ನಮ್ಮೊಳಗಿನ ಬೆಳಕು
ಬಿದಲೋಟಿರಂಗನಾಥ್
ಹೆಣ್ಣೆಂದರೇ ನಮ್ಮೊಳಗಿನ ಬೆಳಕು
ಹೆಣ್ಣೆಂದರೆ ಭೂಮಿ ತೂಕ.ಆಕೆಯು ಸಕಲವನ್ನು ಹೊತ್ತು ಸಾಗುತ ಬದುಕನ್ನು ನೀಸಿದವಳು.ಮನೆಯೆಂದರೆ ಅವಳು ತೊಲೆ ಕಂಬ.ಅದಿಲ್ಲದೆ ಛಾವಣಿ ಎಲ್ಲಿ ನಿಂತಿತು.ಹೆಣ್ಣು ಕುಟುಂಬದ ಕಣ್ಣು.ಎಲ್ಲರನ್ನು ನೋಡುತ್ತಾ ಪೊರೆಯುತ್ತಾ,ಅವರ ಸೇವೆಗಳನ್ನು ಮಾಡುತ್ತಾ ಬದುಕನ್ನು ಏಗಿದವಳು ಎಂದರೆ ತಪ್ಪಾಗಲಾರದು.ಒಂದು ಹೆಣ್ಣು ಮಗಳಾಗಿ ,ಹೆಂಡತಿಯಾಗಿ ಅತ್ತೆಯಾಗಿ ಸೊಸೆಯಾಗಿ ಸಕಲ ಪಾತ್ರಗಳನ್ನು ನಿರ್ವಹಿಸುತ್ತಾ ಸೈ ಎನಿಸಿಕೊಂಡವಳು.ಅವಳಿಲ್ಲದೆ ಬದುಕೇ ಶೂನ್ಯ.ಅವಳನ್ನು ಸಮಾಜ ನೋಡುವ ದೃಷ್ಠಿ ಬದಲಾಗಬೇಕು.ಗಾಂಧೀಜಿಯ ಆಸೆಯಂತೆ ಒಂದು ಹೆಣ್ಣು ನಡುರಾತ್ರಿಯಲ್ಲಿ ನಿರ್ಭಿಡೆಯಾಗಿ ಓಡಾಡುವಂತಹ ಸಮಾಜ ನಿರ್ಮಾಣ ಆಗಬೇಕು. ಆಗ ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕಾಂತಾಗುತ್ತದೆ.ಹೆಣ್ಣು ಕೇವಲ ಕಾಮದ ವಸ್ತುವಲ್ಲ.ಅವಳನ್ನು ಕಂಡರೆ ಪೂಜ್ಯಭಾವನೆ ಬರುವಂತಾಗಬೇಕು.
ಕಾಲ ಬದಲಾಗಿದೆ ಇವತ್ತು ಹೆಣ್ಣು ಮಕ್ಕಳು ಎಲ್ಲಾ
ರಂಗದಲ್ಲೂ ಇದ್ದಾರೆ.ಪೈಲೆಟ್ ,ಪೊಲೀಸ್,ಡ್ರೈವರ್ ಕಂಡಕ್ಟರ್ ,ನ್ಯಾಯವಾದಿ,ನ್ಯಾಯಾಧೀಶರು ಎಲ್ಲಾ ಹುದ್ದೆಗಳನ್ನು ಅಲಂಕರಿಸಿದ್ದಾರೆ.ಗಂಡಿಗೆ ಸಮಾನವಾಗಿ ಸ್ಪರ್ಧೆಗಿಳಿದಿದ್ದಾಳೆ.ಎಂಬುದು ಸಂತೋಷದಾಯಕ ವಿಷಯ.
