Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ನಿನ್ನ ನೆನಪಿನ ಮೀನು..! ಡಾ.ಜಯಪ್ಪ ಹೊನ್ನಾಳಿ(ಜಯಕವಿ) ನಿನ್ನ ನೆನಪಿನ ಮೀನು ಎಷ್ಟೊಂದು ಬಣ್ಣದಲಿ ಆಡುತಿವೆ ಎದೆಗೊಳದ ತಿಳಿಯಾಳದಲ್ಲಿ..! ಕನಸ ರೆಪ್ಪೆಯ ತೆರೆದು ಕನವರಿಕೆಯಲೆ ನೆರೆದು ಮಳೆಬಿಲ್ಲ ಮಿಂದಂತೆ ಮಧು ಮೇಳದಲ್ಲಿ..! ಹೊಸಿಲ ಚುಂಬಿಸುತಿಹುದು ಹೊಂಬಿಸಿಲಿನೊಡಗೂಡಿ ಹೊಸತೊಂದು ಹಾರೈಕೆ ಹಳೆ ನೋವ ಕೊಂದು..! ನಗುವ ನಂದನದೊಲವು ತಂಗಾಳಿ ತೊಟ್ಟಿಲಲಿ ಪರಿಮಳದಿ ತಾ ತುಂಬಿ ನವ ಭಾವ ತಂದು..! ಬಣಗುಡುವ ಬದುಕಲ್ಲಿ ನೀ ಬಂದು ನಕ್ಕಂದು ಮರಳಿ ಬಂದಿತು ಮನಕೆ ಮತ್ತೆ ಮಲೆನಾಡು..! ಜೀವವಾಯಿತು ಜಿಂಕೆ ರೆಕ್ಕೆ ಬಿಚ್ಚಿತು ನವಿಲು […]

ಕಾವ್ಯಯಾನ

ನೆನೆಯುವೆ ಕವಿತೆಯಲಿ ತ್ರಿವೇಣಿ ಜಿ.ಹೆಚ್. ಮಾತು ಮಾತಿಗೂ ಕೋಪ ಮನಸು ಮುನಿದ ರೂಪ.. ಈಗ ಕೇಳು! ರಾಧೆಯ ಮನದಲಿ ಪರಿತಾಪ… ಸರಿಸು ಮೌನವ ಕೊಳಲ ಆಲಾಪದಲಿ. ಆದರೀಗ, ರಾಧೆ ಒಲವ ಹಾಸಿ ನಿನ್ನ ಅರಸಿ ಭಜಿಸಿ ಪೂಜಿಪಳು… ಮರಳಿ ಬಿಡು ಬಿದಿರ ಕೊಳಲು ನುಡಿಸಲು.. ಹುಸಿ ಮುನಿಸು ತಣಿಸಲು ಮಾತು ಮೌನ ಬೆಸೆದು ಒಳಗೆ.. ಶರಣಾಗಲಿ ಮನದೊಳಗೆ. ಮಾಧವ, ಬಾರದೆ ಸರಿಯದಿರು… ಬರೆದು ನೆನೆಯುವೆ ಕವಿತೆಯಲಿ. **********

ಕಾವ್ಯಯಾನ

ನೆನೆವರಾರು ನಿನ್ನ ಮಧು ವಸ್ತ್ರದ್ ಮುಂಬಯಿ ಓ ಅಂಬಿಗಾ..ಬೇಗ ಬೇಗನೆ ಮುನ್ನೆಡೆಸು ದೋಣಿಯ.. ತೀರದಾಚೆಯ ಹಳ್ಳಿ ಹೊಲದಲಿ‌ ಕಾಯುತಿಹನು ನನ್ನಿನಿಯ.. ಅಂಬಿಗಣ್ಣಾ ಶಾಲೆಯ ಸಮಯ ಆಯ್ತು ನಡೆ ಬೇಗ.. ಎಲವೋ ಅಂಬಿಗ ದಡದಾಚೆಯ ಜನರ ಓಟುಬೇಕು ನಡೆ ಈಗ.. ತಮ್ಮ ತಮ್ಮದೇ ಲೋಕದಲಿ ವಿಹರಿಸುತಿಹರು ಎಲ್ಲರು.. ಹೊಳೆಯ ದಾಟಿದ ನಂತರ ಬಡ ಅಂಬಿಗನ ನೆನೆವರಾರು.. ಬಿಸಿಲು ಮಳೆ ಗುಡುಗುಸಿಡಿಲು ಕತ್ತಲಾದರೆ ಸುತ್ತಲು.. ಈಜುಬಾರದವರಿಗೆಲ್ಲ ಆಧಾರ ನೀನೆ ಗುರಿ ಮುಟ್ಟಲು.. ಶಾಂತಚಿತ್ತದಿ ಹೊಣೆಯ ಹೊತ್ತಿದೆ ನಿನ್ನಯ ಬಾಗಿದ ಹೆಗಲು.. […]

