ಹೇಳಲೇನಿದೆ

ಕವಿತೆ

ಡಾ.ಗೋವಿಂದಹೆಗಡೆ

ಇಲ್ಲ, ನಿಮ್ಮೆದುರು ಏನನ್ನೂ
ಹೇಳುವುದಿಲ್ಲ

ಹೇಳಿದಷ್ಟೂ ಬೆತ್ತಲಾಗುತ್ತೇನೆ
ಮತ್ತೆ ಬಿತ್ತಿಕೊಳ್ಳಲು ಏನು
ಉಳಿಯುತ್ತದೆ
ಹೇಳಿದಷ್ಟು ಜೊಳ್ಳಾಗುತ್ತೇನೆ
ಮೊಳೆಯಲು ಮತ್ತೆ
ಉಳಿಯುವುದೇನು

ಖರೇ ಅಂದರೆ
ನಿಮಗೆ ಏನನ್ನೂ ಹೇಳುವ
ಅಗತ್ಯವೇ ಇಲ್ಲ

ಕಣ್ಣುಗಳಲ್ಲೇ ಸೆರೆಹಿಡಿದು
ದೋಷಾರೋಪ
ಪಟ್ಟಿ ಸಲ್ಲಿಸಿ
ಯಾವ ಪಾಟೀಸವಾಲೂ
ಇಲ್ಲದೇ
ಶಿಕ್ಷೆ ವಿಧಿಸಿ…

ಹೇಳಲೇನಿದೆ?

***********

5 thoughts on “ಹೇಳಲೇನಿದೆ

  1. ಚಂದದ ಕವಿತೆ. ಹೇಳಿದಷ್ಟೂ ಬೆತ್ತಲಾಗುವ, ಮತ್ತೆ ಬಿತ್ತಿಕೊಳ್ಳಲು ಏನೂ ಉಳಿಯದೇ – ಖಾಲಿತನ ಕಾಡುವುದೆಂಬ ಭಾವವನ್ನು ಸಾಲುಗಳಲ್ಲಿ ಹಿಡಿದಿಟ್ಟು ಹೇಳಲೇನಿದೆ ಎಂದು ಪ್ರಶ್ನಿಸುವ ಪರಿ ಚಂದ !!

  2. ಬೆತ್ತಲಾಗುವ ಸತ್ಯವೆ ಹಾಗೆ, ಬೆತ್ತಲಾಗದಿದ್ದರೂ

  3. ಹೇಳಲಿದೆ… ಈ ಕವಿತೆ ತುಂಬಾ ಚೆನ್ನಾಗಿದೆ.. ಶಿಕ್ಷೆ ನಿಗದಿ ಪಡಿಸಲಾಗಿದೆ ಇಂತಹ ಇನ್ನಷ್ಟು ಕವಿತೆಗಳನ್ನು ಬರೆಯಬೇಕೆಂದು…

  4. ಹೇಳಲೇನಿದೆ ಎನ್ನುತ್ತ ಏನನ್ನೂ ಹೇಳಲೇಬಾರದು
    ಎನ್ನುವ ಕವಿಸಾಲು ನಿಜಕ್ಕೂ ಸತ್ಯ
    ಚಂದದ ಕವಿತೆ

Leave a Reply

Back To Top