ಕೊಂಕಣಿ ಕವಿ ಪರಿಚಯ

ಲೇಖನ

ಕೊಂಕಣಿ ಕವಿ ಪರಿಚಯ

 ಮೆಲ್ವಿನ್

ಕಾವ್ಯನಾಮ : ಮೆಲ್ವಿನ್ ರಾಡ್ರಿಗಸ್.

ಬಿಬಿಮ್ ಓದಿನ ನಂತರ ಸೋಷಿಯೋಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೆಲ್ವಿನ್ ಅವರು ಕರಾವಳಿಯ ಪ್ರಸಿದ್ಧ “ದಾಯ್ಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿದ್ದಾರೆ.

ಸಾಹಿತ್ಯ ಸೇವೆಯಲ್ಲಿ ಇವರಿಗೆ ದೊರೆತ ಪ್ರಶಸ್ತಿಗಳು ಅಪಾರ.

ಕೊಂಕಣಿ ಭಾಷಾ ಮಂಡಲ್ ಗೋವಾ (1989)

ಕೊಂಕಣಿ ಕುಟುಂಮ್, ಬೆಹರೈನ್ (2006)

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ (2006).

ಡಾಕ್ಟರ್ ಟಿ.ಎಮ್.ಎ ಪೈ ಫೌಂಡೇಶನ್ ಉತ್ತಮ‌ಕೊಂಕಣಿ ಪುಸ್ತಕ ಪ್ರಶಸ್ತಿ.(2009)

ಸಾಹಿತ್ಯ ಅಕಾಡೆಮಿ ಪ್ರಶಸ್ತಿ(2011)

ವಿಮಲಾ ಪೈ ವಿಶ್ವಕೊಂಕಣಿ ಕವಿತಾ ಪ್ರಶಸ್ತು (2016).

ಇವರ ಕೆಲವು ಕೃತಿಗಳು.

ಮೊಗಾಪೆಳೊ – 1988;

ಫಿಂತಾಂ – 2000

ವಾಟ್ – 2003

ಪ್ರಕೃತಿಚೊ ಪಾಸ್ – 2008 & 2019

ವಿಂಚ್ಣಾರ್ ಕವಿತಾ – 2012

ದೇವಿ ನಿನ್ಕಾಸಿ – 2015;

ಉಗ್ತೇಂ ದಾರ್ – 2018 ( ಕೆ, ಎಸ್ ನರಸಿಂಹಸ್ವಾಮಿಯವರ “ತೆರೆದ ಬಾಗಿಲು” ಕವಿತೆಯ ಕೊಂಕಣಿ ಅನುವಾದ.


ನಿಮಗಾಗಿ ಅವರ ಎರಡು ಕವಿತೆಗಳು ಕನ್ನಡ ಅನುವಾದದೊಂದಿಗೆ.

ಪಾಂಚ್ ಬಾಯ್ಲಾಂಚೊ ದಾದ್ಲೊ

ಹಾಂವ್ ಸದಾಂಯ್ ಚಿಂತಾಲೊಂ –

ಹೊ ದಾದ್ಲೊ

ಕಸೊ ಆಪ್ಲ್ಯಾ ಪಾಂಚ್ ಬಾಯ್ಲಾಂಕ್

ಆಟಾಪುನ್ ಆಸಾ

ಎಕಾಚ್ ಘರಾಂತ್!

ಹಾಂವೆಂ ತಾಚ್ಯಾ ಘರಾಕ್ ಕಾನ್ ದಿಲೆ.

ಗೊಮ್ಟಿ ಚಿರ್ಡಿತಾನಾ

ಭಾಯ್ರ್ ಯೇಂವ್ಕ್ ಉಸ್ಮಡ್ಚ್ಯಾ

ಉಸ್ವಾಸಾಚ್ಯಾ ಆಕ್ಲಾಸಾಚ್ಯೊ ಬೋಬೊ!

ಇನ್‌ಕ್ವಿಜಿಸಾಂವಾಚ್ಯಾ ಕಾಳಾರಯ್

ಅಶ್ಯೋಚ್ ಆಸ್ತಾಲ್ಯೊ ಕೊಣ್ಣಾ!