ಕಾವ್ಯಯಾನ

ಪ್ರೀತಿ ಸಾಗರದಲಿ ಅವ್ಯಕ್ತ ಕಂಡೆನಾ ಸಿರಿಯ ಅಯ್ಸಿರಿಯ ಮಾಲೆ , ಮುದುಡಿದ ಮನದ ಅಂಗಳ ಅರಳುತಲಿ… ಹಚ್ಚಹಸಿರ ಹಾಸಿಗೆಯ ಮೇಲೆ , ಹೊಸದಾಗಿ ಹಾಸಿದ ಬಿಳಿ ಮೋಡಗಳ ಸಾಲೆ. ಅಲ್ಲೊಂದು ಇಲ್ಲೊಂದು ನಿಂತಿರುವ ತಲೆಗಳು, ಕಣ್ಣಾಮುಚ್ಚಾಲೆ ಆಡುತ್ತಾ ನಲಿವ ಕಿರಣಗಳು. ||೧|| ಕೈ ಚಾಚಿ ,ಆಲಂಗಿಸಿ ಕರೆಯುತಲಿ, ಹೇಳಿತೇನೋ ಪಿಸು ಮಾತುಗಳಲಿ, ಎಲ್ಲೆಲ್ಲೂ ನಾನಿರುವೆ ಹಂಚುತ ಸವಿಗಳ, ಪ್ರೀತಿ, ನೆಮ್ಮದಿ, ಸುಖಸಂತೋಷಗಳ. ||೨|| ನನ್ನಲ್ಲಿ ನೀನಿರಲು, ನಿನ್ನಲ್ಲಿ ನಾನಿರಲು ಮಿಡಿಯುವ ಕಂಗಳು, ಮನದಾಳದ ಮಾತುಗಳು, ಪೃಕ್ರತಿಯ ಪ್ರಕೃತಿ […]

ಅನುವಾದ ಸಂಗಾತಿ

ಚೇಳು ಕಡಿದ ರಾತ್ರಿ ಇಂಗ್ಲೀಷ್ ಮೂಲ:ನಿಸ್ಸಿಮ್ ಏಜೇಕಿಲ್ ಕನ್ನಡಕ್ಕೆ: ಕಮಲಾಕರ ಕಡವೆ ನೆನಪಾಗುತ್ತದೆ ನನಗೆ ಒಂದು ಚೇಳುನನ್ನ ಅಮ್ಮನ ಕಡಿದ ರಾತ್ರಿ. ಹತ್ತು ತಾಸುಗಳಕಾಲ ಜಡಿದ ಸುರಿಮಳೆ ಆ ಚೇಳನ್ನುಅಕ್ಕಿ ಮೂಟೆಯಡಿ ಓಡಿಸಿತ್ತು.ವಿಷ ಕಾರಿ ಅದು – ಅಂಧಕಾರ ತುಂಬಿದಕೋಣೆಯಲ್ಲಿ ಫಕ್ಕನೆ ಕುಣಿದ ಕುಟಿಲ ಬಾಲ –ಮತ್ತೆ ಮಳೆಯಲ್ಲಿ ಮರೆಯಾಯಿತು. ನೊಣಗಳ ಹಿಂಡಿನಂತೆ ಬಂದರು ರೈತರುಮಣಮಣಿಸುತ್ತ ನೂರು ಸಲ ದೇವರ ನಾಮಕೇಡು ಕಳೆಯಲಿ ಎಂದು ಕೇಳಿಕೊಳ್ಳುತ್ತ. ಮೊಂಬತ್ತಿ, ಲಾಟೀನುಗಳ ಹಿಡಿದುಮಣ್ಣ ಗೋಡೆಗಳ ಮೇಲೆದೈತ್ಯ ಜೇಡನಂತ ನೆರಳುಗಳ ಮೂಡಿಸುತ್ತಅವರು […]

