Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಹನಿಗಳು ಬಸವರಾಜ ಕಾಸೆ ಅವಳ ಕೈಗುಣ ಕೇಳಿ ತಿಳಿದು ಕಟ್ಟಿಕೊಂಡೆ ಮಾಡಿ ಅವಳ ಗುಣಗಾನ! ಆಹಾ ಎಂತಹ ನಶೆ ಕಂಡು ಅವಳ ಕೈಗುಣ!!! ಸಂಜೆ ಮಿಕ್ಸ್ ಮಾಡಿ ಕೊಡುವಳು ಎಣ್ಣೆಯೊಂದಿಗೆ ಸೋಡಾ!! ರುಚಿ ಹೇಗಿದೆ ಎಂದು ಪರೀಕ್ಷಿಸಿ!!! ಪಿಜ್ಜಾ ಬರ್ಗರ್ ಕೊಡಿಸದಿದ್ದರೂ ಪರವಾಗಿಲ್ಲ ಪಿಜ್ಜಾ ಬರ್ಗರ್ ಸ್ಯಾಂಡವಿಚ್!!! ಕೊಡಿಸಿದರೆ ಸಾಕೆಂದಳು ಲಿಪಸ್ಟಿಕ್ ಕ್ರೀಮ್ ಬಿವಟಿ ಕಿಟ್!!! ಅಮಾಯಕಿ ಗುಟ್ಕಾ ಸಿಗರೇಟು ಎಣ್ಣೆ ಏನೆಲ್ಲಾ ಬಿಡಿಸಿದಳು ನಲ್ಲೆ! ಹುಚ್ಚು ಪ್ರೀತಿಯ ಅಡ್ಡ ಪರಿಣಾಮ!! ಜೇಬಲ್ಲಿ ಯಾವುದಕ್ಕೂ ಕಾಸಿಲ್ಲದಂತೆ ಮಾಡಿದಳು […]

ಕಾವ್ಯಯಾನ

ಎಚ್ಚರವಾಗಿದ್ದರೂ ಏಳದೆ! ಧಾಮಿನಿ ಅವಳು ಮಲಗೇ ಇದ್ದಾಳೆ… ಬೆಳಗು ಮುಂಜಾನೆದ್ದು ರಂಗೋಲಿ ಹಾಕುತ್ತಿದ್ದವಳು ಇವತ್ತೇನೋ ನೀರು ಹಾಕಿದರೆ ಸೂರ್ಯನ ಮುಖಕ್ಕೇ ರಾಚುವಷ್ಟು ಸಮಯವಾಗಿದ್ದರೂ ಮಲಗೇ ಇದ್ದಾಳೆ. ಹಾಗಂತ ರಾತ್ರಿಯೆಲ್ಲ ಕ್ರೀಡೆಯಾಡಿರಲಿಲ್ಲ ಲೀಲೆಯಾಡಿದಂತ ಕಸಸೂ ಕಂಡಿರಲಿಲ್ಲ, ಶತಮಾನವಾಗಿದ್ದರೂ. ಹಾಗಂತ ಮೈಮರೆತು ಮಲಗಿರಲಿಲ್ಲ ಎಲ್ಲದರಿಂದ ವಿಮುಖವಾದವಳೂ ಅಲ್ಲ ಬದುಕೇ ಎಲ್ಲದರಿಂದ ದೂರ ಸರಿದಿದೆ ಸುಮ್ಮನೆ ಮಲಗೇ ಇದ್ದಾಳೆ ವೇಳೆ ಸರಿದಿದ್ದರೂ. ಹಾಗಂತ ಕೆಲಸವಿಲ್ಲದೇ ಏನಿಲ್ಲ ಶುರು ಮಾಡಿದರೆ ಅತ್ತಿತ್ತ ತಿರುಗಲೂ ಪುರುಸೊತ್ತಿಲ್ಲ ಒಂದೊಂದು ಘಳಿಗೆ ಮುಂದಕ್ಕೋಗುತ್ತಿದ್ದರೂ ಮಲಗೇ ಇದ್ದಾಳೆ. ಹಾಗಂತ […]

