಮೈಸೂರು ಗೆಳೆಯರು’ ಸಹಮತ ಸೂಚಿಸಿ, ತೀರ್ಪುಗಾರರ ಅಪೇಕ್ಷೆಯಂತೆ ಮತ್ತೊಂದು ಬಹುಮಾನವನ್ನು ನೀಡೋಣ ಎಂದು ತೀರ್ಮಾನಿಸಿ.ಮತ್ತೊಂದು ತೀರ್ಪುಗಾರರ ಮೆಚ್ಚುಗೆಯ ಬಹುಮಾನವನ್ನು ನೀಡುತ್ತಿದ್ದೇವೆ.
ಈ ಸ್ವರ್ಧೆಗೆ ತಮ್ಮ ಬರಹಗಳನ್ನು ಕಳುಹಿದ್ದವರು ಒಟ್ಟು ಆರು ಜನ.
ಸ್ಪರ್ಧಿ -5 ಸುಪ್ರಿಯಾ, ಬೆಂಗಳೂರು
ಸ್ಪರ್ಧಿ -4 ನವೀನ್ ಮಂಡಗದ್ದೆ.
ಸ್ಪರ್ಧಿ -3 ಶ್ರೀಮತಿ ರಾಜೇಶ್ವರಿ ಭೋಗಯ್ಯ
ಸ್ಪರ್ಧಿ -6 ನಾಗಸ್ವಾಮಿ ಮುತ್ತಿಗೆ, ಮೈಸೂರು.
ಸ್ಪರ್ಧಿ -2 ಬಸವರಾಜು ಕಹಳೆ
ಸ್ಪರ್ಧಿ -1 ಧನಂಜಯ್ ಎನ್
ಈ ಲೇಖನಗಳನ್ನು ಓದಿ, ಶ್ರೀ ಮತಿ ಎಂ.ಆರ್ ಕಮಲ ಮೇಡಂ
ತಮ್ಮ ತೀರ್ಪನ್ನು ಹೀಗೆ ನೀಡಿ, ಎರಡು ಮಾತುಗಳನ್ನು ಬರೆದು ಕಳುಹಿಸಿದ್ದಾರೆ.
ಇದು ಅವರ ತೀರ್ಪು ಮತ್ತು ಮಾತುಗಳು.
Spardhi-1 (first prize)
Spardhi-3 (2nd prize)
ಒಂದೇ ಬಹುಮಾನ ಎಂದು ತಿಳಿದಿದೆ…ಆದರೂ ಕಳಿಸಿದ್ದೇನೆ… ಆಯ್ಕೆ ನಿಮಗೆ ಬಿಟ್ಟಿದ್ದು… ಒಬ್ಬ ಓದುಗ ಅನೇಕ ಲೇಖಕರನ್ನು ಓದುತ್ತ, ವಿಕಾಸಗೊಳ್ಳುತ್ತ ಪಕ್ವತೆಯನ್ನು ಪಡೆಯುವುದು ಓದಿನ ಬಹಳ ಮುಖ್ಯ ಕ್ರಮವಾದ್ದರಿಂದ ಮೊದಲು ಎಂದು ಆರಿಸಿದ್ದೇನೆ.
ಎರಡನೇ ಬಹುಮಾನಕ್ಕೆ ಆಯ್ಕೆಯಾದವರು ಲಂಕೇಶ್ ಅವರನ್ನು ಗಂಭೀರವಾಗಿ ಓದಿದ್ದಾರೆ ಅನ್ನಿಸಿತು..
———-
ಈ ಸ್ವರ್ಧೆಯಲ್ಲಿ ಬಹುಮಾನ ಪಡೆದ
ಧನಂಜಯ್ ಎನ್ ಮತ್ತು ಶ್ರೀ ಮತಿ ರಾಜೇಶ್ವರಿ ಭೋಗಯ್ಯ ಮೇಡಂ ಅವರಿಗೆ ಮೈಸೂರು ಗೆಳೆಯರ ಅಭಿನಂದನೆಗಳು ಮತ್ತು ನಾಳೆ ಮೈಸೂರಿನ ಕಲಾಮಂದಿರ ಆವರಣದಲ್ಲಿ ನಡೆಯಲಿರುವ ” ಲಂಕೇಶ್ ನೆನಪು” ಕಾರ್ಯಕ್ರಮದಲ್ಲಿ ವಿಜೇತರಿಗೆ ಪುಸ್ತಕ ಬಹುಮಾನವನ್ನು ನೀಡಲಾಗುವುದು.
ವಿಜೇತರನ್ನು ಕಾರ್ಯಕ್ರಮಕ್ಕೆ ಮೈಸೂರು ಗೆಳೆಯರು ಪ್ರೀತಿಯಿಂದ ಮತ್ತೊಮ್ಮೆ ಈ ಮೂಲಕ ಆಹ್ವಾನ ನೀಡುತ್ತಿದ್ದೇವೆ.
* ಮೊದಲ ಬಹುಮಾನ : 1500 ರೂ ಮೌಲ್ಯದ ಪುಸ್ತಕಗಳು.
* ತೀರ್ಪುಗಾರರ ಎರಡನೇ ಬಹುಮಾನ : 500 ರೂ ಮೌಲ್ಯದ ಪುಸ್ತಕಗಳು.
* ಈ ಸ್ವರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ “ಮೈಸೂರು ಗೆಳೆಯರು” ಕಡೆಯಿಂದ ಅನಂತ ಧನ್ಯವಾದಗಳು.
* ಬರಹಗಳನ್ನು ಓದಿ, ಒಂದನ್ನು( ಎರಡನ್ನು) ಆಯ್ಕೆ ಮಾಡಿ ಕೊಟ್ಟ ಎಂ ಆರ್. ಕಮಲ ಮೇಡಂ ಅವರಿಗೆ ” ಮೈಸೂರು ಗೆಳೆಯರು” ಕಡೆಯಿಂದ ಪ್ರೀತಿಯ ಅನಂತ ಧನ್ಯವಾದಗಳು.
——ಮೈಸೂರು ಗೆಳೆಯರು
ಈ ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತರಾದವರ ಬರಹಗಳನ್ನು ಸಂಗಾತಿ ನಾಳೆಯಿಂದ ಸರಣಿ ರೂಪದಲ್ಲಿ ಪ್ರಕಟಿಸಲಿದೆ.ನಮ್ಮ ಓದುಗರು ಈ ಬರಹಗಳನ್ನುಓದುವುದು ಮಾತ್ರವಲ್ಲದೆ ಇತರೆಯವರಿಗು ಹಂಚಿ, ಲಂಕೇಶರ ವಿಚಾರದಾರೆಗಳನ್ನುಪಸರಿಸಬೇಕೆಂದು ಕೋರುತ್ತೇನೆ-ಸಂಪಾದಕ