ಕಸಾಪಗೆ ಮಹಿಳಾ ಅಧ್ಯಕ್ಷರು

ಚರ್ಚೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಒಂದು ಚರ್ಚೆ

ಮೆಲ್ಕಂಡವಿಷಯವಾಗಿ ಸಂಗಾತಿ ಪತ್ರಿಕೆ ಕನ್ನಡದ ಬರಹಗಾರರಿಗೆ ಕೆಲವು ಪ್ರಶ್ನೆಗಳನ್ನು ಹಾಕಿತ್ತು ಅದಕ್ಕೆ ಬಂದ ಉತ್ತರಗಳನ್ನು ಇಲ್ಲಿ ಒಂದೊಂದಾಗಿಪ್ರಕಟಿಸಲಾಗುತ್ತಿದೆ.

ಸಂಗಾತಿ ಕೇಳಿದ ಪ್ರಶ್ನೆಗಳು

ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ?

ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ?

ಪ್ರಶ್ನೆ ಮೂರು,ಮಹಿಳೆಯೊಬ್ಬರು ಅಧ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇaaಗೆ ಎದುರಿಸಬಹುದು?

ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅಧ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ ದೊರೆಯಬೇಕೆಂದು ಬಯಸುವಿರಾ?

ಪ್ರಶ್ನೆ ಐದು, ಈ ನಿಟ್ಟಿನಲ್ಲಿ ಮಹಿಳಾ ಅಧ್ಯಕ್ಷರ ಪರ ಒಲವಿರುವ ಪುರುಷ ಮತ್ತು ಮಹಿಳೆಯರು ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು

ವಿನುತಾ ಹಂಚಿನಮನಿ

ಸ್ಥಾಪನೆಯಾಗಿ ಶತಮಾನಗಳಾದರು ರಾಜ್ಯ ಕಸಾಪಗೆ ಮಹಿಳೆಯೊಬ್ಬರು ಇದುವರೆಗು ಅದ್ಯಕ್ಷರಾಗಿಲ್ಲ‌.

ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ?

ಮಹಿಳೆಯರ ಅನಾಸಕ್ತಿ, ಹಿಂಜರಿತ ಮೊದಲನೆಯದಾದರೆ, ಪುರುಷರ ಅಧಿಕಾರಿಶಾಹಿ ಪ್ರವೃತ್ತಿ ಎರಡನೆಯದು. ಮಹಿಳೆ ಯಾವತ್ತೂ ಹೋರಾಟ ಮಾಡಿಯೇ ಹಕ್ಕುಗಳನ್ನು ಪಡೆದಿರು ಇತಿಹಾಸವಿರುವಾಗ ಈಗ ಈ ಕ್ಷೇತ್ರದಲ್ಲಿ ಅಂತಹ ಕಾಲ ಬಂದಿದೆ. ಮನೆ ಮಕ್ಕಳು ಅಂತ ತನ್ನ ಚಿಪ್ಪಿನಲ್ಲಿ ಜವಾಬ್ದಾರಿಯನ್ನು ನಿರ್ವಹಿಸುವವಳು ಹೊರಗಿನ ಲೋಕದಲ್ಲಿಯೂ ಸಮಾನತೆಯನ್ನು ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆ.

ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅದ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ?

ಸಮಾನತೆಯ ಈ ಯುಗದಲ್ಲಿ ಮಹಿಳೆ ಅಧ್ಯಕ್ಷೆಯಾಗುವುದು ಹೆಚ್ಚು ಸೂಕ್ತ. ಸಾಹಿತ್ಯದಂತಹ ಸೃಜನಶೀಲ ಕ್ಷೇತ್ರದಲ್ಲಿ ಮಹಿಳೆಯ ಭಾವನಾತ್ಮಕ ವ್ಯಕ್ತಿತ್ವ ಹೆಚ್ಚು ಕ್ರಿಯಾಶೀಲತೆಯನ್ನು ಪಡೆಯಬಹುದು. ಅವಳ ಹೋರಾಟದ ಮನೋಭಾವ, ಪ್ರಾಮಾಣಿಕತೆ ಕನ್ನಡ ಸಾಹಿತ್ಯ ಲೋಕದ ಸ್ತ್ರೀಯರಿಗೆ ನ್ಯಾಯ ಒದಗಿಸಬಹುದು.

ಪ್ರಶ್ನೆ ಮೂರು,ಮಹಿಳೆಯೊಬ್ಬರು ಅದ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇಗೆ ಎದುರಿಸಬಹುದು?