ಜಶೆಂ-

ಮಧ್ಯಾನ್ ರಾತಿಚ್ಯಾ ಮೊನೆಪಣಾಂತ್

ತಡಿಕ್ ಮಾರ್‍ಚ್ಯಾ ಲ್ಹಾರಾಂಚಿ ಗಾಜ್-

ತಸಲಿ ಉಚಾಂಬಳಾಯ್!

ಕಾಂಯ್ ನಿದುನ್ ಆಸಲ್ಲೆ ಬಾಯ್ಲೆಚ್ಯಾ

ಘಾಗ್ರ್ಯಾಕ್ ಉಜೊ ದಿಲ್ಯಾರ್

ಜಾವ್ಯೆತಾ ತಸಲಿ!

ಬೋವ್‌ಶ್ಯಾ ಕೆಸ್ಟ್ಯಾಂಕ್ ಧರ್ನ್

ವಣ್ಟಿಕ್ ಆಪ್ಟಿತಾನಾ ಜಾಂವ್ಚೆ ಕಾಂಪ್ಣೆಕ್

ಥರ್ಥರ್‍ಚ್ಯಾ ಪಾಕಾಸಾಂ ವಯ್ಲ್ಯಾ

ನಳ್ಯಾಂಚೆ ಕಾಂಪೆರೆ….

ಹಾಂವೆಂ ಮ್ಹಜೆಂ ದಾರ್ ಉಗ್ತೆಂ ಕೆಲೆಂ!

ಪಯ್ಲೆಚ್ಯಾ ಹಾತಾಂತ್ ಮುಸಾಳ್

ದುಸ್ರೆಚ್ಯಾ ಹಾತಾಂತ್ ಬಯ್ತಾಡ್

ಎಕ್ಲಿ ಘುಂವ್ಡಾವ್ನ್ ಆಸಾ ಪೆಂಕ್ಟಾದಾಬ್

ಆನ್ಯೇಕ್ಲಿ ಮೆಳಲ್ಲ್ಯಾಂಚಿಂ ಮಾಸಾಂ ಚಾಬ್

ಉರಲ್ಲಿ ಶಿಂಪ್ಡಾವ್ನ್ ಆಸಾ ಮಿರ್‍ಸಾಂಗೆ ಪಿಟಿ

ಆಂಗ್ಣಾಂತ್ ಮ್ಹಾಭಾರತ್

ಲಾಯ್-ಲುಟಿ, ಖೊಂಟೊ ಮುಟಿ.

ಕಾಲ್ ತೊ ಪಾಂಚ್ ಬಾಯ್ಲಾಂಕ್

ಎಕಾಚ್ ಘರಾಂತ್ ಘೆವ್ನ್

ರಾಂವ್ಚೊ ದಾದ್ಲೊ ಮೆಳ್ಳೊ.

ಕಿತೆಂ ಸಾಂಗುಂ!

ಖರೋಚ್ ತೊ ಮ್ಹಾಕಾ

ಪಾಂಚ್ ಲಿಪಿಂಕ್ ಪೊಟ್ಲುನ್ ಧರಲ್ಲೆ

ಕೊಂಕ್ಣಿಬರಿ ದಿಸ್ಲೊ!

-ಮೆಲ್ವಿನ್ ರೊಡ್ರಿಗಸ್


ಐದು ಹೆಂಡಿರ ಗಂಡ.

ನಾನು ಸದಾ ಯೋಚಿಸುತಿದ್ದೆ..

ಈ ಗಂಡಸು

ಹೇಗೆ ತನ್ನ ಐದೂ

ಹೆಂಡತಿಯರನ್ನು ಸಂಭಾಳಿಸುತಿದ್ದಾನೆ

ಅದು ಕೂಡ ಒಂದೇ ಮನೆಯೊಳಗೆ!

ನಾನು ಅವನ ಮನೆಗೆ ಕಿವಿ ಹಚ್ಚಿದೆ.

ಕತ್ತು ಹಿಸುಕುವಾಗ

ಹೊರ ಬರಲು ಚಡಪಡಿಸುವ

ಉಸಿರಿನ ಅಸಹಾಯಕ

ಚೀರುವಿಕೆ.