ಕಾವ್ಯಯಾನ

ಲೆಕ್ಕವಿಟ್ಟವರಿಲ್ಲ.. ಮಧುಸೂದನ ಮದ್ದೂರು ಭೂತಗನ್ನಡಿಯಲಿ ಇತಿಹಾಸ ಗರ್ಭ ಕೆದಕಿದಾಗ ಕಂಡುಂಡ ಸತ್ಯಗಳು ಮಿಥ್ಯೆಗಳವೆಷ್ಟೋ ಲೆಕ್ಕವಿಟ್ಟವರಿಲ್ಲ.. ರಾತ್ರಿ ರಾಣಿಯರ ಪಲ್ಲಂಗದಲ್ಲಿ ಕರಗಿದ ಸಾಮ್ರಾಜ್ಯಗಳೆಷ್ಟೋ ? ಉರುಳಿದ ಕೋಟೆ ಕೊತ್ತಲಗಳೆಷ್ಟೋ? ಸಾಮ್ರಾಜ್ಯ ಮುಕುಟ ಮಣಿಗಳೆಷ್ಟೋ? ತರಗಲೆಯಾದ ತಲೆಗಳೆಷ್ಟೋ? ಲೆಕ್ಕವಿಟ್ಟವರಿಲ್ಲ… ಮಣ್ಣಿನಾಸೆಯ ಹಪಹಪಿಕೆಯಲಿ ಹರಿದ ರಕುತದ ಕಾಲುವೆಗಳೆಷ್ಟೋ? ಆ ಕಾಲುವೆಗಳಲ್ಲಿ ಮುಗಿಲು ಮುಟ್ಟಿದ ವಿಧವೆಯರ ಗೋಳಿನ ಕಣ್ಣೀರ ಉಪ್ಪು ಕದಡಿ ಹರಿದ ನದಿಗಳೆಷ್ಟೋ? ಉಪ್ಪುಪ್ಪು ಕಡಲುಗಳೆಷ್ಟೋ? ಲೆಕ್ಕವಿಟ್ಟವರಿಲ್ಲ…. ಅಂಗವಿಹಿನರಾದವರ ಆರ್ತನಾದ ನಿರ್ವಂಶವಾಗಲೆಂಬ ಹಿಡಿಶಾಪವಿಟ್ಟು ಹೂಳಿಟ್ಟು ಎರಚಿದ ದೂಳಿನ ಗುಡ್ಡೆ ಗಳೆಷ್ಟೋ ಲೆಕ್ಕವಿಟ್ಟವರಿಲ್ಲ… […]

ಕಾವ್ಯಯಾನ

ಗಝಲ್ ಎ. ಹೇಮಗಂಗಾ ನನ್ನ ತೊರೆದು ಹೋಗುವುದೇ ಹಿತವೆಂದಾದರೆ ಹೇಳಿ ಹೋಗು ಕಾರಣ ನನ್ನ ಮರೆತು ಬಾಳುವುದೇ ಸುಖವೆಂದಾದರೆ ಹೇಳಿ ಹೋಗು ಕಾರಣ ‘ನಿನ್ನ ಹೊರತು ಬೇರಾರೂ ಬೇಕಿಲ್ಲ’ವೆಂದೇ ಈ ತನಕ ಕನವರಿಸುತ್ತಿದ್ದೆ ನನ್ನ ಅಸೀಮ ಒಲವೇ ಈಗ ಬೇಡವೆಂದಾದರೆ ಹೇಳಿ ಹೋಗು ಕಾರಣ ಕಂಡ ಕನಸುಗಳಿಗೆ ರಂಗು ಬಳಿದು ರೆಕ್ಕೆ ಮೂಡಿಸಿದವನು ನೀನು ನನ್ನ ಸಾಂಗತ್ಯವೇ ಇ‌ಷ್ಟವಿಲ್ಲವೆಂದಾದರೆ ಹೇಳಿ ಹೋಗು ಕಾರಣ ದಿಕ್ಕು ಬದಲಿಸಿದ ನಿನ್ನ ನಿಗೂಢ ನಡೆ ಊಸರವಳ್ಳಿಯನ್ನು ನೆನಪಿಸಿದೆ ನನ್ನ ಸಂಗವೇ ಬೇಡದ […]

ಕಾವ್ಯಯಾನ

ಮೌನ ಪ್ರತಿಭಾ ಹಳಿಂಗಳಿ ನಾ ಹೊದ್ದಿರುವೆ ಮೌನದ ಕಂಬಳಿಯನು ಉಸಿರು ಕಟ್ಟಿದಂತಿದೆ ಒಳಗೊಳಗೆ ಜೋರಾಗಿ ಕಿರುಚಬೇಕೆಂದಿರುವೆ ಸರಿಪಡಿಸಿಕೊಳ್ಳುತ ಗಂಟಲನ್ನು. ಒಳಗೂ,ಹೊರಗೂ ತಾಕಲಾಟ ತರತರನಾದ ಭಾವಗಳ ಎರಿಳಿತ ಮನದ ಕದ ತಟ್ಟುತಿರಲು. ಅತ್ತು ಸುಮ್ಮನಾಗುವೆ ಒಮ್ಮೆ ಜಗದ ಆಗು,ಹೋಗುಗಳಲ್ಲಿ ಮಂಡಿ ಉರಿ ಕುಳಿತಿರಲೂ ಬಂದು ನನ್ನ ಮುಂದೆ. ಶಬ್ದವೂ ನಿಲುಕುತ್ತಿಲ್ಲ ತಲೆಯೆತ್ತಿ ನೋಡಬೇಕೆನಿಸಿತು ಒಮ್ಮೆ. ನೋಡಲಾರೆನು ಎಂದುಸುರಿತು ಹುದುಗಿಸುತ ತಲೆ ಕಂಬಳಿಯೊಳಗೆ ಮರೆಯಲಾರದೆ ಮೌನ *********

