Category: ಇತರೆ

ಇತರೆ

ಅಮ್ಮನ ಸೆರಗ ಬಿಡಿಸಿದ ಬೆರಳುಗಳು

ಅಮ್ಮನ ಸೆರಗ ಬಿಡಿಸಿದ ಬೆರಳುಗಳು ಶಿಶುವಿಹಾರ ಮತ್ತು ಅಂಗನವಾಡಿಗಳ ಅಮ್ಮನಂತಹ ಶಿಕ್ಷಕಿಯರಿಗೊಂದು ಸೆಲ್ಯೂಟ್ ಪ್ರಜ್ಞಾ ಮತ್ತಿಹಳ್ಳಿ ಎಳೆಬಿಸಿಲು ಹಾಕಿದ ರಂಗೋಲಿಯ ಚಿತ್ತಾರಗಳು ಅಂಗಳ ತುಂಬಿದ ಹೂಬಳ್ಳಿಗಳೊಂದಿಗೆ ಪೈಪೋಟಿಗಿಳಿದಿದ್ದಾವೆ. ಎಸಳು ಮೊಗ್ಗಿನಂತಹ ಪುಟಾಣಿಗಳ ದಂಡೊಂದು ಗೇಟಿನ ಬಳಿ ಬಂದು ರಾಗವಾಗಿ ಕರೆಯುತ್ತಿದೆ. “ಪುಟ್ಟೂ ಶಾಲೀಗ್ ಬಾ” ನಿದ್ದೆ ಬಿಟ್ಟೇಳದ ಕಣ್ಣಿನ ಮಗುವೊಂದನ್ನು ಅಳುವಿನ ರಾಗಾಲಾಪದ ಹಿನ್ನೆಲೆ ಸಂಗೀತದೊಂದಿಗೆ ಎತ್ತಿಕೊಂಡು ತಂದರು. “ಯಾಕೆ ಅಳೂದ್ಯಾಕೆ? ಜಾಣಲ್ಲ ನೀನು” ಎನ್ನುತ್ತ ಅಮ್ಮನ ಸೆರಗ ಬಿಗಿಯಾಗಿ ಹಿಡಿದುಕೊಂಡ ಬೆರಳುಗಳ ಮೆತ್ತಗೆ ಬಿಡಿಸುತ್ತ ಪುಸಲಾಯಿಸುವ […]

ಭರವಸೆಯ ಹೊರತು ಬೇರೇನೂ ಉಳಿದಿಲ್ಲ’

ಲಹರಿ ಭರವಸೆಯ ಹೊರತು ಬೇರೇನೂ ಉಳಿದಿಲ್ಲ’ ವಸುಂಧರಾ ಕದಲೂರು                             ಕವಚಿ ಹಾಕಿದ್ದ ಖಾಲಿ ಮಂಕರಿಯನ್ನು ಬೋರಲಾಕಿದಂತೆ, ಎಲ್ಲಾ ಖಾಲಿಖಾಲಿಯಾದ ಭಾವ. ಹಾಗೆಂದು ನಿರಾಳ ಅಂತೇನಲ್ಲ. ಮನಸ್ಸು ಭಾರವಾಗಿದೆ. ಏನೆಲ್ಲಾ ಇದೆ. ಆದರೂ ಏನೇನೂ ಇಲ್ಲ ಎನ್ನುವ ಒಂಟಿತನ ಹಿಂಡಿಹಿಪ್ಪೆ ಮಾಡುತ್ತಿದೆ. ಬಿಸಿಲಿಗೆ ಒಣ ಹಾಕಿದ ಬಟ್ಟೆ ಒಣಗೀ ಒಣಗೀ ಅಲ್ಲೇ ಇದ್ದು ಕೊನೆಗೆ ಬಣ್ಣಗೆಟ್ಟಂತೆ…     […]