ಇನ್‍ಕ್ವಿಸಿಷನ್ ಕಾಲದಲ್ಲೂ

ಹೀಗೆಯೇ ಇದ್ದಿತ್ತೇನೋ!

ಹಾಗೇ-

ಮಧ್ಯರಾತ್ರಿಯ ಮೌನದೊಳಗೆ

ದಡವನ್ನು ಅಪ್ಪಳಿಸುವ ಅಲೆಗಳ

ಭೋರ್ಗರೆತದ ಮೊರೆತ

ಮಲಗಿದ್ದ ಹೆಂಡತಿಯ ಬಟ್ಟೆಗಳಿಗೆ

ಉರಿ ಹಚ್ಚಿದಂತೆ.

ಬಹುಶಃ

ಜುಟ್ಟು ಹಿಡಿದು ತಲೆಯನ್ನು

ಗೋಡೆಗೆ ಅಪ್ಪಳಿಸುವಾಗಿನ

ಅದುರುವಿಕೆಗೆ

ನಡುಗುವ ತೊಲೆಗಳ

ಮೇಲಿನ ಹೆಂಚುಗಳ ನಡುಕ.

ನಾನು ನನ್ನ ಬಾಗಿಲನ್ನು ತೆರೆದಿಟ್ಟೆ.

ಒಬ್ಬಳ ಕೈಯಲ್ಲಿತ್ತು ಒನಕೆ

ಮತ್ತೊಬ್ಬಳ ಹಿಡಿಯಲ್ಲೊಂದು ಕೋಲು.

ಇನ್ನೊಬ್ಬಳು ತಿರುಗಿಸುತಿದ್ದಳು ಛಾಟಿಯಂತಹುದೇನನ್ನೋ

ಸಿಕ್ಕಿದವರ ಮಾಂಸವನ್ನೇ ಕಚ್ಚಲು

ತಯಾರಾಗಿದ್ದ ಮಗದೊಬ್ಬಳು.

ಇನ್ನು ಉಳಿದವಳು ಮೆಣಸಿನ ಪುಡಿ

ಎರಚುತಿದ್ದಳು.

ಅಂಗಳದೊಳಗೆ ಮಹಾಭಾರತ

ಜಗಳ- ಕದನ ಮಾರಾಮಾರಿ.

ನಿನ್ನೆ..

ಐದು ಜನ ಪತ್ನಿಯರ ಜೊತೆ

ಒಂದೇ ಮನೆಯಲ್ಲಿ ವಾಸಿಸುತ್ತಿರುವ

ಆ ಗಂಡಸು ಎದುರಾದ.

ಏನೆಂದು ಹೇಳಲಿ..!

ನನಗೆ ಅವನು ಪಕ್ಕಾ

ಐದು ಲಿಪಿಗಳನ್ನು ಅಪ್ಪಿಕೊಂಡ

ಕೊಂಕಣಿ ಭಾಷೆಯಂತೆಯೇ ಕಂಡ.

ಕನ್ನಡಕ್ಕೆ:

ಶೀಲಾ ಭಂಡಾರ್ಕರ್.


ಝುಜ್

    ವಾಜಪೇಯಿ ಆನಿ ಆಡ್ವಾಣಿಚ್ಯಾ ಕದೆಲಾಂಚೊ

        ಏಕ್ ಪಾಯ್

            ಆಪ್ಲ್ಯಾ ಉತ್ರಾಂನಿ ಮೊಡುನ್

                ಮುಶಾರ್ರಫಾಚ್ಯೆ ಮಿಲಿಟರಿ ಫವ್ಜೆಚಿ

                    ತೋಖ್ಣಾಯ್

    ಕರ್‍ತಾಂ, ಭಾರತಾಕ್ ಬೆಂಡುನ್

        ದಾವ್ಯಾ ಹಾತಾನ್ ಖಾಡ್ಕಿ ಉಕ್ಲುನ್

            ಉಜ್ವ್ಯಾ ಹಾತಾನ್ ವಾಕೊರ್ ಧರುನ್

                ಹೊ ಪಾಕಿಸ್ತಾನಿ ಕೆಲ್ಸಿ

                    ಮ್ಹಜ್ಯಾ ಗಳ್ಯಾಲಾಗ್ಚೆಂ ಖಾಡ್ ಕಾಡ್ತಾ!

