ಕಾವ್ಯಯಾನ

ಅವರು ಒಪ್ಪುವುದಿಲ್ಲ. !

ವಿಜಯಶ್ರೀ ಹಾಲಾಡಿ

ಕಾಫಿಯಲ್ಲಿ ಕಹಿ ಇರಬೇಕು
ಬದುಕಿನ ಹಾಗೆ

ಮುತ್ತುಗದ ಹೂ ರಸ
ಕುಡಿವ ಮಳೆಹಕ್ಕಿ
ರೆಕ್ಕೆ ಸುಟ್ಟುಕೊಳ್ಳುತ್ತದೆ

ಬೂದಿಯಾದ ದಿನಗಳ
ಆಲಾಪಿಸುವ ಇರುಳಹಕ್ಕಿ
ನಿರಾಳ ಕಂಡುಕೊಳ್ಳುತ್ತದೆ

ದಟ್ಟ ನೋವು ಒಸರುವ
ಅಂಟಿನ ಮರ ಯಾರ
ಸಾಂತ್ವನಕ್ಕೂ ಕಾಯುವುದಿಲ್ಲ

ಬೋರಲು ಬಿದ್ದ ಆಕಾಶ
ಬುವಿಯ ಕಣ್ಣೀರಿಗೇನೂ
ಕರಗಿದ್ದು ಕಂಡಿಲ್ಲ

ನದಿಯಲ್ಲಿ ತೇಲಿಬಂದ
ಹಸಿಮರ -ನಾಗರಿಕತೆಯ
ಹೆಣವೆಂದು ಅವರು ಒಪ್ಪುವುದಿಲ್ಲ. 

*********

2 thoughts on “ಕಾವ್ಯಯಾನ

  1. Wow!!! ಚೆನ್ನಾಗಿದೆ.. ದಟ್ಟ ನೋವು ಒಸರುವ ಅಂಟಿನ ಮರ !!! ಸುಂದರವಾಗಿದೆ ಕವಿತೆ

Leave a Reply

Back To Top