ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೆಕ್ಕವಿಟ್ಟವರಿಲ್ಲ..

Abstract Paintings Archives - Signet Contemporary Art

ಮಧುಸೂದನ ಮದ್ದೂರು

ಭೂತಗನ್ನಡಿಯಲಿ
ಇತಿಹಾಸ
ಗರ್ಭ ಕೆದಕಿದಾಗ
ಕಂಡುಂಡ
ಸತ್ಯಗಳು
ಮಿಥ್ಯೆಗಳವೆಷ್ಟೋ
ಲೆಕ್ಕವಿಟ್ಟವರಿಲ್ಲ..

ರಾತ್ರಿ ರಾಣಿಯರ ಪಲ್ಲಂಗದಲ್ಲಿ
ಕರಗಿದ ಸಾಮ್ರಾಜ್ಯಗಳೆಷ್ಟೋ ?
ಉರುಳಿದ ಕೋಟೆ ಕೊತ್ತಲಗಳೆಷ್ಟೋ?
ಸಾಮ್ರಾಜ್ಯ ಮುಕುಟ ಮಣಿಗಳೆಷ್ಟೋ?
ತರಗಲೆಯಾದ ತಲೆಗಳೆಷ್ಟೋ?
ಲೆಕ್ಕವಿಟ್ಟವರಿಲ್ಲ…

ಮಣ್ಣಿನಾಸೆಯ ಹಪಹಪಿಕೆಯಲಿ
ಹರಿದ ರಕುತದ ಕಾಲುವೆಗಳೆಷ್ಟೋ?
ಆ ಕಾಲುವೆಗಳಲ್ಲಿ
ಮುಗಿಲು ಮುಟ್ಟಿದ ವಿಧವೆಯರ ಗೋಳಿನ
ಕಣ್ಣೀರ ಉಪ್ಪು ಕದಡಿ
ಹರಿದ ನದಿಗಳೆಷ್ಟೋ?
ಉಪ್ಪುಪ್ಪು ಕಡಲುಗಳೆಷ್ಟೋ?
ಲೆಕ್ಕವಿಟ್ಟವರಿಲ್ಲ….

ಅಂಗವಿಹಿನರಾದವರ
ಆರ್ತನಾದ
ನಿರ್ವಂಶವಾಗಲೆಂಬ
ಹಿಡಿಶಾಪವಿಟ್ಟು
ಹೂಳಿಟ್ಟು
ಎರಚಿದ ದೂಳಿನ
ಗುಡ್ಡೆ ಗಳೆಷ್ಟೋ
ಲೆಕ್ಕವಿಟ್ಟವರಿಲ್ಲ…

ಹೆಣ್ಣು ಹೊನ್ನು ಮಣ್ಣಿನ
ಮಾಯೆಯ ಪರಿಧಿಯಲ್ಲಿ
ಕಾಲನ ತೆಕ್ಕೆಗೆ ನಿಲುಕದ
ಇತಿಹಾಸದ ಪುಟಗಳೆಷ್ಟೋ..?
ಕಣ್ಣಾಲಿಗೆ ನಿಲುಕುತ್ತಿಲ್ಲ..
ನಿಲುಕುವುದೂ ಇಲ್ಲ….

******

About The Author

Leave a Reply

You cannot copy content of this page

Scroll to Top