    ಪಾಕಿಸ್ತಾನಿ ಸೊಜೆರಾಂಚ್ಯಾ ಹಾತಾಂತ್

        ಸಾಂಪ್ಡಾಲ್ಲ್ಯಾ

            ಭಾರತೀಯ್ ಸೊಜೆರಾಚಿ ಕಾಂಪ್

                ಮ್ಹಜ್ಯಾ ಶಿರಾಂನಿ!

                    ಖಿಣಾಕ್ ಸೊಜೆರಾಚೊ ಆವ್ತಾರ್ ಜಾವ್ನ್

                        ಗಳೊ ಕಾಪಿತ್ ಕೊಣ್ಣಾ

                            ಮ್ಹಳ್ಳಿ ಭಿರಾಂತ್!

    ರಾತ್ ಇಕ್ರಾಂಕ್ ತೆಂಕ್ಲ್ಯಾ

        ಸೆಲುನಾಂತ್

            ಆಮ್ಚ್ಯಾ ದೊಗಾಂವಿಣೆಂ ತಿಸ್ರೊ ನಾ

                ದಾವೊ ದೊಳೊ ತಿರ್‍ಸೊ ಕರುನ್

                    ಸೆಲುನಾಂತ್ಲ್ಯಾ ಆರ್‍ಶಾಭಾಯ್ರ್

                        ಜನೆರಾಚ್ಯಾ ಹಿಂವಾಂತ್ಲೊ

                            ನಿದೊಂಕ್ ಗೆಲ್ಲೊ, ದುಬಾಯಾಂತ್ಲೊ

    ಮಾರೊಗ್ ದೆಖ್ತಾನಾ

        ಕಾರ್‍ಗಿಲ್ ದೊಂಗ್ರಾವಯ್ಲ್ಯಾ ಕುಲ್ಕುಲ್ಯಾಂತ್‌ಯ್

            ಝುಜ್‌ಲ್ಲ್ಯಾ ಸೊಜೆರಾಂಬರಿ

                ಗೊಮ್ಟ್ಯಾಚ್ಯೊ ಕಾತಿ

                    ವಾಕೊರಾಚ್ಯೆ ಧಾರಿಲಾಗಿಂ

                        ಝುಜ್ತಾತ್ ಭೊಗ್ತಾ

    ಹಾಂವ್ ‘ಮಲ್ಬಾರಿ’ ಯಾ ‘ಮದ್ರಾಸಿ’

        ತೊ ವಿಚಾರ್‍ತಾ:

            ‘ಮಂಗ್ಳುರಿ’ ಮ್ಹಜಿ ಜಾಪ್.

                ‘ಆಮ್ಚಿಂ ಮಿಸ್ಸಾಯ್ಲಾಂ ಆತಾಂ

                    ವಯ್ರ್‌ಥಾವ್ನ್ ಸಕಯ್ಲ್‌ಪಾಸೂನ್

    ತುಮ್ಚ್ಯಾ ಕೇರಳಾಚಿಂ ಸಯ್ತ್ ಖಿಮಾಂ

        ಕರ್‍ಚ್ಯೆ ತಾಕ್ತೆಚಿಂ’

            ತೊ ಮ್ಹಜ್ಯೆ ಗೊಮ್ಟೆಚಿ ಕಾತ್

                ವೋಡ್ನ್ ಧರ್‍ನ್ ಉರ್‌ಲ್ಲಿಂ ಖಾಡಾಚಿಂ

                    ಥೊಡಿಂ ಮುಳ್ಕಾಟಾಂ ಖರ್‍ವಟಾಯ್ತಾ

    ‘ಸಗ್ಳೆಂ ಕಾಶ್ಮೀರ್ ಆಮ್ಚೆಂ

        ಹೊ ಕಂಟ್ರೋಲಾಚೊ ಗೀಟ್ ವೊಡ್ಲಾ ದೆಕುನ್

            ಆಕಾಂತ್‌ವಾದಾಚೆಂ ಪೀಟ್

                ಫುಗನಾಸ್ತಾಂ ರಾವ್ತಾ?’