ಗುರುವಿನ ಋಣ

ಗುರುವಿನ ಋಣ ಜಯಶ್ರೀ ಜೆ.ಅಬ್ಬಿಗೇರಿ         ಆಗ ನಾನಿನ್ನೂ ಪುಟ್ಟ ಫ್ರಾಕು  ಧರಿಸಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಕಾಲ. ಸದಾ ನನ್ನ ಕೈಯಲ್ಲಿ ಬಿಳಿ ಚೌಕಟ್ಟಿನ ಕರಿ ಪಾಟಿ ಹಿಡಿದು, ಬೆರಳಲ್ಲಿ ಪೆನ್ಸಿಲ್ ಸಿಕ್ಕಿಸಿಕೊಂಡು ದೊಡ್ಡ ಪಂಡಿತರಂತೆ ಗಂಭಿರವಾಗಿ ಬರೆಯುವದನ್ನು ಕಂಡು ನನ್ನಪ್ಪ, ನಮ್ಮವ್ವ ಎಷ್ಟು ಶ್ಯಾನೆ ಅದಾಳ ನೋಡು ಎನ್ನುತ್ತ ಪ್ರೀತಿಯಿಂದ ಹಣೆಗೆ ಹೂ ಮುತ್ತನ್ನಿಕ್ಕಿ ಅಕ್ಷರವನ್ನು ತೀಡಿಸುತ್ತಿದ್ದರು.ಆಗಿನಿಂದ ನನ್ನ  ಅಕ್ಷರದ ಹುಚ್ಚು ಮತ್ತಷ್ಟು ಹೆಚ್ಚಿತು. ಅಣ್ಣನ ಜೊತೆ ನಾನೂ ಶಾಲೆಗೆ ಹೋಗಲೇಬೇಕು ಎಂಬ […]

ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ

ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ ವಿಭಾ ಪುರೋಹಿತ್ ಓ ನಮ್ಮ ಶಿಕ್ಷಕನೀ ನಮ್ಮ ರಕ್ಷಕ ಮರೆಯಲೆಂತು ನಿನ್ನ ಸೇವೆಕರೆವ ಜ್ಞಾನ ಹಾಲ ಗೋವೆನಿನಗೆ ನಮ್ಮ ನಮನವುನಿನ್ನ ಅಡಿಗೆ ಸುಮನವು————ಧಾರವಾಡದ ಜಿ. ಎಸ್. ಕುಲಕರ್ಣಿ ಧಾರವಾಡದ ಜಿ.ಎಸ್ . ಕುಲಕರ್ಣಿ ಅವರ ಸಾಲುಗಳು ಇಲ್ಲಿ ನೆನೆಯಬಹುದು ಮನಃಪಟಲಕ್ಕೆ ಬಂದು ಅಚ್ಚೊತ್ತಿದ ಕೆಲವು ಘಟನೆಗಳನ್ನು ಬರೆಯದೇ ಇರಲಾಗುವುದಿಲ್ಲ.ಎಲ್ಲಿಂದಲೋ ಬಂದ ದಿವ್ಯ ಚೇತನ ಬೆನ್ನುತಟ್ಟಿ ಬರೆಯಲಾರಂಭಿಸಿತು.ಮೂವತ್ತು ವ ರ್ಷಗಳ ಹಿಂದೆ ಓಡಾಡಿದ ಜಾಗ,ಆಟವಾಡಿದ ಸ್ಥಳ,ಮಣ್ಣಿ ಗೆ,ಕಲ್ಲಿಗೆ ಅಕ್ಕರೆಯಿಂದ ಮುತ್ತಿಟ್ಟು […]

ಕಸಾಪಗೆ ಮಹಿಳಾ ಅಧ್ಯಕ್ಷರು

ಚರ್ಚೆ ಕಸಾಪಗೆ ಮಹಿಳಾ ಅಧ್ಯಕ್ಷರು ಒಂದು ಚರ್ಚೆ ಮೆಲ್ಕಂಡವಿಷಯವಾಗಿ ಸಂಗಾತಿ ಪತ್ರಿಕೆ ಕನ್ನಡದ ಬರಹಗಾರರಿಗೆ ಕೆಲವು ಪ್ರಶ್ನೆಗಳನ್ನು ಹಾಕಿತ್ತು ಅದಕ್ಕೆ ಬಂದ ಉತ್ತರಗಳನ್ನು ಇಲ್ಲಿ ಒಂದೊಂದಾಗಿಪ್ರಕಟಿಸಲಾಗುತ್ತಿದೆ. ಸಂಗಾತಿ ಕೇಳಿದ ಪ್ರಶ್ನೆಗಳು ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ? ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ? ಪ್ರಶ್ನೆ ಮೂರು,ಮಹಿಳೆಯೊಬ್ಬರು ಅಧ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇaaಗೆ ಎದುರಿಸಬಹುದು? ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅಧ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ […]

