ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹನಿಗಳು

Pepperoni Pizza Burger Bomba Recipe | Jeff Mauro | Food Network

ಬಸವರಾಜ ಕಾಸೆ

ಅವಳ ಕೈಗುಣ

ಕೇಳಿ ತಿಳಿದು ಕಟ್ಟಿಕೊಂಡೆ
ಮಾಡಿ ಅವಳ ಗುಣಗಾನ!
ಆಹಾ ಎಂತಹ ನಶೆ
ಕಂಡು ಅವಳ ಕೈಗುಣ!!!

ಸಂಜೆ ಮಿಕ್ಸ್ ಮಾಡಿ ಕೊಡುವಳು
ಎಣ್ಣೆಯೊಂದಿಗೆ ಸೋಡಾ!!
ರುಚಿ ಹೇಗಿದೆ ಎಂದು ಪರೀಕ್ಷಿಸಿ!!!

ಪಿಜ್ಜಾ ಬರ್ಗರ್

ಕೊಡಿಸದಿದ್ದರೂ ಪರವಾಗಿಲ್ಲ
ಪಿಜ್ಜಾ ಬರ್ಗರ್ ಸ್ಯಾಂಡವಿಚ್!!!
ಕೊಡಿಸಿದರೆ ಸಾಕೆಂದಳು
ಲಿಪಸ್ಟಿಕ್ ಕ್ರೀಮ್ ಬಿವಟಿ ಕಿಟ್!!!

ಅಮಾಯಕಿ

ಗುಟ್ಕಾ ಸಿಗರೇಟು ಎಣ್ಣೆ
ಏನೆಲ್ಲಾ ಬಿಡಿಸಿದಳು ನಲ್ಲೆ!
ಹುಚ್ಚು ಪ್ರೀತಿಯ ಅಡ್ಡ ಪರಿಣಾಮ!!

ಜೇಬಲ್ಲಿ ಯಾವುದಕ್ಕೂ ಕಾಸಿಲ್ಲದಂತೆ ಮಾಡಿದಳು ಅಮಾಯಕಿ!!!

ಸಿಂಗಲ್ ಸ್ಟೇಟಸ್

ಮಗುವಾದರೂ ಒಂದು
ಸಿಂಗಲ್ ಎಂದೇ ಇದೆ
ಇಂದಿಗೂ ನನ್ನ ಸ್ಟೇಟಸ್!
ನಿನ್ನ ಮುಸುಡಿಗೆ
ಈಗಲೂ ಯಾವಳು ಬೀಳಲ್ಲ
ಚೇಂಜ್ ಮಾಡೆಂದಳು
ಮಿಂಗಲ್ ಆದಾಕೆ!!!

***********

About The Author

1 thought on “ಕಾವ್ಯಯಾನ”

Leave a Reply

You cannot copy content of this page