                    ಮದೆಂ ಮದೆಂ ಉರ್ದುಂತ್

    ಗಾಳಿ ದೀವ್ನ್ ಆಸ್‌ಲ್ಲೊ ಕೆಲ್ಸಿ, ಎಕಾನೇಕ್

        ‘ಬುಲ್‌ಶಿಟ್’ ಮ್ಹಣೊನ್

            ದಾರ್ ಉಗ್ಡೊನ್ ಭಾಯ್ರ್ ಥಿಂಪಿ ಥುಕ್ತಾ

    ಓಲ್ಡ್‌ಸ್ಪಾಯ್ಸಾಚೆ ಥೊಡೆ ಥೆಂಬೆ

        ಮ್ಹಜ್ಯಾ ಗಾಲಾಂಚೆರ್ ಪುಸ್ತಾನಾ

            ಜಾಂವ್ಚ್ಯಾ ಹುಲೊಪಾನ್

                ಲಾಹೋರ್ ಸೊಲ್ಲ್ಯಾಚಿಂ ಕೊಸಾಳ್‌ಲ್ಲಿಂ ರುಪಾಂ

                    ಮ್ಹಜ್ಯಾ ದೊಳ್ಯಾಂ ಸಾಮ್ಕಾರ್ ಕುಪಾಂ

                        ಜಾವ್ನ್ ಮಾಂಡ್ತಾತ್

    ‘ಆಮಿ ಬೋರ್ಡರಾವಯ್ಲೆ ಮನಿಸ್

        ಇಂಡಿಯಾಚ್ಯಾ ಗುಳ್ಯಾಂಕ್

            ಆಮ್ಚೆ ಸಂಬಂಧ್ ತುಟ್ತಾತ್

                ಕಾಳ್ಜಾಂ ಫಾಳ್ತಾತ್

                    ಆನಿ ಕುಟ್ಮಾಂ ಕೊಸಾಳ್ತಾತ್

                        ತರಿ ಆಮಿ

    ಭಿಯಾನ್ ನಿದನಾಂವ್

        ಆಮಿ ರಗ್ತಾಂತ್ ನ್ಹಾತಾಂವ್

            ಆನಿ ಹರ್‍ಯೆಕಾ ಮನ್ಶಾಸಂಬಂಧಾ ಮಧೇಂಯ್

                ಉಣ್ಯಾರ್ ಎಕ್ಯೆ ಬೊಂದುಕೆಕ್ ಜಾಗೊ ದಿತಾಂವ್

                    ಮ್ಹಜ್ಯಾ ಸಾತ್ ವರ್‍ಸಾಂಚ್ಯಾ

    ಫಾತಿಮಾಚೊ ಅತ್ಮೊ

        ಬೋರ್ಡರಾಚೆರ್ ಪಾಸಾಯೊ ಮಾರ್‍ತಾ

        ಆನಿ ಆಮ್ಚೆಕುಶಿಂ ಉಸಾಳ್ಚ್ಯಾ

            ಗುಳಿಯಾಂಚಿ ದಿಶಾ ಬದ್ಲಿತಾ

                    ತಶೆಂ ಆಮಿ

                        ಭಿರಾಂತೆವಿಣೆಂ ಭೊಂವ್ತಾಂವ್’

