ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಂಧಿ ನಾನಲ್ಲ

ವೀಣಾ ರಮೇಶ್

ನಿನ್ನ ನೆನಪುಗಳೇ ನನ್ನ
ಬಂಧಿಸಿರುವಾಗ
ಈ ಗ್ರಹಬಂಧನ ನನ್ನನೇನೂ
ಕಾಡಲಿಲ್ಲ

ಹುಡುಕುವ ಪದಗಳು
ಬಾವನೆಗಳಲೇ
ಬಂಧಿಸಿರುವಾಗ
ನಾ ಬಂಧಿ ಅನ್ನಿಸಲಿಲ್ಲ

ಎದೆಯ ಬಡಿತದ ಪ್ರತಿ
ಸದ್ದಲ್ಲೂ
ಕಾವಲಿರಿಸಿದ,ನಿನ್ನುಸಿರು
ಈ ಗ್ರಹಬಂಧನ
ನನಗೆ ಹಿಂಸೆ ಅನ್ನಿಸಲಿಲ್ಲ

ನಿನ್ನ ನೆನಪುಗಳೇ ನನ್ನ
ಜೊತೆಯಿರುವಾಗ
ಪ್ರತಿ ಮೂಲೆಗೂ ನನ್ನ
ಕರೆದೊಯ್ಯುವಾಗ
ನಾ ಬಂಧಿ ಅಂತ ಅನ್ನಿಸಲಿಲ್ಲ

******

About The Author

Leave a Reply

You cannot copy content of this page