ಫ್ಲೈಟ್ ತಪ್ಪಿಸಿದ ಮೆಹೆಂದಿ

ಪ್ರಬಂಧ    ಫ್ಲೈಟ್ ತಪ್ಪಿಸಿದ  ಮೆಹೆಂದಿ ಸುಮಾ ವೀಣಾ                                         ಫ್ಲೈಟ್  ರಾತ್ರಿ ಹತ್ತು ಗಂಟೆಗೆ ಅಂದುಕೊಂಡು ಬೆಳಗ್ಗೆ 6 ಗಂಟೆಗೆಎದ್ದು  ವಿದೇಶೀ ಲಲನೆಯರಿಗಿಂತ ನಾವೇನು ಕಡಿಮೆ ನಾವೂ ಹೇರ್ ಕಲರ್ ಮಾಡಿಕೊಳ್ಳೋಣ  ಎನ್ನುತ್ತಲೇ ನಾನು ನನ್ನ ತಮ್ಮನ ಹೆಂಡತಿ ಶಾಲಿನಿ ಇಬ್ಬರೂ ಮೆಹೆಂದಿ ಕಲೆಸಿ ತಲೆಗೆ ಮೆತ್ತಿಕೊಂಡೆವು.  ಫಿಲ್ಟರ್ ಕಾಫಿ ಹೀರುತ್ತಾ   ಹರಟುತ್ತಿರಬೇಕಾದರೆ ನಮ್ಮ ಮೊಬೈಲಿಗೆ ಮೆಸೇಜ್  ಮಹಾಶಯ ಬಂದು “ನನ್ನನ್ನು ಒಮ್ಮೆ ನೋಡುವಿರಾ! ನೋಡುವಿರಾ!” ಎಂದು ವಿನಂತಿಸಿಕೊಳ್ಳಲಾರಂಭಿಸಿದ. ಹಾಗೆ  ತಲೆಯನ್ನೊಮ್ಮೆ ನೇವರಿಸಿಕೊಂಡರೆ ಮೆಹೆಂದಿ ಕೈಗೆಲ್ಲಾ […]

ಕಸಾಪಗೆ ಮಹಿಳಾ ಅಧ್ಯಕ್ಷರು

ಚರ್ಚೆ ಕಸಾಪಗೆ ಮಹಿಳಾ ಅಧ್ಯಕ್ಷರು ಒಂದು ಚರ್ಚೆ ಮೆಲ್ಕಂಡವಿಷಯವಾಗಿ ಸಂಗಾತಿ ಪತ್ರಿಕೆ ಕನ್ನಡದ ಬರಹಗಾರರಿಗೆ ಕೆಲವು ಪ್ರಶ್ನೆಗಳನ್ನು ಹಾಕಿತ್ತು ಅದಕ್ಕೆ ಬಂದ ಉತ್ತರಗಳನ್ನು ಇಲ್ಲಿ ಒಂದೊಂದಾಗಿಪ್ರಕಟಿಸಲಾಗುತ್ತಿದೆ. ಸಂಗಾತಿ ಕೇಳಿದ ಪ್ರಶ್ನೆಗಳು ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ? ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ? ಪ್ರಶ್ನೆ ಮೂರು,ಮಹಿಳೆಯೊಬ್ಬರು ಅಧ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇಗೆ ಎದುರಿಸಬಹುದು? ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅಧ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ […]

ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು

ಲೇಖನ ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು ನೂತನ ದೋಶೆಟ್ಟಿ ಅವಳು ಸ್ವೇಹಿತೆಯರ ಸಹಾಯದಿಂದ ಡಿಗ್ರಿ ಮುಗಿಸಿದಳು. ತರಗತಿಯ ಸಮಯದಲ್ಲಿ ಲಕ್ಷ್ಯ ಕೊಟ್ಟು ಕೇಳುತ್ತಿದ್ದರೂ ಬರೆದುಕೊಳ್ಳಲು ಅವರ ನೆರವು ಬೇಕಾಗುತ್ತಿತ್ತು. ಪರೀಕ್ಷೆಯ ಸಮಯದಲ್ಲಿ ಅವರು ಅವಳಿಗೆ ಇಡಿಯ ಪುಸ್ತಕವನ್ನು, ನೋಟ್ಸುಗಳನ್ನು ಓದಿ ಹೇಳುತ್ತಿದ್ದರು. ತಮ್ಮ ಪರೀಕ್ಷೆಯ ಸಿದ್ಧತೆಯ ಜೊತೆಗೆ ಅವಳ ಪರೀಕ್ಷೆಯ ಸಿದ್ಧತೆಯನ್ನು ಮಾಡುವ/ಮಾಡಿಸುವ ಜವಾಬ್ದಾರಿ ಅವಳ ಸ್ನೇಹಿತೆಯರದು. ಅದನ್ನು ಅವರೆಲ್ಲ ಮನಃಪೂರ್ವಕವಾಗಿ ಮಾಡುತ್ತಿದ್ದರು. ಪರಿಕ್ಷೆ ಮುಗಿದ ಮೇಲೆ ಸ್ನೇಹಿತೆಯರೆಲ್ಲ ಸೇರಿ ಪಿಕ್ಚರ್ ಪ್ರೋಗ್ರ‍್ರಾಂ ಹಾಕುತ್ತಿದ್ದರು. ಅದಕ್ಕೆ ಅವಳು ನಾನು […]

ನಾ ಮೆಚ್ಚಿದ ನಾಟಕ

ಲೇಖನ ನಾ ಮೆಚ್ಚಿದ ನಾಟಕ ಮಾಲಾ ಮ ಅಕ್ಕಿಶೆಟ್ಟಿ.   ಸುಮಾರು ಒಂದುವರೆ ವರ್ಷದ ಹಿಂದೆ  ಬೆಳಗಾವಿಯಲ್ಲಿ ಕುವೆಂಪು ವಿರಚಿತ “ಶ್ರೀರಾಮಾಯಣ ದರ್ಶನಂ” ನ ನಾಟಕ ರೂಪ, ದೇಹ ಮತ್ತು ಮನಸ್ಸಿಗೆ ಆನಂದ ನೀಡಿತ್ತು. ಅದ್ಭುತವಾದ ನಾಟಕ ಪ್ರದರ್ಶನವನ್ನು ನೋಡಿದ ಕೃತಜ್ಞತಾಭಾವ ಆ ವರ್ಷಕ್ಕೆ ಸಲ್ಲುತ್ತದೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಈ ಕೃತಿ ನಿರ್ಮಾಣಕ್ಕೆ ಸುಮಾರು ಒಂಬತ್ತು ವರ್ಷ ತಗುಲಿದೆ. ಅಂದರೆ ಕುವೆಂಪು ಇದನ್ನು ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಪ್ರಾರಂಭಿಸಿ ನಲ್ವತ್ತೋಂದರಲ್ಲಿ ಮುಗಿಸಿದರು. ಈ ಕೃತಿಗೆ ಐವತ್ತು […]

ಕೊಂಕಣಿ ಕವಿ ಪರಿಚಯ

ಲೇಖನ ಕೊಂಕಣಿ ಕವಿ ಪರಿಚಯ  ಮೆಲ್ವಿನ್ ಕಾವ್ಯನಾಮ : ಮೆಲ್ವಿನ್ ರಾಡ್ರಿಗಸ್. ಬಿಬಿಮ್ ಓದಿನ ನಂತರ ಸೋಷಿಯೋಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೆಲ್ವಿನ್ ಅವರು ಕರಾವಳಿಯ ಪ್ರಸಿದ್ಧ “ದಾಯ್ಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿದ್ದಾರೆ. ಸಾಹಿತ್ಯ ಸೇವೆಯಲ್ಲಿ ಇವರಿಗೆ ದೊರೆತ ಪ್ರಶಸ್ತಿಗಳು ಅಪಾರ. ಕೊಂಕಣಿ ಭಾಷಾ ಮಂಡಲ್ ಗೋವಾ (1989) ಕೊಂಕಣಿ ಕುಟುಂಮ್, ಬೆಹರೈನ್ (2006) ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ (2006). ಡಾಕ್ಟರ್ ಟಿ.ಎಮ್.ಎ ಪೈ ಫೌಂಡೇಶನ್ ಉತ್ತಮ‌ಕೊಂಕಣಿ ಪುಸ್ತಕ ಪ್ರಶಸ್ತಿ.(2009) ಸಾಹಿತ್ಯ […]

Back To Top