    ಧಾರುಣ್ ಲೆಕ್‌ಲ್ಲ್ಯಾ ಕೆಲ್ಸಿಚೆಂ

        ಕಾಳೀಜ್ ಲೊಣಿಯೆಬರಿ ಕಡ್ತಾ

            ಆನಿ ದೊಳ್ಯಾಂತ್ಲೆಂ ಏಕ್ ದೂಕ್

                ಝಡೊನ್ ಮ್ಹಜ್ಯಾ ಆಂಗಾರ್

                    ಪಾಂಗರ್‌ಲ್ಲ್ಯಾ ವಸ್ತ್ರಾಚೆರ್ ಇರ್‍ತಾ

    ಮ್ಹಜ್ಯಾ ಗಾಲಾಂಚೆರ್

        ‘ನೀವಿಯಾ ಕ್ರೀಮ್’ ಮಾಖ್ತಾನಾ

            ತಾಚ್ಯಾ ತಳಾತಾಭಿತರ್

                ಕಾಂಪ್ಚ್ಯಾ ಶಿರೆಂಚೊ ಶಿರ್‍ಶಿರೊ

                    ಮ್ಹಜ್ಯಾ ಗಾಲಾಂಚ್ಯೆ ಕಾತಿವಯ್ಲ್ಯಾನ್

                        ಚರೊನ್ ಕಾಳ್ಜಾಕ್ ಕಸ್ಕಸಾಯ್ತಾ

    ಹಾಂವ್ ಉಟ್ತಾಂ

        ಆನಿ ಹರ್‍ಶೆಂಚ್ಯಾಕ್‌ಯ್ ಪಾಂಚ್ ಧಿರಾಮ್

            ಚಡ್ತಿಕ್ ಭಕ್ಷಿಸ್ ದಿತಾನಾ

                ‘ಶುಕ್ರಿಯಾ ಸಾಹೀಬ್

                    ಬಡಿ ಮೆಹರ್‌ಬಾನಿ ಆಪ್‌ಕಿ’

                        ತೊ ಮ್ಹಣ್ತಾ ಆನಿ ಭಾಯ್ರ್ ವೆಚ್ಯಾಕ್

                            ದಾರ್ ಉಗ್ತೆಂ ಕರ್‍ತಾ

    ಕಾಳೊಕಾಂತ್ಲ್ಯಾ ದುಬಾಯಾಂತ್ಲ್ಯಾ

        ರಸ್ತ್ಯಾರ್ ಚಲೊನ್ ವೆತಾನಾ

            ಮ್ಹಜ್ಯಾ ಗಾಲಾಂಕ್ ಆಪಡ್ತಾಂ

                ಸಕಡ್ ಸಾಫ್ ಸಫಾಯ್ ಜಾಲಾಂ

                    ಮ್ಹಳ್ಳ್ಯಾಚಿ ಖಾತ್ರಿ ಕರ್‍ಚೆ ಆದಿಂ

    ರಸ್ತ್ಯಾ ಬಗ್ಲೆಚ್ಯಾ ರುಕಾಚೆರ್

        ಸೊಜೆರಾಂಚೆ ಕೊಣ್ಣಾ

            ದೋನ್ ಅತ್ಮೆ

                ಕಿಡ್ಕಿಡ್ಚೆ ಆಯ್ಕತಾತ್

    ಮ್ಹಜ್ಯೆ ಮತಿಂತ್ ನವ್ಯಾನ್

        ಏಕ್ ಝುಜ್ ಸುರು ಜಾತಾ

            ಆಕೇರ್ ನಾತ್‌ಲ್ಲೆಂ ಝುಜ್!

