Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ವಸಂತನಾಗಮನ ವಿಜಯ ನಿರ್ಮಲ ವಸಂತನಾಗಮನ ವನರಾಣಿ ನವಕನ್ಯೆಯಾಗಿಹಳು ಹರೆಯದಿ ಮೈದುಂಬಿ ನಗುತಿಹಳು ಭೂದೇವಿ ಸಂಭ್ರಮದಿ ನಲಿದಿಹಳು ವನಬನಗಳೆಲ್ಲ ಹೊಸ ಚಿಗುರು ತುಂಬಿ ಗಿಡಮರಗಳೆಲ್ಲ ಬಣ್ಣ ಬಣ್ಣದ ಹೂ ಗುಚ್ಛದಲಿ ತುಂಬಿ ತುಳುಕುತಿವೆ ಮಾವು ಬೇವು ಜೊತೆಯಾಗಿ ತೋರಣ ಕಟ್ಟಿ ವನವನೆಲ್ಲ ಸಿಂಗರಿಸುತಿದೆ ಮಾಮರದಂದಕೆ ಮನಸೋತ ಕೋಗಿಲೆ ಮಧುರವಾಗಿ ಕುಹೂ ಕುಹೂ ಎನುತಿದೆ ಕಾನನವೆಲ್ಲ ಹಚ್ಚ ಹಸುರಾಗಿ ಸೌಂದರ್ಯ ತುಂಬಿಕೊಂಡು ಹೊಸ ಗಾನಕೆ ತಲೆದೂಗಿವೆ ಹಕ್ಕಿ ಪಕ್ಷಿಗಳು ಇಂಪಾದ ದನಿಯಲಿ ಕೂಗಾಡುತ ತಮ್ಮ ಗೂಡುಗಳಲಿ ಸಂತಸದಿ ಮೆರೆಯುತ ಹಬ್ಬಕೆ […]

ಕಾವ್ಯಯಾನ

ಕಾಮದಹನ ಗೌರಿ. ಚಂದ್ರಕೇಸರಿ ಕಾಮ ದಹನ ಒಡಲು ಬರಿದು ಮಾಡಿಕೊಂಡ ಕಣ್ಣೀರ ಕಡಲು ಬತ್ತಿಸಿಕೊಂಡ ನಿಟ್ಟುಸಿರಲ್ಲೇ ನೋವ ನುಂಗಿಕೊಂಡವಳ ಜೋಳಿಗೆಗೆ ನ್ಯಾಯ ಬಂದು ಬಿದ್ದಿದೆ ಅಂತೂ ಕಾಮ ದಹನವಾಯಿತು. ಏಳು ವರುಷಗಳ ಹೋರಾಟ, ಗೋಳಾಟ ಸುತ್ತಿ, ಸವೆಸಿದ ಮೆಟ್ಟುಗಳೆಷ್ಟೋ ಹತ್ತಿ ಇಳಿದ ಮೆಟ್ಟಿಲುಗಳೆಷ್ಟೋ ಕರುಣೆ ಬದುಕಿದೆ ಇನ್ನೂ ಕಪ್ಪು ಪಟ್ಟಿಯ ಹಿಂದಿರುವ ಕಣ್ಣುಗಳಲಿ                   ಅಂತೂ ಕಾಮ ದಹನವಾಯಿತು. ಬಾಯ ಪಸೆ ಇಂಗುವವರೆಗೂ ಎದೆಯ ಗೂಡ ಗಾಳಿ ಇರುವವರೆಗೂ ನ್ಯಾಯಕ್ಕಾಗಿ ಅಂಗಲಾಚಬೇಕು ದಶಕಗಳವರೆಗೆ ಕಾಯಬೇಕು ಅಂತೂ ಕಾಮ ದಹನವಾಯಿತು […]

ಕಾವ್ಯಯಾನ

ಕವಿತೆಯದಿನಕ್ಕೊಂದು ಕವಿತೆ ರೇಖಾ ವಿ.ಕಂಪ್ಲಿ ಕವಿತೆ ನಿನಗೊಂದು ಖಲಾಮು ಇದ್ದರೆ ಸಾಕೆ ಇಲ್ಲ ಕವಿ ಬೇಕೇ? ಬರಿ ಕವಿ ಇದ್ದರೆ ಸಾಕೆ ಇಲ್ಲ ಭಾವನೆ ಬೇಕೇ? ಭಾವನೆಯೊಂದಿದ್ದರೆ ಸಾಕೆ ಇಲ್ಲ ಭಾಷೆ ಬೇಕೇ? ಭಾಷೆ ಒಂದು ಇದ್ದರೆ ಸಾಕೆ ಬರವಣಿಗೆ ಬೇಕೇ? ಬರಿ ಬರವಣಿಗೆ ನಿನಗೆ ಸಾಕೆ ಇಲ್ಲ ಓದುಗನೊಬ್ಬ ಬೇಕೇ? ಓದುಗನೊಬ್ಬ ಇದ್ದರೆ ಸಾಕೆ? ಕವಿತೆ ಕೊನೆಯಲಿ ಹಾಡಿ ಹೇಳಿತು ಮೆಲ್ಲಗೆ ಎಲ್ಲವು ಬೇಕು ಎನಗೆ..