ಕಾವ್ಯಯಾನ

ಕೋಗಿಲೆ ಸುಜಾತಾ ಗುಪ್ತಾ ಮಾಮರದ ಕೊಗಿಲೆಯೇ ಒಲವಿನ ಯಾವ ಭಾವವಿಲ್ಲಿ ಇಹುದೆಂದು.. ಕೊರಳೆತ್ತಿ ರಾಗಾಲಾಪಿಸುವೆ ಏತಕೀ ವ್ಯರ್ಥಾಲಾಪನೆ.. ಇನಿಯನಾ ಬಾಹುಬಂಧನದಲ್ಲಿ ಜಗಮರೆತು ನಾನಿರಲು ಅಂದು ನಿನ್ನ ಕುಹೂ ಕುಹೂ ರಾಗಕೆ ನನ್ನ ಮನ ಪಲ್ಲವಿ ಹಾಡಿತ್ತು.. ಇನಿಯ ಸನಿಹದಲಿರಲಂದು ಜೀವನದೆ ನಾದಮಯ ಉಸಿರಿರಲು.. ನಿನ್ನ ಕಂಠದಾ ಸಿರಿ ಆಗಿತ್ತು ನನ್ನೆದೆಗೆ ಒಲವಿನ ರಾಗಸುಧೆ.. ಇಂದು ನೀನೂ ನಾನೂ ಒಂಟಿ ಪ್ರೇಮ ಯಾನದೆ.. ಪುರ್ರೆಂದು ಹಾರಿಹೋಯಿತೇನು ನಿನ್ನೊಲವಿನ ಜೋಡಿ,ಭರಿಸದೆ ಆಲಾಪಿಸುತಿರುವೆಯಾ ಈ ವಿರಹ ಗೀತೆ.. ನಿನ್ನೀ ಕಂಠದಿಂದ ವಿರಹಗೀತೆ […]

ಕಾವ್ಯಯಾನ

ಬಂಧಿ ನಾನಲ್ಲ ವೀಣಾ ರಮೇಶ್ ನಿನ್ನ ನೆನಪುಗಳೇ ನನ್ನ ಬಂಧಿಸಿರುವಾಗ ಈ ಗ್ರಹಬಂಧನ ನನ್ನನೇನೂ ಕಾಡಲಿಲ್ಲ ಹುಡುಕುವ ಪದಗಳು ಬಾವನೆಗಳಲೇ ಬಂಧಿಸಿರುವಾಗ ನಾ ಬಂಧಿ ಅನ್ನಿಸಲಿಲ್ಲ ಎದೆಯ ಬಡಿತದ ಪ್ರತಿ ಸದ್ದಲ್ಲೂ ಕಾವಲಿರಿಸಿದ,ನಿನ್ನುಸಿರು ಈ ಗ್ರಹಬಂಧನ ನನಗೆ ಹಿಂಸೆ ಅನ್ನಿಸಲಿಲ್ಲ ನಿನ್ನ ನೆನಪುಗಳೇ ನನ್ನ ಜೊತೆಯಿರುವಾಗ ಪ್ರತಿ ಮೂಲೆಗೂ ನನ್ನ ಕರೆದೊಯ್ಯುವಾಗ ನಾ ಬಂಧಿ ಅಂತ ಅನ್ನಿಸಲಿಲ್ಲ ******