ನಿನ್ನ ಮೌನಕೆ ಮಾತ…

ನಿನ್ನ ಮೌನಕೆ ಮಾತ….…… ಜಯಕವಿ ಡಾ.ಜಯಪ್ಪ ಹೊನ್ನಾಳಿ ನಿನ್ನ ಮೌನಕೆ ಮಾತ ತೊಡಿಸಬಲ್ಲೆನು ನಾನು ನೀ ಹೇಳದಿರೆ ಮುಗುಳು ತುಟಿಯ ತೆರೆದು..! ಹೂಗನಸುಗಳ ಬರೆದು ನಿನ್ನ ಕಣ್ಣಲೆ ಒರೆದು ಚೈತ್ರ ಚಿಗಿದಿದೆ ತಾನು; ಚಿಗರೆ ನೆರೆದು..! ಕಡಿದ ಬುಡದಲೆ ನೆನಪು ಹೊಂಬಾಳೆಯಾಗುತಿವೆ ಕತ್ತರಿಸಿದೆಡೆಯೆ; ತತ್ತರಿಸುತೆದ್ದು..! ವಿಧಿಯು ಮರೆತಿದೆ ಜಿದ್ದು ನೋವು ಸೇರಿದೆ ಗುದ್ದು ಆನಂದ ಬಾಷ್ಪಕಿದೆ ಬೆರಗ ಮುದ್ದು..! ಹೊಸ ಹಾದಿ ಹಾರೈಸಿ ಹೊಸ ಬೆಳಕು ಕೋರೈಸಿ ಹೊಸ ಜೀವ ಭಾವದಲಿ ಯುಗಳ ವಾಣಿ..! ಬೀಸಿದೆಲರಲೆ ಯಾನ […]

ಜಾತಿ ಬೇಡ

ನಿರ್ಮಲಾ ಆರ್. ಜಾತಿ ಬೇಡ” ಮಡಿ ಮಡಿ ಅಂತ ಮೂರು ಮಾರು ಸರಿಯುವಿರಲ್ಲ ಮೈಲಿಗೆಯಲ್ಲೆ ಬಂತು ಈ ಜೀವ ಎನ್ನುವುದ ಮರೆತಿರಲ್ಲ ಜಾತಿ ಬೇಡ,ಜಾತಿ ಬೇಡ ಎಂದು ಬೊಬ್ಬೆ ಹೊಡೆಯುವಿರಲ್ಲ ಜಾತಿ ಬೇಡ ಎಂದ ಮಹಾತ್ಮರನ್ನೆ ಜಾತಿಗೆ ಸೇರಿಸಿ ಮೆರೆಸುತಿರುವಿರಲ್ಲ ಪವಿತ್ರವಾದ ಜ್ಞಾನ ದೇಗುಲಗಳಲ್ಲಿ ಜಾತಿ ರಾಜಕೀಯ ಮೀಲಾಯಿಸುವಿರಲ್ಲ ಜಾತಿ ಕಾರ್ಯಗಳಿಗೆ ಮುಗ್ದ ಮನಸುಗಳ ಬಳಸಿ ಜಾತಿಯ ವಿಷಬೀಜ ಬಿತ್ತುತಿರುವಿರಲ್ಲ. ಜಾತಿ ಬೇಡ ಜಾತಿ ಬೇಡ ಎಂದು ಜಾತಿ ಗಣನೆ ಮಾಡಿಸಿ ಧರ್ಮದ ಹೆಸರಲಿ ವೋಟ್ ಬ್ಯಾಂಕಿನ […]

ಕನ್ನಡಿಗೊಂದು ಕನ್ನಡಿ

ಡಾ.ಗೋವಿಂದ ಹೆಗಡೆ ಕನ್ನಡಿಗೊಂದು ಕನ್ನಡಿ ಕನ್ನಡಿಯೆದುರು ನಿಂತೆ ಬುದ್ದಿ ಕಲಿಸಲೆಂದೇ ಬಿಂಬಕ್ಕೆ- ಹೊಡೆದೆ ಈಗ ಕೆನ್ನೆಯೂದಿದೆ ! •• ಕೋಪದಲ್ಲಿ ಹೋಗಿ ನಿಂತೆ ಕನ್ನಡಿಯೆದುರು ಉರಿದೆ, ಕೂಗಾಡಿದೆ. ಸರಿ- ಬಿಂಬಕ್ಕೆ ಕೋಪ ಬಂದರೆ ಏನು ಮಾಡುತ್ತದೆ ಹೇಗೆ ಇದಿರು ನಿಲ್ಲುತ್ತದೆ ?! **********