ಕಾವ್ಯಯಾನ

ವೈರಸ್ ಅಶ್ವಥ್ ಏನೋ ಬಲ್‌ಶಾಲಿ ಅನ್ಕೊಂಡ್‌ಬುಟ್ಟು ಬೇಕಾದ್ದೆಲ್ಲ ಮಾಡ್ಕೊಂಡ್‌ಬುಟ್ಟು ಭೂತಾಯ್‌ ಮುಂದ್‌ ಗತ್ತು ಗಮ್ಮತ್ತು ವೈರಸ್‌ ಬಂತು ಮಂಡಿಯೂರು ಅಂತು ನವರಂಗೀ ಮಾಧ್ಯಮ್‌ಗಳಾಗೆ ಪಟತೆಕ್ಕಂಡ್‌ ವಾಲಾಡುವಾಗೇ ಕಣ್ಣಿಗ್‌ ಕಾಣ್ದಿರ್ ಅಣುವೊಂದ್‌ ಬಂತು ಕೈಕಾಲ್‌ ಕಟ್ಕಂಡ್‌ ಮನೆಲ್ಕೂರ್‌ ಅಂತು ಜಗತ್ತೆಲ್ಲಾ ಚಿಂದಿ ಚೂರಾದ್ರೂನೇ ಕಣ್ಣಾಗ್‌ ಕಣ್ಣಿಟ್‌ ನೋಡೋದಾಗ್ದೇನೆ ಕಿಂಚಿತ್‌ ಅನ್ನೋ ವೈರಸ್ಸೇ ಬರ್‌ಬೇಕಾತು ನಮ್‌ ಸಂಬಂಧ್‌ಗೋಳ್‌ ಏನಂತ ತಿಳ್‌ಸ್ತು ನಮ್‌ ಕೈತೊಳ್ಕೊಂಡ್ರಷ್ಟ್‌ ಸಾಕಾಗಲ್ಲ ಮನ್ಸ್‌ ಉಜ್ಜುಜ್ಜಿ ತೊಳ್ಕೊಬೇಕೆಲ್ಲ ವದ್ದ್‌ ವೋಡ್ಸೋಕ್‌ ಮುಂಚೆ ವೈರಸ್ಸನ್ನ ಎತ್ತ್‌ ಹಿಡೀಬೇಕಾಗೈತೆ ಮನ್ಸತ್ವಾನಾ ********************

ಕಾವ್ಯಯಾನ

ಕವಿತೆಯ ದಿನಕ್ಕೊಂದು ಕವಿತೆ ನನ್ನೊಳಗೊಂದು ನಾನು ಅಂಜನಾ ಹೆಗಡೆ ನಾ ಹುಟ್ಟುವಾಗಲೇ ನನ್ನೊಂದಿಗೆ ಹುಟ್ಟಿದ ಕವಿತೆಯೊಂದು ಇದ್ದಕ್ಕಿದ್ದಂತೆ ಎದುರಿಗೆ ಬಂದು ನಿಂತಿತು ಥೇಟು ನನ್ನಂತೆಯೇ ಕಾಣುವ ಅದಕ್ಕೊಂದು ಉದ್ದನೆಯ ಬಾಲ…. ನಾ ಹೋದಲ್ಲೆಲ್ಲ ನನ್ನದೇ ವೇಗದಲ್ಲಿ ಹಿಂದೆಮುಂದೆ ಸುತ್ತುತ್ತಿತ್ತು ಬಾಲದ ಸಮೇತ ಉದ್ದಜಡೆಯ ಹೆಣ್ಣೊಂದು ಹೆಗಲೇರಿದ ಭಾರ ಅಯ್ಯೋ!! ಹೆಣ್ಣುಕವಿತೆಯೇ ಹೌದು…. ಸುಲಿದ ಬೆಳ್ಳುಳ್ಳಿಗಳನ್ನೆಲ್ಲ ಪ್ಲಾಸ್ಟಿಕ್ಕಿನ ಮೇಲಿಟ್ಟು ಜೋರಾಗಿ ಜಜ್ಜಿದೆ ಬಾಲವೂ ಅಲ್ಲಾಡಿತು ಯಾವ ಕೋಪಕ್ಕೆ ಬೆಳ್ಳುಳ್ಳಿ ಬಲಿ!! ಬಾಲ ನಕ್ಕಂತೆ ಭಾಸವಾಗಿ ಸಣ್ಣದೊಂದು ಅವಮಾನ ಈರುಳ್ಳಿಗೆ […]