ಕಾವ್ಯಯಾನ

ಅಸ್ವಸ್ಥ ಅಭಿಪ್ರಾಯ –ನೂರುಲ್ಲಾ ತ್ಯಾಮಗೊಂಡ್ಲು ವಟಗುಡುವ ಕಪ್ಪೆಗಳಂತಿರುವ ಕೆಲ ಮೂರ್ಖ ಆಂಕರರು; ನೋಟಿನಲಿ ಮೈಕ್ರೊ ಚಿಪ್ಪುಕಂಡುಕೊಂಡ ವಿಜ್ಞಾನ ದೇವಿ ಪುರುಷರು ! -ಎಂದಿನಂತೆ ವಟಗುಡುವುದೇ ಅವರ ಕೆಲಸವೆಂದು ನಾನೂ ಸುಮ್ಮನಿರಲಾರದೆ ಕಪ್ಪಗೆ ಜಿನುಗುವ ಬಿಸಿಲು ಮಳೆಯ ಹಾಗೆ ಒಂದೆರಡು ಕವಿತೆಯ ತುಣುಕುಗಳನ್ನು ಹಾಳೆಯ ಮೇಲೆ ಹರಿಸುತ್ತೇನೆ ನನಗೆ ಗೊತ್ತಿದೆ ಮತ್ತೆ ಎಲ್ಲರಿಗೂ ಗೊತ್ತಿರುವ ವಿಷಯವೇ ; ಈ ಶತಮಾನದ ಪೆಂಡಮಿಕ್ ರೋಗ ! ‘ಕೊರೊನಾ’ ಚೈನಾದಿಂದ ವಕ್ಕರಿಸಿದ್ದೆಂದು ಆದರೆ , ಅದು ನಮ್ಮ ದೇಶದ ಸರಹದ್ದುಗಳನ್ನು ದಾಟಿದ್ದು […]

ಕಾವ್ಯಯಾನ

ವಿಧಾಯ ಹೇಳುತ್ತಿದ್ದೇವೆ ದೇವವರ್ಮ ಮಾಕೊಂಡ(ದೇವು) ಮಧುರ ಸ್ಪರ್ಷವಿತ್ತ ನೆನಪುಗಳು ಮುಳುಗುತ್ತಿವೆ ಕಣ್ಣುಗಳ ಮುಂದೆ ಹಾದು ಹೋಗುತ್ತಿವೆ ದಿನ ದಿನ ಕಳೆದ ಘಟನೆಗಳು ಭಯವಿದೆ ನನಗೀಗ ನೂರಾರು ವರುಷಗಳಿಂದ ಪಕ್ಕೆಲುಬುಗಳಲಿ ಬಚ್ಚಿಟ್ಟಿದ್ದ ನೆನಪುಗಳು ಅಭದ್ರಗೊಳ್ಳುತ್ತಿವೆ ಎಂದು ಹೇರಳವಾಗಿರುವ ಸಿಡಿಲು ಮಳೆ ಹನಿಗಳಿಂದ ನಾನು ಏಕಾಂಗಿಯಾಗಿದ್ದೇನೆ ಸ್ವರ್ಗದ ಹಾದೀಲಿ ದುಃಖಗಳ ಗುರುತ್ವಾಕರ್ಷಣೆಯ ತುದಿಗೆ ಒರಗಿಕೊಂಡು ನಾನೀಗ ಕಳೆದು ಹೋದ ಜೋತಿರ್ವರ್ಷಗಳ ಮೆಲಕು ಹಾಕುತ್ತ ನಿಂತಿರುವೆ ಲಿಖಿತ ಡೈರಿಗಳು ಶೀರ್ಷಿಕೆ ರಹಿತ ಪದ್ಯಗಳು ರಾತ್ರಿ ಮಂಡಿಸಿದ ಕನಸುಗಳು ಕಳೆದುಕೊಂಡು ಬರಿ ಅರೆಬರೆ […]

ಕಾವ್ಯಯಾನ

ಆಸ್ಪತ್ರೆಗಳು ಸಿ ವಾಣಿ ರಾಘವೇಂದ್ರ ರೋಗಗಳ ಭೀತಿ ಮನ-ಮನೆಗಳಲ್ಲಿ ಆಸ್ಪತ್ರೆಗಳಲ್ಲಿ ಮೂರು ನಾಲ್ಕು ರೋಗಗಳು ನೂರಾರು ರೋಗಿಗಳಲ್ಲಿ ಬಿಡದು ರೋಗಗಳು ಮೊಲೆ ಹಾಲುಗಳನ್ನು ನವಜಾತ ಶಿಶುಗಳನ್ನು ಎಲ್ಲ ಕಲೆತ ಜಗದ ವೈದ್ಯರು ಒಟ್ಟಾಗಿ ಚಿಕಿತ್ಸೆ ನೀಡಿದರೂ ಮತ್ತಷ್ಟು ಅಸಾಧ್ಯ ರೋಗಗಳು ರೋಗ ನಾಶವಾಗುವ ತನಕ ಆಸ್ಪತ್ರೆಗಳು ರೋಗಿ ನಾಶವಾಗುವ ತನಕ ರೋಗಗಳು *****

Back To Top