ಕಾವ್ಯಯಾನ

ಮೌನ

Woman Wearing White Blouse Looking at Side

ಪ್ರತಿಭಾ ಹಳಿಂಗಳಿ

ನಾ ಹೊದ್ದಿರುವೆ ಮೌನದ
ಕಂಬಳಿಯನು
ಉಸಿರು ಕಟ್ಟಿದಂತಿದೆ
ಒಳಗೊಳಗೆ

ಜೋರಾಗಿ ಕಿರುಚಬೇಕೆಂದಿರುವೆ
ಸರಿಪಡಿಸಿಕೊಳ್ಳುತ ಗಂಟಲನ್ನು.

ಒಳಗೂ,ಹೊರಗೂ ತಾಕಲಾಟ
ತರತರನಾದ ಭಾವಗಳ
ಎರಿಳಿತ ಮನದ ಕದ
ತಟ್ಟುತಿರಲು.

ಅತ್ತು ಸುಮ್ಮನಾಗುವೆ ಒಮ್ಮೆ
ಜಗದ ಆಗು,ಹೋಗುಗಳಲ್ಲಿ
ಮಂಡಿ ಉರಿ ಕುಳಿತಿರಲೂ
ಬಂದು ನನ್ನ ಮುಂದೆ.

ಶಬ್ದವೂ ನಿಲುಕುತ್ತಿಲ್ಲ
ತಲೆಯೆತ್ತಿ ನೋಡಬೇಕೆನಿಸಿತು ಒಮ್ಮೆ.

ನೋಡಲಾರೆನು ಎಂದುಸುರಿತು ಹುದುಗಿಸುತ
ತಲೆ ಕಂಬಳಿಯೊಳಗೆ
ಮರೆಯಲಾರದೆ ಮೌನ

*********

Leave a Reply

Back To Top