  –  ಮೆಲ್ವಿನ್ ರೊಡ್ರಿಗಸ್


ಯುದ್ಧ

ವಾಜಪೇಯಿ ಮತ್ತು ಆಡ್ವಾಣಿಯ ಕುರ್ಚಿಯ

ಒಂದು ಕಾಲನ್ನು

ತನ್ನ ಮಾತುಗಳಿಂದಲೇ ಮುರಿದು

ಮುಷರ್ರಫ್ಪನ ಮಿಲಿಟರಿಯ

ಗುಣಗಾನ

ಮಾಡುತ್ತಾ, ಭಾರತವನ್ನು ಬೆಂಡೆತ್ತಿ

ಎಡಕೈಯಲ್ಲಿ ಗದ್ದವನ್ನೆತ್ತಿ

ಬಲಗೈಯಲ್ಲಿ ವಸ್ತರ ಹಿಡಿದು

ಈ ಪಾಕಿಸ್ತಾನಿ ಕ್ಷೌರಿಕ

ನನ್ನ ಕುತ್ತಿಗೆ ಬಳಿಯ ಗಡ್ಡ ತೆಗೆಯುತ್ತಾನೆ

ಪಾಕಿಸ್ತಾನಿ ಸೈನಿಕನ ಕೈಯಲ್ಲಿ

ಸಿಲುಕಿದ

ಭಾರತೀಯ ಸೈನಿಕನ ನಡುಕ

ನನ್ನ ಮೈಯಲ್ಲಿ

ಕ್ಷಣದಲ್ಲೇ ಸೈನಿಕನ ಅವತಾರ ತಾಳಿ 

ಕುತ್ತಿಗೆ ಸೀಳುವನೋ

ಎಂಬ ಹೆದರಿಕೆ

ರಾತ್ರಿ ಹನ್ನೊಂದಾಗುತ್ತಿದೆ

ಸಲೂನಿನಲ್ಲಿ

ನಮ್ಮಿಬ್ಬರ ವಿನಹ ಮತ್ತೊಬ್ಬನಿಲ್ಲ

ಎಡಗಣ್ಣ ಕಿರಿದು ಮಾಡಿ

ಸೆಲೂನಿನ ಗಾಜಿನಾಚೆಗೆ

ಜನವರಿಯ ಚಳಿಯನ್ನು ಹೊದ್ದು

ಮಲಗಿದ, ದುಬಾಯಿಯ

ರಸ್ತೆ ನೋಡುವಾಗ

ಕಾರ್ಗಿಲ್ ಶಿಖರದ ಚಳಿಯಲ್ಲಿಯೂ

ಹೋರಾಡಿದ ಸೈನಿಕನಂತೆ

ಕುತ್ತಿಗೆಯ ಚರ್ಮ

ವಸ್ತರದ ಮೊನಚಿನೊಡನೆ

ಹೋರಾಡಿದ ಭಾವ

ನಾನು ‘ಮಲ್ಬಾರಿ’ ಯಾ ‘ಮದ್ರಾಸಿ’

ಅವನ ಪ್ರಶ್ನೆ

‘ಮಂಗಳೂರಿಗ’ ನನ್ನ ಉತ್ತರ

ನಮ್ಮ ಮಿಸ್ಸಾಯ್ಲ್ ಗಳು ಈಗ

ಮೇಲಿನಿಂದ ಕೆಳಗಿನ ತನಕ

ನಿಮ್ಮ ಕೇರಳವನ್ನು ಕೂಡಾ ಖೈಮಾ

ಮಾಡುವ ತಾಕತ್ತು ಪಡೆದಿವೆ

ಅವನು ನನ್ನ ಕುತ್ತಿಗೆಯ ಚರ್ಮ

ಹಿಡಿದೆಳೆದು ಅಳಿದುಳಿದ ಗಡ್ಡದ

ಚೂರುಗಳನ್ನು ಕೆರೆಯುತ್ತಾನೆ

ಇಡೀ ಕಾಶ್ಮೀರ ನಮ್ಮದು

ಈ ಕಂಟ್ರೋಲಿನ ಗೆರೆ ಎಳೆದ ಕೂಡಲೇ

ಭಯೋತ್ಪಾದನೆ

ಉಬ್ಬರಿಸದೆ ನಿಂತಿತೆ?

ನಡು ನಡುವೆ ಉರ್ದುವಿನಲ್ಲಿ

ಬೈಯುತ್ತಾ ಇದ್ದ ಕ್ಷೌರಿಕ, ಒಮ್ಮೆಲೇ

‘ಬುಲ್ ಶಿಟ್’ ಎನ್ನುತ್ತಾ

ಬಾಗಿಲು ತೆರೆದು ಉಗುಳುತ್ತಾನೆ

ಓಲ್ಡ್ ಸ್ಪೈಸ್ ನ ಕೆಲ ಹನಿಗಳನ್ನು

ನನ್ನ ಕೆನ್ನೆಗಳಿಗೆ ಹಚ್ಚುವಾಗ

ಎದ್ದ ಉರಿಗೋ ಇರಬಹುದು

ಮುರಿದ ಲಾಹೋರ್ ಒಪ್ಪಂದದ

ತುಣುಕುಗಳು

ನನ್ನ ಕಣ್ಣೆದುರು ಮೋಡಗಳಾಗಿ

ಆವರಿಸುತ್ತವೆ

ನಾವು ಬಾರ್ಡರ್ ಮೇಲಿನ ಜನರು

ಇಂಡಿಯಾದ ಗುಂಡುಗಳಿಗೆ

ನಮ್ಮ ಸಂಬಂಧಗಳು ಹರಿಯುತ್ತವೆ

ಹೃದಯಗಳು ಬಿರಿಯುತ್ತವೆ

ಮತ್ತು ಕುಟುಂಬಗಳು ಮುರಿಯುತ್ತವೆ

ಆದರೂ ನಾವು

ಹೆದರಿ ಮಲಗುವುದಿಲ್ಲ

ನಾವು ರಕ್ತಸ್ನಾನ ಮಾಡುತ್ತೇವೆ

ಮತ್ತು ಪ್ರತಿ ಮನುಷ್ಯ ಸಂಬಂಧದ ನಡುವೆಯೂ

ಒಂದು ಬಂದೂಕಿಗೆ ಜಾಗ ನೀಡುತ್ತೇವೆ.