ಕಾವ್ಯಯಾನ

ಇನ್ನೇನು ಬೇಕಿದೆ. ಪ್ರಮಿಳಾ ಎಸ್.ಪಿ. ಇನ್ನೇನು ಬೇಕಿದೆ. ಒಡೆದ ಹಿಮ್ಮಡಿಯೂರಿ ನಿಂತು ಎನ್ನ ಹೆಗಲಮೇಲಿರಿಸಿ ತಾನು ಕಾಣದ ಪರಪಂಚವ ನನಗೆ ತೋರಿಸಿದವ ನನ್ನಪ್ಪ. ಕುದಿಯುವ ಸಾರಿನೊಂದಿಗೆ  ಕುಳಿತ ಹೆಂಡತಿಯನು ತಣ್ಣೀರಿನೊಂದಿಗಾಡುವ ಮಕ್ಕಳನು ಮುದ್ದಾಡಿ ಬೆಳೆಸಿದ್ದ ನನ್ನಪ್ಪ. ಮಕ್ಕಳನು ಓದಿಸಲೇಬೇಕೆಂದು ಹಠಹಿಡಿದವಳು ….ನಾವು ಓದಿಕೊಂಡದ್ದು ಏನೆಂದು ತಿಳಿಯದವಳು ನನ್ನವ್ವ. ಕವಿತೆ ಬರೆಯಲು ಬಾರದವಳು ಮಕ್ಕಳ ಬದುಕನ್ನೇ ಸುಂದರ ಕವಿತೆಯಾಗಿಸಲು  ಭಾವವಾದವಳು ನನ್ನವ್ವ. ಹೀಗೆಲ್ಲಾ ಹೊಗಳಿ ಬರೆದ ನನ್ನ ಪ್ರಾಸವಿರದ ಕವಿತೆಗಳು ಬೇಕಿಲ್ಲಾ ಈಗ ಅವರಿಗೆ…! ಪಿಂಚಣಿ ಬಂದಿತೆ ಮಧುಮೇಹ […]

ಕಾವ್ಯಯಾನ

ಭರವಸೆ ನಾಗಶ್ರೀ ಸಾವಿರ ಬಾರಿ ಸೋತರು ಭರವಸೆಯೊಂದಿದೆ ಕಾಯುವ ಕನವರಿಕೆಯಲು ನಿನ್ನದು ಬರೀ ಹುಂಬತನ ಅರಿವಾಗುವುದು ಅಂತರ ಕಾಯ್ದುಕೊಳ್ಳಲು ಅದೆಷ್ಟು ಚಡಪಡಿಕೆಯೆಂದು ಅರಿಯಬೇಕಿತ್ತು ಅಂತರಾತ್ಮವ ಕಾದು ಕಾದು ಬೆಂಡಾದ ಭಾವನೆಗಳಿಗೆ ಸಮಯವೂ ಸೊಪ್ಪಾಕುತಿದೆ ನನ್ನ ನಾ ಅರಿಯದ ಇರಾದೆಗೆ ಅರ್ಥೈಸಲು ನೂರು ಬಾರಿ ಹೇಳುವ ಅವಶ್ಯಕತೆಯಾದರೂ ಇಲ್ಲವಲ್ಲ ಅರ್ಥಮಾಡಿಕೊಳ್ಳಲು ಒಂದು ಘಳಿಗೆ ಸಾಕಲ್ಲ ನಂಬಿಕೆಯ ಕವಲೊಳಗೆ ಅಪನಂಬಿಕೆಯ ಟಿಸಿಲುಗಳು ಮತ್ತೆದೆ ಹುಸಿಯ ನಂಬುವ ಹಂಬಲದತ್ತ ವಾಲುವ ಮನ ಕರುಳಿನ ನೋವು ಕಣ್ಣವರೆಗೂ ತಲುಪಿ ಕಣ್ಣರೆಪ್ಪೆಗೂ ನೋವಂತೆ ಕಣ್ತೆರೆಯಲಾಗದ […]

Back To Top