ಒಂದು ವಿಷಯ ಪ್ರಸ್ಥಾಪಿಸಲು ಇಷ್ಟಪಡುತ್ತೇನೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತನ್ನ ಹೆಂಡತಿಯರನ್ನು ನಿಲ್ಲಿಸುವ ಮೂಲಕ ಹುದ್ದೆಯ ಸಕಲ ಜವಬ್ಧಾರಿಯನ್ನು ಪುರುಷಮಾಡುತ್ತಿರುವುದು ನೋವಿನ ಸಂಗತಿ.ಅದರಲ್ಲು ಗ್ರಹಚಾರ ತಪ್ಪಿ ಪಂಚಾಯಿತಿ ಅಧ್ಯಕ್ಷೆಯಾದರೇ ಮುಗಿದೇ ಹೋಯಿತು.ಆ ಚೇರಿನ ಮೇಲೆ ಗಂಡನ ದರ್ಬಾರು.ಯಾಕೆ ಅವಳ ಕೆಲಸ ಅವಳಿಗೆ ಮಾಡಲು ಬಿಡಲ್ಲ ಎಂಬುದು ವರ್ತಮಾನದ ದುಸ್ತಿತಿ ಎಂದು ನಾನದರೂ ಭಾವಿಸುತ್ತೇನೆ. ತನ್ನ ಅಧಿಕಾರದ ಹಕ್ಕನ್ನು ಸುಖವನ್ನು ಅವಳೂ ಅನುಭವಿಸಲಿ ಬಿಡಿ.ಅಲ್ಲ ಒಂದು ಚೆಕ್ ಗೆ ಸಹಿ ಹಾಕಲು ತನ್ನ ಗಂಡನ ಅನುಮತಿಬೇಕು ಎಂದ ಮೇಲೆ.ಅಧಿಕಾರ ಯಾತಕ್ಕೆ ಅವಳಿಗೆ ಎಂಬ ಪ್ರಶೆ ಮೂಡುತ್ತದೆ.ಈ ತರಹ ತನ್ನ ಕೈ ಗೊಂಬೆಯಾಗಿ ಮಾಡಿಕೊಳ್ಳುವ ಮನಸ್ತಿತಿಗಳು ಬದಲಾಗಬೇಕು.ಸಮಾನತೆಯಿಂದ ಕಾಣುವ ಮುಖೇನ ನವ ಸಮಾಜ ನಿರ್ಮಾಣದತ್ತ ಸಮಾಜ ಸಾಗಿದರೆ ಮಾತ್ರ ಅಭಿವೃದ್ಧಿ ಸಾಧ್ಯ.
ಇನ್ನು ಮಕ್ಕಳು ವಿಷಯಕ್ಕೆ ಬಂದರೆ ಗಂಡಾದರೇನು ಹೆಣ್ಣಾದರೇನು?ಎರಡೂ ಒಂದೇ ಅಲ್ಲವೆ.?ಹೆಣ್ಣಿಲ್ಲದೆ ಗಂಡು ಮಗುವಿನ ಜನನ ಸಾಧ್ಯವೆ ? ನೋಡುವ ದೃಷ್ಠಿಕೋನ ಬದಲಾಗಬೇಕು.ಆಗಂತ ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳಬೇಕು ಕೊಟ್ಟ ಅಧಿಕಾರವನ್ನು ಸ್ವತಂತ್ರವನ್ನು ಸುಮ್ನೆ ದೂರುವ ಮೂಲಕ ಹಾಳು ಮಾಡಿಕೊಳ್ಳಬಾರದುಮಕ್ಕಳಿಗೆಶಿಕ್ಷಣ ಕೊಡಿಸುವಾಗಲು ಅಷ್ಟೆ ,ಈಗಲೂ ಹಳ್ಳಿಗಳಲ್ಲಿ “ಗಂಡು ಮಕ್ಕಳಲ್ಲವೆ ಓದಿಸು ಎಷ್ಟಾದರೂ ಓದಲಿ”ಎನ್ನುತ್ತ .ಹೆಣ್ಣೋ ಬಿಡಿಸಿ ಮದುವೆ ಮಾಡುವ ದುರಂತಗಳು ನಮ್ಕಾಮ ಕಣ್ಣುಮುಂದೆ ಇವೆ. ಮಡ್ಲಲ್ಲಿ ಬೆಂಕಿಕಟ್ಕಂಡು ಎಷ್ಟಂತ ತಿರುಗುತ್ತಿ” .ಎಂಬ ಉಡಾಫೆಯ ಮನೋಭಾವ ಬದಲಾಗುವ ಮೂಲಕ ಅವಳಿಗೆ ಗೌರವ ಕೊಡಬೇಕು ಆಗ ಭೂಮಿ ಮೇಲೆ ಹುಟ್ಟಿದ್ದಕ್ಕೂ ಸಾರ್ಥಕ್ಯ.
ಹೆಣ್ಣಿಗೂ ಮನಸ್ಸಿದೆ ಅಂತಃಕರಣವಿದೆ ಅವಳೂ ಮನುಷ್ಯಳು ಎಂಬ ಮನೋಭಾವ ಬಂದಾಗ ಮಾತ್ರ ಬದುಕು ಹಸನಾಗುವುದು.
ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಹಪಾ ಹಪಿ ಬದಲಾಗಬೇಕು.ಹೆಣ್ಣಿಲ್ಲದ ಮನೆ ,ಬದುಕಿನಲ್ಲಿ ಬೆಳಕು ಕಂಡಿದ್ದು ಇಲ್ಲವೇ ಇಲ್ಲ.ಅವಳನ್ನು ಗೌರವಿಸುವ ಮೂಲಕ ಮಹಿಳಾ ದಿನಾಚಾರಣೆಗೆ ಇಂಬು ನಿಡೋಣ.
************************************