ನನ್ನ ಏಳು ವರ್ಷದ

ಫಾತಿಮಾಳ ಆತ್ಮ

ಬಾರ್ಡರ್ ನಲ್ಲಿ ಅಲೆಯುತ್ತಾ

ನಮ್ಮ ದಿಕ್ಕಿಗೆ ಹಾರುವ

ಗುಂಡುಗಳ ದಿಕ್ಕನ್ನು ಬದಲಿಸುತ್ತವೆ

ಹಾಗಾಗಿ ನಾವು

ಹೆದರದೆ ತಿರುಗಾಡುತ್ತೇವೆ.

ಕಾಠಿಣ್ಯ ತುಂಬಿದ ಕ್ಷೌರಿಕನ

ಹೃದಯ ಬೆಣ್ಣೆಯಂತೆ ಕರಗುತ್ತದೆ

ಆತನ ಒಂದು ಕಣ್ಣ ಹನಿ ಉದುರಿ

ನನಗೆ ಹೊದಿಸಿದ

ಬಟ್ಟೆಯಲ್ಲಿ ಇಂಗುತ್ತದೆ.

ನನ್ನ ಕೆನ್ನೆಗಳಿಗೆ

‘ನೀವಿಯಾ ಕ್ರೀಮ್’ ಹಚ್ಚುವಾಗ

ಆತನ ಅಂಗೈಯೊಳಗೆ

ನಡುಗುವ ನರಗಳ ನಡುಕ

ನನ್ನ ಕೆನ್ನೆಯ ಚರ್ಮದೊಳಗಿಂದ

ಹರಿದು ಹೃದಯವನ್ನು ಅಲ್ಲಾಡಿಸುತ್ತದೆ

ನಾನು ಎದ್ದು

ಎಂದಿಗಿಂತ ಐದು ಧಿರಾಮ್

ಹೆಚ್ಚು ಭಕ್ಷೀಸು ನೀಡುವಾಗ

‘ಶುಕ್ರಿಯಾ ಸಾಹೀಬ್

ಬಡಿ ಮೆಹರ್ ಬಾನಿ ಆಪ್ ಕಿ’

ಎನ್ನುತ್ತಾ ಹೊರ ಹೋಗಲು

ಬಾಗಿಲು ತೆರೆಯುತ್ತಾನೆ.

ಕತ್ತಲಿನ ದುಬಾಯಿಯ ರಸ್ತೆಯಲ್ಲಿ

ನಡೆಯುವಾಗ

ನನ್ನ ಕೆನ್ನೆಗಳನ್ನು ಮುಟ್ಟುತ್ತೇನೆ

ಎಲ್ಲಾ ಸಫಾಯ್ ಆಗಿದೆ

ಎಂಬುದರ ಖಾತರಿ ಮಾಡುವ ಮೊದಲು

ರಸ್ತೆ ಬದಿಯ ಮರದಲ್ಲಿ

ಸೈನಿಕರದ್ದೋ ಏನೋ

ಎರಡು ಆತ್ಮಗಳು

ನಗಾಡುವುದು ಕೇಳುತ್ತೇನೆ

ನನ್ನ ಮನಸ್ಸಿನಲ್ಲಿ ಹೊಸದಾಗಿ

ಒಂದು ಯುದ್ಧ ಶುರುವಾಗುತ್ತದೆ

ಅಂತ್ಯವಿಲ್ಲದ ಯುದ್ಧ.

ಕನ್ನಡಕ್ಕೆ: ವಿಕ್ಟರ್ ಮಥಾಯಸ್.

**************************************

====================================

ಶೀಲಾ ಭಂಡಾರ್ಕರ್

Leave a Reply

Back To Top