ಮಹಿಳೆ ಅಧ್ಯಕ್ಷೆಯಾಗದಂತೆ ತಡೆಯುವ ಸ್ವಾರ್ಥಶಕ್ತಿಗಳಿಗೆ ಮಹಿಳೆಯರ ಕೃತ್ತುತ್ವ ಶಕ್ತಿಯನ್ನು ಮನವರಿಕೆ ಮಾಡಿಕೊಡಬೇಕು. ಅವಳ ಸಾಹಿತ್ಯದ ಜ್ಞಾನ, ಸಂಘಟನಾ ಶಕ್ತಿ, ನ್ಯಾಯಪರತೆಗಳನ್ನು ಸಾಕ್ಷ್ಯಸಹಿತ ತೋರಿಸಿಕೊಡಬೇಕು. ಅದಕ್ಕಾಗಿ ಮಹಿಳೆ ತನ್ನ ಸಮಯ ಮೀಸಲಾಗಿಡಬೇಕು.

ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅದ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ ದೊರೆಯಬೇಕೆಂದು ಬಯಸುವಿರಾ?

ಮಹಿಳೆಗೆ ಅಧ್ಯಕ್ಷ ಸ್ಥಾನ ಚುನಾವಣೆಯ ಮೂಲಕ ದೊರೆಯಬೇಕು. ಮಹಿಳೆ ಸಮಾನತೆಗಾಗಿ ಕೇಳುತ್ತಿರುವಾಗ ಮೀಸಲಾತಿಯ ಭಿಕ್ಷೆ ಅವಮಾನಕರ. ನಮ್ಮ ಪ್ರತಿಭೆ ನಮ್ಮ ಗುರುತಾಗಿರುವಾಗ ಮೀಸಲಾತಿಯಂತಹ ದಯಾಭಿಕ್ಷೆ ಯಾಕೆ ಬೇಕು?

ಪ್ರಶ್ನೆ ಐದು, ಈ ನಿಟ್ಟಿನಲ್ಲಿ ಮಹಿಳಾ ಅದ್ಯಕ್ಷರ ಪರ ಒಲವಿರುವ ಪುರುಷ ಮತ್ತು ಮಹಿಳೆಯರು ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು

ಸರಿಯಾದ ವ್ಯಕ್ತಿಯನ್ನು ಹುಡುಕಿ ಪ್ರೇರಪಿಸಬೇಕು. ಅವರ ಸಾಧನೆಯ ದಾರಿಗೆ ದೀಪವಾಗಬೇಕು, ಕಣ್ಣಾಗಬೇಕು.ಸ್ವಲ್ಪ ಮಟ್ಟಿಗೆ ತ್ಯಾಗ ಹೊಂದಾಣಿಕೆಯನ್ನು ಮನೆಯವರೊಂದಿಗೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಜನ ಮನದ ಧ್ವನಿಯಾಗಿ ಆಗು ಹೋಗುಗಳ ಮೇಲೆ ಬೆಳಕು ತೂರಿ ಸಾಹಿತ್ಯಲೋಕದಲ್ಲಿ ನಡೆಯುತ್ತಿರುವ ಪಕ್ಷಪಾತದಂತ ಅನ್ಯಾಯಗಳ ವಿರುದ್ಧ ಸೆಣಸಾಡುವ ಶಕ್ತಿಯನ್ನು ಗುಂಪುಗಳ ಅಂದರೆ ಸಂಘ ಸಂಸ್ಥೆಗಳ ಮೂಲಕ ಸಂಬಂಧ ಪಟ್ಟವರ ಗಮನಕ್ಕೆ ತರಬೇಕು. ಸಮಾಜಸೇವೆಯಲ್ಲಿ ತೊಡಗಿರುವ ಸಾಹಿತಿ, ಲೇಖಕಿ ಅಥವಾ ನ್ಯಾಯಾಂಗದಲ್ಲಿ ಇಲ್ಲವೆ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಪರ ಕೆಲಸಗಳಲ್ಲಿ ತೊಡಗಿರುವ ಮಹಿಳೆ ಇದಕ್ಕೆ ನ್ಯಾಯ ಒದಗಿಸಬಲ್ಲರು. ಈ ಕ್ಷೇತ್ರದ ಜನ ಅವಳನ್ನು ಅವಳ ಚಟುವಟಿಕೆ, ಬರವಣಿಗೆಗಳ ಮೂಲಕ ಗುರುತಿಸುವಂತಿರಬೇಕು.

*****************************************************

Leave a Reply

Back To Top