ಕಾವ್ಯಯಾನ

ಕವಿತೆಯ ದಿನಕ್ಕೊಂದು ಕವಿತೆ ಸಜೀವ ಡಾ.ಗೋವಿಂದ ಹೆಗಡೆ ಕವಿತೆ ನನ್ನ ಲೋಕಕ್ಕೆ ಬಂದಾಗಿನಿಂದ ಜೊತೆಗಿದೆ ಕಿಸೆಯ ಕನ್ನಡಕ ಪೆನ್ನು ಪರ್ಸುಗಳಂತೆ ನನ್ನದಾಗಿ ಅಷ್ಟೇ ಅಲ್ಲ ಎದೆಯ ಲಬ್ ಡಬ್ ಗಳಗುಂಟ ನಾಡಿಗಳಲ್ಲಿ ಹರಿದಿದೆ ಉಸಿರ ತಿದಿಯಲ್ಲಿ ಯಾತಾಯಾತ ಆಡಿದೆ ಕಣ್ಣಾಗಿ ಕಂಡು ಕಿವಿಯಾಗಿ ಕೇಳಿ ನರಮಂಡಲದಲ್ಲಿ ಗ್ರಹಿಸಿ ಸ್ಪಂದಿಸಿ ನನ್ನ ಭಾಗವೇ ಬೇಲಿಸಾಲಿನ ಹೂಗಳಿಗೆ ಕೈ ಆಡಿಸಿ ನಕ್ಕು ಹಕ್ಕಿಗಳ ಪಕ್ಕ ಹಾರಿ ತಾರೆಗಳಿಗೆ ಕಣ್ಮಿಟುಕಿಸಿ ಅಲೆ-ದಂಡೆಗಳಗುಂಟ ಅಲೆದು ಮರುಳು ಮನೆ ಕಟ್ಟಿ ಕುಣಿದು ಮೈಪಡೆದ ಕವಿತೆ […]

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಅರಳು ಹುರಿದಂತೆ ನುಡಿವವರೆದುರು ನಾನಾಗಿರುವೆ ಉಗ್ಗ ಅಣಕಿಸಿದರು ಅವರೆಲ್ಲ ನನ್ನನ್ನೀಗ ನಾನಾಗಿರುವೆ ಮೂಕ ಸ್ತುತಿ-ನಿಂದೆಗಳ ಮೀರಿ ಮುಂದೆ ಹೋಗಬೇಕು ಬದುಕಲು ಒಳದನಿಯ ಹೊರತೆಲ್ಲ ಸ್ವರಗಳಿಗೆ ನಾನಾಗಿರುವೆ ಬಧಿರ ಕತ್ತಲನ್ನೇ ಬೆಳೆದರು ಅವರು ನಡುವೆ ನೀನೊಂದು ಹಣತೆ ಒಳಿತಾಯಿತು ಜಡ ಜಂಜಡಗಳಿಗೆ ನಾನಾಗಿರುವೆ ಕುರುಡ ತಮ್ಮ ದಾರಿಯಲ್ಲೇ ಎಲ್ಲರೂ ಸಾಗಬೇಕೆಂಬ ವರಾತವೇಕೆ ದಾರಿ ಕಡಿಯುವೆ ನಾನೇ, ಉಳಿದಂತೆ ನಾನಾಗಿರುವೆ ಹೆಳವ ನನ್ನ ಕತ್ತಿನ ಪಟ್ಟಿ ಹಿಡಿದರೇನು ಒಲ್ಲದುದ ಮಾಡೆಂದು ‘ಜಂಗಮ’ ಸಾಕ್ಷಿ,ಅಹಿತವೆಸಗದಂತೆ ನಾನಾಗಿರುವೆ ಚೊಂಚ […]

