ಕಾವ್ಯಯಾನ

ಕೋಗಿಲೆ

green peacock feather

ಸುಜಾತಾ ಗುಪ್ತಾ

ಮಾಮರದ ಕೊಗಿಲೆಯೇ
ಒಲವಿನ ಯಾವ ಭಾವವಿಲ್ಲಿ
ಇಹುದೆಂದು..
ಕೊರಳೆತ್ತಿ ರಾಗಾಲಾಪಿಸುವೆ
ಏತಕೀ ವ್ಯರ್ಥಾಲಾಪನೆ..

ಇನಿಯನಾ ಬಾಹುಬಂಧನದಲ್ಲಿ
ಜಗಮರೆತು ನಾನಿರಲು ಅಂದು
ನಿನ್ನ ಕುಹೂ ಕುಹೂ ರಾಗಕೆ
ನನ್ನ ಮನ ಪಲ್ಲವಿ ಹಾಡಿತ್ತು..

ಇನಿಯ ಸನಿಹದಲಿರಲಂದು
ಜೀವನದೆ ನಾದಮಯ
ಉಸಿರಿರಲು..
ನಿನ್ನ ಕಂಠದಾ ಸಿರಿ ಆಗಿತ್ತು
ನನ್ನೆದೆಗೆ ಒಲವಿನ ರಾಗಸುಧೆ..

ಇಂದು ನೀನೂ ನಾನೂ ಒಂಟಿ
ಪ್ರೇಮ ಯಾನದೆ..
ಪುರ್ರೆಂದು ಹಾರಿಹೋಯಿತೇನು
ನಿನ್ನೊಲವಿನ ಜೋಡಿ,ಭರಿಸದೆ
ಆಲಾಪಿಸುತಿರುವೆಯಾ ಈ ವಿರಹ ಗೀತೆ..

ನಿನ್ನೀ ಕಂಠದಿಂದ ವಿರಹಗೀತೆ
ನಾ ಕೇಳಲಾರೆ..
ಒಲವಿನ ಖಜಾನೆಯ ಮುತ್ತುಗಳ
ನಾ ಹೊರ ಚೆಲ್ಲಿದರೆ ಎಂದೂ..
ಶೂನ್ಯತೆಯಲಿ ನಾ ಭವ್ಯತೆಯ
ಸೃಷ್ಟಿಸಲಾರೆ..

ಶ್ರುತಿ ತಪ್ಪಿದ ವಿರಹಗೀತೆ ನಾ ಒಲ್ಲೆ
ಹೇ ಕೋಗಿಲೇ ಸಾಕು ಮಾಡು
ಈಗಲೇ..
ನೀ ಕಣ್ಮರೆಯಾಗಿ ಹೋಗೇ
ಕೂಡಲೇ..
ಮರುಕಳಿಸದಿರಲೆನ್ನ ಪ್ರೇಮಭಾವ…

***************************

Leave a Reply

Back To Top