ಕಾವ್ಯಯಾನ

ಗಝಲ್ ಶಂಕರಾನಂದ ಹೆಬ್ಬಾಳ ಬಡತನದ ಬವಣೆ ನೋವು ನಲಿವುಗಳಲಿ ಕಂಡೆ ಒಳಿತು ಕೆಡಕುಗಳ ನಿತ್ಯಸತ್ಯವ ಆಂತರ್ಯದಲಿ ಕಂಡೆ….!!! ಬಣ್ಣನೆಗೆ ನಿಲುಕದ ಮಾರ್ಮಿಕ ಕಟುಸತ್ಯಗಳ ಜೊತೆ ಜೀವಂತ ಹೆಣದಂತೆ ಬದುಕಿ ಇರುವವರಲಿ ಕಂಡೆ…!!! ಸೋತು ಸೊರಗಿ ಮೂಕವಾದ ಬದುಕಿನಲಿ ಸುಕ್ಕುಗಟ್ಟಿದ ಚರ್ಮ ಬತ್ತಿದ ಬೆವರಿನಲಿ ಕಂಡೆ…!!! ಹರಿದ ಚಿಂದಿ ಬಟ್ಟೆಗಳ ನಡುವೆ ನಾಳೆ ಶ್ರೀಮಂತನಾಗುವೆ ಎನ್ನುವ ಕನಸ ಹೊತ್ತುಕೊಂಡಿರುವ ಬಡವರಲಿ ಕಂಡೆ…!!! ಕೊನೆತನಕ ದುಡಿದರು ಬಡತನ ದೂರಾಗಲಿಲ್ಲ ಎಂಬ ಅಭಿನವನ ಮಾತು ಸುಳ್ಳಲ್ಲ ಎನ್ನುವರ ಮನದಲಿ ಕಂಡೆ…!!! ************

ಕಾವ್ಯಯಾನ

ನನ್ನೊಳಗೆ ನೀನಿರುವಾಗ… ಬಿದಲೋಟಿ ರಂಗನಾಥ್ ನನ್ನೊಳಗೆ ನೀನಿರುವಾಗ ಭಯದ ಬೆಂಕಿಯನ್ನು ಹಾರುವುದು ಕಷ್ಟವೇನಲ್ಲ ಸುಡುವ ನೆಲದ ತಂಪಿಗೆ ನೀನೆ ಬರೆದ ಪ್ರೇಮ ಪತ್ರವಿರುವಾಗ ಕಾಮನ ಬಿಲ್ಲು ಮಾತಾಡುವುದು ಕಷ್ಟವೇ ಅಲ್ಲ ಪರಿಷೆಯಲ್ಲು ಧ್ಯಾನ ನೇರಗೆರೆಯ ಮೇಲೆ ನಿಂತಿರುವಾಗ ಮನಸು ಯಾವ ಮೂಲೆಯಿಂದ ಪಲ್ಲಟಗೊಳ್ಳುವುದು ಹೇಳು ? ನಗುವ ಚಂದಿರನ ಮುದ್ದಿಸಿದ ನೀನು ಪ್ರೇಮದ ಹೂವಿನ ಸುಗಂಧವ ಮೂಸದೇ ಹೋದೆ ನಿನ್ನೊಳಗಿನ ದಾರಿಯ ಮೇಲೆ ಬೆಳೆದ ಮುಳ್ಳುಗಳು ಚುಚ್ಚುವಾಗ ಜಾತಿಯ ಬಣ್ಣಕೆ ಕಣ್ಣು ಮಂಜಾಗಿದ್ದು ಹೃದಯದ ಕಣಿವೆಗಳಲ್ಲಿ ಕಂದರ […]

ಕಾವ್ಯಯಾನ

ಅವರು ಒಪ್ಪುವುದಿಲ್ಲ. ! ವಿಜಯಶ್ರೀ ಹಾಲಾಡಿ ಕಾಫಿಯಲ್ಲಿ ಕಹಿ ಇರಬೇಕುಬದುಕಿನ ಹಾಗೆ ಮುತ್ತುಗದ ಹೂ ರಸಕುಡಿವ ಮಳೆಹಕ್ಕಿರೆಕ್ಕೆ ಸುಟ್ಟುಕೊಳ್ಳುತ್ತದೆ ಬೂದಿಯಾದ ದಿನಗಳಆಲಾಪಿಸುವ ಇರುಳಹಕ್ಕಿನಿರಾಳ ಕಂಡುಕೊಳ್ಳುತ್ತದೆ ದಟ್ಟ ನೋವು ಒಸರುವಅಂಟಿನ ಮರ ಯಾರಸಾಂತ್ವನಕ್ಕೂ ಕಾಯುವುದಿಲ್ಲ ಬೋರಲು ಬಿದ್ದ ಆಕಾಶಬುವಿಯ ಕಣ್ಣೀರಿಗೇನೂಕರಗಿದ್ದು ಕಂಡಿಲ್ಲ ನದಿಯಲ್ಲಿ ತೇಲಿಬಂದಹಸಿಮರ -ನಾಗರಿಕತೆಯಹೆಣವೆಂದು ಅವರು ಒಪ್ಪುವುದಿಲ್ಲ.  *********

Back To Top